ETV Bharat / bharat

ಮುಂದಿನ 3 ದಿನ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಚಳಿ ತೀವ್ರ

ರಾಷ್ಟ್ರ ರಾಜಧಾನಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ದಟ್ಟ ಮಂಜಿನಿಂದಾಗಿ ವಾಹನ ಸಂಚಾರಕ್ಕೂ ಅಡಚಣೆಯಾಗುತ್ತಿದೆ.

ಮುಂದಿನ ಮೂರು ದಿನ ಚಳಿಗೆ ನಡುಗಲಿದೆ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯ
many-states-of-north-india-including-delhi-will-experience-cold-for-the-next-three-days
author img

By

Published : Jan 16, 2023, 10:32 AM IST

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ಪ್ರದೇಶಗಳು ಈಗಾಗಲೇ ಚಳಿಗೆ ತತ್ತರಿಸಿವೆ. ಮುಂದಿನ ಮೂರು ದಿನಗಳ ಕಾಲ ಉತ್ತರದ ವಿವಿಧ ರಾಜ್ಯಗಳಲ್ಲಿ ಚಳಿ ತೀವ್ರ ಪ್ರಮಾಣದಲ್ಲಿ ಇರಲಿದೆ. ಬುಧವಾರದವರೆಗೆ ಈ ವಾತಾವರಣ ಹೀಗೆಯೇ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಜನವರಿ 18ರಂದು ಕನಿಷ್ಠ 4 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಶೀತ ಅಲೆ ನಗರಿಯಲ್ಲಿ ನಿರಂತರವಾಗಿದೆ. ದಟ್ಟ ಮಂಜಿನಿಂದಾಗಿ ಇಂದು ಉತ್ತರ ರೈಲ್ವೆ ವಿಭಾಗದಲ್ಲಿ 13 ರೈಲುಗಳು ತಡವಾಗಿ ಸಂಚಾರ ಆರಂಭಿಸಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರಾಜಸ್ಥಾನ, ಪಂಜಾಬ್​, ಹರಿಯಾಣ ಚಂಢೀಗಢ ಮತ್ತು ದೆಹಲಿಯಲ್ಲಿ ಜನವರಿ 17ರವರೆಗೆ ಚಳಿ ಮುಂದುವರೆಯಲಿದೆ. ಭಾರಿ ಚಳಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೋರಖ್​ಪುರ್​ನಲ್ಲಿ ಜನವರಿ 17ರವರೆಗೆ ಶಾಲೆಗಳನ್ನು ಮುಚ್ಚಲು ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿದೆ. ಮೀರತ್​ನಲ್ಲಿ 8ನೇ ತರಗತಿಯವರೆಗೆ ಜ. 17ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಚಂಢಿಗಢದಲ್ಲೂ ಕೂಡ 8ನೇ ತರಗತಿವರೆಗಿನ ಮಕ್ಕಳಿಗೆ ಚಳಿಗಾಲದ ರಜೆಯನ್ನು ವಿಸ್ತರಣೆ ಮಾಡಲಾಗಿದೆ.

ದಟ್ಟ ಮಂಜು: ಮುಂದಿನ ಐದು ದಿನಗಳ ಕಾಲ ದೇಶದ ವಾಯುವ್ಯ ಪ್ರದೇಶದಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದ್ದು, ಗೋಚರತೆ ಪ್ರಮಾಣ ಕಡಿಮೆ ಇರಲಿದೆ. ಪಂಜಾಬ್​, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ಮುಂದಿನ ಐದು ದಿನಗಳ ಕಾಲ ಬೆಳಗಿನ ಹೊತ್ತು ಮಂಜು ಕವಿದ ವಾತಾವರಣ ಇರಲಿದೆ. ಹಿಮಾಲಯದಲ್ಲಿನ ವಾಯುವ್ಯ ಗಾಳಿಯಿಂದ ವಾಯುವ್ಯ ಪ್ರದೇಶದಲ್ಲಿ ಕನಿಷ್ಠ ತಾಪಪಾನ 2 ರಿಂದ 4 ಡಿಗ್ರಿ ಸೆಲ್ಸಿಯಸ್​ ಇರಲಿದೆ ಎಂದು ಐಎಂಡಿ ಹೇಳಿದೆ. ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಮೈನಸ್ 1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಜನರು ಚಳಿಯಿಂದ ತತ್ತರಿಸುತ್ತಿದ್ದಾರೆ. ಪಂಜಾಬ್ ಮತ್ತು ಹರಿಯಾಣದ ಸಾಮಾನ್ಯ ರಾಜಧಾನಿಯಾದ ಚಂಡಿಗಢದಲ್ಲಿ 6.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಚಳಿಗೆ ನಡುಗಿದ ಕರ್ನಾಟಕ: ಕರ್ನಾಟಕದ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣವಿದೆ. ಬಾಗಲಕೋಟೆಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಮುಂಬೈನಲ್ಲೂ ಕೂಡ ಭಾನುವಾರ ರಾತ್ರಿ ಕನಿಷ್ಠ ತಾಪಮಾನ 13.8 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ.

ಶನಿವಾರ ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಹಿಮಪಾತ ಸಂಭವಿಸಿವೆ. ಅದೃಷ್ಟವಶಾತ್​​ ಯಾವುದೇ ಜೀವಹಾನಿ ವರದಿಯಾಗಿಲ್ಲ. ಶುಕ್ರವಾರ ಸಾಧಾರಣದಿಂದ ಭಾರಿ ಹಿಮಪಾತದ ನಂತರ 12 ಜಿಲ್ಲೆಗಳಿಗೆ ಹಿಮಪಾತದ ಎಚ್ಚರಿಕೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಿಮಾನ ಪತನಕ್ಕೂ ಮುನ್ನ ಯುಪಿ ಯುವಕನಿಂದ ಫೇಸ್‌ಬುಕ್‌ ಲೈವ್‌: ಭಯಾನಕ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.