ETV Bharat / bharat

ಮನ್ಸೂನ್​ ಹಿರೇನ್​ ಸಾವು ಪ್ರಕರಣ : ಸುನಿಲ್​ ಮಾನೆ ಮನೆ ಮೇಲೆ ಎನ್​ಐಎ ದಾಳಿ - Ambani bomb scare

ರಾಷ್ಟ್ರೀಯ ತನಿಖಾ ಸಂಸ್ಥೆ ಮನ್ಸೂನ್​ ಹಿರೇನ್​ ಸಾವು ಪ್ರಕರಣ ಸಂಬಂಧ ಬಂಧಿಸಿರುವ ಸುನಿಲ್ ಮಾನೆ ಮನೆ ದಾಳಿ ನಡೆಸಿ ಕೆಲವು ದಾಖಲೆಗಳು ಮತ್ತು ಕೆಂಪು ಬಣ್ಣದ ಕ್ರೆಟಾವನ್ನು ವಶಪಡಿಸಿಕೊಂಡಿದೆ..

sunil
sunil
author img

By

Published : Apr 26, 2021, 5:14 PM IST

ಮುಂಬೈ : ರಾಷ್ಟ್ರೀಯ ತನಿಖಾ ಸಂಸ್ಥೆ ಮನ್ಸುಖ್ ಹಿರೇನ್ ಕೊಲೆ ಪ್ರಕರಣದ ಐದನೇ ಆರೋಪಿ ಸುನಿಲ್ ಮಾನೆ ಅವರ ಮನೆ ಮೇಲೆ ದಾಳಿ ನಡೆಸಿದೆ.

ದಾಳಿ ವೇಳೆ ಎನ್ಐಎ ಟೀಂ ಕೆಲವು ದಾಖಲೆಗಳನ್ನು ಮತ್ತು ಕೆಂಪು ಬಣ್ಣದ ಕ್ರೆಟಾವನ್ನು ಮಾನೆ ಮನೆಯಿಂದ ವಶಪಡಿಸಿಕೊಂಡಿದೆ. ಕಾರಿನ ನಂಬರ್ ಪ್ಲೇಟ್ ನಕಲಿ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಪೊಲೀಸ್ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಆಗಿದ್ದ ಸುನಿಲ್ ಮಾನೆ ಅವರನ್ನು ಮುಂಬೈ ಪೊಲೀಸರು ಶನಿವಾರ ಅಮಾನತುಗೊಳಿಸಿದ್ದರು. ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನೆಯವರನ್ನು ಎನ್‌ಐಎ ಬಂಧಿಸಿ ವಿಚಾರಣೆ ನಡೆಸುತ್ತಿದೆ.

ನ್ಯಾಯಾಲಯದ ವಿಚಾರಣೆ ವೇಳೆ ಎನ್ಐಎ ಪರ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಶೆಟ್ಟಿ ಮನ್ಸುಖ್ ಹಿರೇನ್ ಕೊಲ್ಲಲ್ಪಟ್ಟ ಸ್ಥಳದಲ್ಲಿ ಸುನಿಲ್ ಮಾನೆ ಬಹುಶಃ ಹಾಜರಿರಬಹುದು ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ.

ಆದರೆ, ಆರೋಪವನ್ನು ಮಾನೆ ಅವರ ವಕೀಲ ಆದಿತ್ಯ ಗೋರ್ ನಿರಾಕರಿಸಿದ್ದಾರೆ. ಮತ್ತು ಮಾನೆ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಗೋರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೂರನೇ ಪೊಲೀಸ್ ಅಧಿಕಾರಿ ಮಾನೆಯಾಗಿದ್ದು, ಉಳಿದ ಇಬ್ಬರು ಅಧಿಕಾರಿಗಳಾಗಿದ್ದ ಸಚಿನ್​ ವಾಝೆ ಮತ್ತು ಅಪರಾಧ ಶಾಖೆಯ ಸಹೋದ್ಯೋಗಿ ರಿಯಾಜ್ ಕಾಜಿ ನಂತರ ಇಬ್ಬರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.