ಫರೀದ್‌ಕೋಟ್(ಪಂಜಾಬ್): ಸಿಧು ಮೂಸೆ ವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದಿಂದ ಬಂಧಿತರಾಗಿರುವ ಧೇಪೈ ಗ್ರಾಮದ ಮನ್‌ಪ್ರೀತ್ ಭಾವು ಅವರ ಕುಟುಂಬವು ತಮ್ಮ ಪುತ್ರ ನಿರಪರಾಧಿ. ಸೂಕ್ತ ತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಭಾಗಿಯಾಗಿದ್ದಾರೆ ಎಂದು ಮನ್‌ಪ್ರೀತ್ ಭಾವು ಕುಟುಂಬ ಆರೋಪಿಸಿದೆ. ನಾಲ್ಕೈದು ದಿನಗಳ ಹಿಂದೆ ತನ್ನ ಮಗ ಮತ್ತು 5-6 ಸಹಚರರೊಂದಿಗೆ ಹೇಮಕುಂಟ್ ಸಾಹಿಬ್‌ಗೆ ಹೋಗಿದ್ದ. ವಾಪಸ್ ಸ್ವಗ್ರಾಮಕ್ಕೆ ಹಿಂತಿರುತ್ತಿದ್ದ ವೇಳೆ ಪೊಲೀಸರು ನನ್ನ ಮಗನ ಜೊತೆ ಎಲ್ಲರನ್ನೂ ವಶಕ್ಕೆ ಪಡೆದಿದ್ದರು. ಉಳಿದವರನ್ನು ಪೊಲೀಸರು ಬಿಡುಗಡೆ ಮಾಡಿದರು. ಆದರೆ ಮನ್‌ಪ್ರೀತ್‌ನನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡರು ಎಂದು ಮನ್‌ಪ್ರೀತ್ ಕುಟುಂಬ ಹೇಳಿದೆ.
ಓದಿ: ‘ಇದರಲ್ಲಿ ನನ್ನ ಕೈವಾಡವಿಲ್ಲ’... ಸಿಧು ಮುಸೇವಾಲಾ ಹತ್ಯೆಗೆ ಸಂಬಂಧಿಸಿದಂತೆ ಪಂಜಾಬಿ ಗಾಯಕ ಸ್ಪಷ್ಟನೆ
ನನ್ನ ಮಗನಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಮಗನ ವಿರುದ್ಧ ಈಗಾಗಲೇ ಕೆಲವು ಪ್ರಕರಣಗಳು ದಾಖಲಾಗಿರುವುದರಿಂದ ಪೊಲೀಸರು ಉದ್ದೇಶಪೂರ್ವಕವಾಗಿ ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ. ಸರ್ಕಾರದಿಂದ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನ್‌ಪ್ರೀತ್ ಕುಟುಂಬ ಆಗ್ರಹಿಸಿದೆ.
ಮನ್‌ಪ್ರೀತ್ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ. ಇತನ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 8 ಪ್ರಕರಣಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ ಶಸ್ತ್ರಾಸ್ತ್ರ ಕಾಯಿದೆ, ಅಬಕಾರಿ ಕಾಯ್ದೆ, ಎನ್ಡಿಪಿಎಸ್ ಸೇರಿವೆ. ಈಗಾಗಲೇ 7 ಪ್ರಕರಣಗಳಲ್ಲಿ ಆರೋಪಿಗೆ ಜಾಮೀನು ಸಿಕ್ಕಿದೆ. ಇನ್ನೂ ಒಂದು ಪ್ರಕರಣದಲ್ಲಿ ಜಾಮೀನು ಅಗತ್ಯವಿದೆ ಎಂದು ಫರೀದ್‌ಕೋಟ್ ಎಸ್‌ಎಸ್‌ಪಿ ಅವನೀತ್ ಕೌರ್ ಸಿಧು ಹೇಳಿದ್ದಾರೆ.