ಕಾನ್ಪುರ: ವಿವಾಹಿತ ಮಹಿಳೆಯೊಬ್ಬರು ಅತ್ತೆ ಮನೆ ಮುಂದೆ ಧರಣಿ ಮಾಡುವ ಜೊತೆಗೆ ಏಣಿ ಬಳಸಿ ಅದನ್ನು ಹತ್ತಿ ಮನೆಗೆ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅತ್ತೆ ಮನೆಯವರು ಥಳಿಸಿ, ಮನೆಗೆ ಬರಲು ಬಿಡುತ್ತಿಲ್ಲ ಎಂದು ವಿವಾಹಿತ ಮಹಿಳೆ ಆರೋಪಿಸಿದ್ದಾರೆ.
ಅತ್ತೆ-ಮಾವ ಆಕೆ ಜೊತೆ ಗಲಾಟೆ ಮಾಡಿರುವ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಸಹ ಹತ್ತಿದೆ. ಇದರ ವಿಚಾರಣೆ ನಡೆಯುತ್ತಿದೆ. ವಿವಾಹಿತ ಮಹಿಳೆ ಹಲವು ತಿಂಗಳಿನಿಂದ ಅತ್ತೆಯ ಮನೆಗೆ ಬಂದಿರಲಿಲ್ಲ. ನೌಬಸ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ಹಂಸಪುರಂದ ದೀಪಿಕಾ ಚೌಹಾಣ್, ವಂಶವರ್ಧನ್ ಸಿಂಗ್ ಚೌಹಾಣ್ ಅವರನ್ನು ವಿವಾಹವಾಗಿದ್ದರು.
ಮದುವೆಯಾದ ಕೆಲವು ದಿನಗಳ ನಂತರ ಇಬ್ಬರಿಗೂ ಪರಸ್ಪರ ಹೊಂದಾಣಿಕೆಯಾಗಲಿಲ್ಲ. ಇದರಿಂದಾಗಿ ಇಬ್ಬರ ಸಂಬಂಧ ಹಳಸತೊಡಗಿದೆ. ಮತ್ತೊಂದೆಡೆ, ವರದಕ್ಷಿಣೆಗಾಗಿ ಅತ್ತೆ-ಮಾವಂದಿರು ತನಗೆ ಹಿಂಸೆ ನೀಡುತ್ತಿದ್ದರು ಮತ್ತು ಪತಿಯು ನನಗೆ ಹೆಂಡತಿಯ ಸ್ಥಾನಮಾನವನ್ನು ಎಂದಿಗೂ ನೀಡಲಿಲ್ಲ ಎಂದು ದೀಪಿಕಾ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಅತ್ತೆಯ ಮನೆಗೆ ಬರಲು ದೀಪಿಕಾ ಯತ್ನಿಸುತ್ತಿದ್ದರು. ಆದರೆ ಅತ್ತೆ ಮನೆಯವರು ಮನೆಯೊಳಗೆ ಬಿಟ್ಟುಕೊಂಡಿರಲಿಲ್ಲ. ಪತಿ ವಂಶವರ್ಧನ್ ಸಿಂಗ್ ಚೌಹಾಣ್ ಅವರು ಮದುವೆಯಾದ ದಿನದಿಂದಲೂ ಪತ್ನಿಯ ವರ್ತನೆ ಸರಿ ಇರಲಿಲ್ಲ. ಅಲ್ಲದೆ ಆತನ ಸೋದರ ಮಾವನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ ಕಾಲ್ ಮೂಲಕ ಹೆರಿಗೆ.. ಆಸ್ಪತ್ರೆಯಲ್ಲಿ ತಾಯಿ-ಮಗು ಸಾವು
ಈ ನಡುವೆ ಇವರ ವಿಚ್ಛೇದನದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕಳೆದ ಹಲವು ದಿನಗಳಿಂದ ಆಕೆ ಮನೆಗೆ ಬಂದು ನಾಟಕ ಮಾಡುತ್ತಿದ್ದಾಳೆ. ಇಂದು ಮನೆಯಲ್ಲಿ ಏಣಿ ಹಾಕಿಕೊಂಡು ಮನೆ ಹತ್ತಿದ್ದಾಳೆ. ಅಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣಗಳನ್ನು ದೀಪಿಕಾ ಕದ್ದೊಯ್ದಿದ್ದಾಳೆ ಎಂದು ವಂಶ್ ಆರೋಪಿಸಿದ್ದಾರೆ.