ಹೈದರಾಬಾದ್ (ತೆಲಂಗಾಣ): ಛತ್ತೀಸ್‍ಗಢಕ್ಕೆ ಸೇರಿದ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಮಿಲಿಶಿಯಾ ಕಮಾಂಡರ್ನೊಬ್ಬನನ್ನು ತೆಲಂಗಾಣದ ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬಳಿ ಇದ್ದ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸ್ಫೋಟಕ ವಸ್ತುಗಳೊಂದಿಗೆ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಲು ಹೊಂಚುಹಾಕಿ ಕುಳಿತಿದ್ದನು. ಪೊಲೀಸರು ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಭದ್ರಾದ್ರಿ-ಕೋತಗುಡೆಂ ಜಿಲ್ಲೆಯ ಅಸ್ವಾಪುರಂನಲ್ಲಿ ವಾಹನ ತಪಾಸಣೆ ವೇಳೆ 25 ವರ್ಷದ ಯುವಕನನ್ನು ಪೊಲೀಸ್ ತಂಡ ಬಂಧಿಸಿದೆ ಎಂದು ತಿಳಿದು ಬಂದಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಮಿಲಿಶಿಯಾ ಕಮಾಂಡರ್ ಆಗಿ ಕೆಲಸ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಆತ ಬಾಯ್ಬಿಟ್ಟಿದ್ದಾನೆ. ಅಲ್ಲದೇ ತಾನು 4 ಜನರ ಕೊಲೆ ಮಾಡಿದ್ದು, ಕೆಲ ಸುಲಿಗೆ ಹಾಗೂ ಸ್ಫೋಟ ಕೃತ್ಯಗಳನ್ನು ನಡೆಸಿರುವ ಬಗ್ಗೆಯೂ ಮಾಹಿತಿ ನೀಡಿದ್ದಾನೆ.