ಹೈದರಾಬಾದ್/ಅಮರಾವತಿ: ಮಾರ್ಗದರ್ಶಿ ಚಿಟ್ ಫಂಡ್ ಕಚೇರಿಗಳಲ್ಲಿ ಸಿಐಡಿ ನಡೆಸುತ್ತಿರುವ ತನಿಖೆಗೆ ತಡೆ ನೀಡಿ ಆಂಧ್ರಪ್ರದೇಶ ಹೈಕೋರ್ಟ್ ಇಂದು ಮಧ್ಯಂತರ ಆದೇಶ ನೀಡಿದೆ. ತನಿಖೆ ನಡೆಸಬೇಕಾದರೆ 46-ಎ ನಿಯಮವನ್ನು ಅನುಸರಿಸುವಂತೆ ಹೈಕೋರ್ಟ್ ನಿರ್ದೇಶಿಸಿತು. ಇದರ ಜೊತೆಗೆ ಕಂಪನಿಯ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡದಂತೆಯೂ ಆಂಧ್ರ ಪ್ರದೇಶದ ಸಿಐಡಿಗೆ ನ್ಯಾಯಾಲಯ ಸೂಚಿಸಿದೆ.
ಮತ್ತೊಂದೆಡೆ, ಮಾರ್ಗದರ್ಶಿ ಪ್ರಕರಣದ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸದಂತೆ ತೆಲಂಗಾಣ ಹೈಕೋರ್ಟ್ ಆಂಧ್ರಪ್ರದೇಶದ ಸಿಐಡಿಗೆ ಮೌಖಿಕ ಸೂಚನೆ ಕೊಟ್ಟಿದೆ. ಮಾರ್ಗದರ್ಶಿ ಪ್ರಕರಣದ ಕುರಿತು ಪತ್ರಿಕಾಗೋಷ್ಠಿ ನಡೆಸುವ ಅಗತ್ಯವೇನಿತ್ತು ಎಂದು ಹೈಕೋರ್ಟ್ ಸಿಐಡಿಗೆ ಪ್ರಶ್ನಿಸಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ.
ಇದೇ ವೇಳೆ, ಆಂಧ್ರ ಸರ್ಕಾರವು ಕೌಂಟರ್‌ಫೈಲಿಂಗ್ ವಿಳಂಬ ಮಾಡುತ್ತಿದೆ ಎಂಬ ವಿಚಾರವನ್ನು ಮಾರ್ಗದರ್ಶಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಆಗ ಆಂಧ್ರ ಸರ್ಕಾರದ ವಕೀಲರಿಗೆ ಕೌಂಟರ್ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತು.
ಇದನ್ನೂ ಓದಿ: Margadarsi: ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣ; ಚಿಟ್ ರಿಜಿಸ್ಟ್ರಾರ್ ನೀಡಿದ ಬಹಿರಂಗ ನೊಟೀಸ್‌ಗೆ ಹೈಕೋರ್ಟ್ ತಡೆ