ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 105ನೇ ಸಂಚಿಕೆ ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ. ಕಾರ್ಯಕ್ರಮವು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ.
-
PM to share his thoughts in 'Mann Ki Baat' programme on Akashvani at 11 AMhttps://t.co/CmyfuWOG9M
— All India Radio News (@airnewsalerts) September 24, 2023 " class="align-text-top noRightClick twitterSection" data="
">PM to share his thoughts in 'Mann Ki Baat' programme on Akashvani at 11 AMhttps://t.co/CmyfuWOG9M
— All India Radio News (@airnewsalerts) September 24, 2023PM to share his thoughts in 'Mann Ki Baat' programme on Akashvani at 11 AMhttps://t.co/CmyfuWOG9M
— All India Radio News (@airnewsalerts) September 24, 2023
ಆಕಾಶವಾಣಿ ಮತ್ತು ದೂರದರ್ಶನದ ಸಂಪೂರ್ಣ ನೆಟ್‌ವರ್ಕ್, ಆಕಾಶವಾಣಿ ವೆಬ್‌ಸೈಟ್ ಮತ್ತು ನ್ಯೂಸ್ ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ. ಇದನ್ನು ಆಕಾಶವಾಣಿ, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನೆಲ್‌ಗಳಲ್ಲಿ ಲೈವ್ ಸ್ಟ್ರೀಮ್ ಮೂಲಕವೂ ಕೇಳಬಹುದು. ಆಕಾಶವಾಣಿ ಹಿಂದಿ ಪ್ರಸಾರವಾದ ತಕ್ಷಣ ಪ್ರಾದೇಶಿಕ ಭಾಷೆಗಳಲ್ಲಿಯೂ ಕಾರ್ಯಕ್ರಮ ಲಭ್ಯ.
ಇದನ್ನೂ ಓದಿ: Mann Ki Baat: ಇಂದು 11 ಗಂಟೆಗೆ 102ನೇ ಕಂತಿನ ಪ್ರಧಾನಿ ಮೋದಿ 'ಮನ್ ಕಿ ಬಾತ್'
ಆ.3, 2014ರಿಂದ ಆರಂಭವಾದ ತಮ್ಮ ಮನ್ ಕಿ ಬಾತ್ ಮೂಲಕ ನರೇಂದ್ರ ಮೋದಿ ಅವರು ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಮನ್ ಕಿ ಬಾತ್'ನ 104ನೇ ಸಂಚಿಕೆ ಆಗಸ್ಟ್ 27ರಂದು ಪ್ರಸಾರವಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, "ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಯಶಸ್ವಿ ಚಂದ್ರಯಾನದಲ್ಲಿ ಅನೇಕ ಮಹಿಳಾ ವಿಜ್ಞಾನಿಗಳ ಪಾಲ್ಗೊಳ್ಳುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಜನೆಯ ಯಶಸ್ಸಿನೊಂದಿಗೆ ಭಾರತ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯಶಸ್ಸಿನಲ್ಲಿ ಅನೇಕ ಮಹಿಳಾ ವಿಜ್ಞಾನಿಗಳು ಭಾಗಿಯಾಗಿರುವುದು ಸಂತಸದ ಸಂಗತಿ" ಎಂದಿದ್ದರು.
ಇದನ್ನೂ ಓದಿ: ಮನ್ ಕಿ ಬಾತ್: ಚಂದ್ರಯಾನದ ಯಶಸ್ಸಿನಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ ಶ್ಲಾಘಿಸಿದ ಮೋದಿ
103ನೇ ಆವೃತ್ತಿ ಜು.30ರಂದು ಪ್ರಸಾರವಾಗಿತ್ತು. ಮೋದಿ ಮೊದಲ ಬಾರಿಗೆ 'ನನ್ನ ಮಣ್ಣು, ನನ್ನ ದೇಶ' ಅಭಿಯಾನವನ್ನು ಈ ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದರು. ಅಭಿಯಾನದಲ್ಲಿ ವೀರಯೋಧರನ್ನು ಸ್ಮರಿಸಲು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 102ನೇ ಸಂಚಿಕೆಯಲ್ಲಿ ಪ್ರಧಾನಿ 'ಯೋಗ ದಿನಾಚರಣೆ, ತುರ್ತು ಪರಿಸ್ಥಿತಿ, ಕ್ರೀಡೆ ಹಾಗೂ 2025ರ ವೇಳೆಗೆ ಭಾರತವನ್ನು ಟಿಬಿ ಮುಕ್ತಗೊಳಿಸುವ ಅಭಿಯಾನ ಮತ್ತು ಪ್ರಕೃತಿ ಸಂರಕ್ಷಣೆ' ಕುರಿತು ಮಾತನಾಡಿದ್ದರು.
ಬಾನುಲಿ ಕಾರ್ಯಕ್ರಮವು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ. ಆದರೆ ಪ್ರಧಾನಿ ಮೋದಿ ಜೂನ್ 21 ರಿಂದ ಜೂನ್ 24 ರವರೆಗೆ ಯುಎಸ್ ಪ್ರವಾಸದಲ್ಲಿದ್ದರು. ಹಾಗಾಗಿ ಕಾರ್ಯಕ್ರಮವನ್ನು ಜೂನ್ 18 ರಂದು ಪ್ರಸಾರ ಮಾಡಲಾಗಿತ್ತು. 30 ನಿಮಿಷಗಳ ಈ ಕಾರ್ಯಕ್ರಮ 30 ಏಪ್ರಿಲ್ 2023ರಂದು 100 ಸಂಚಿಕೆಗಳನ್ನು ಪೂರ್ಣಗೊಳಿಸಿತ್ತು. 22 ಭಾರತೀಯ ಭಾಷೆಗಳು ಮತ್ತು 29 ಉಪ ಭಾಷೆಗಳನ್ನು ಹೊರತುಪಡಿಸಿ, ಮನ್ ಕಿ ಬಾತ್ ಅನ್ನು 11 ವಿದೇಶಿ ಭಾಷೆಗಳಲ್ಲಿಯೂ ಪ್ರಸಾರ ಮಾಡಲಾಗುತ್ತದೆ.
ಇದನ್ನೂ ಓದಿ: ಇಂದು 11 ಗಂಟೆಗೆ ಪ್ರಧಾನಿ ಮೋದಿ 'ಮನ್ ಕಿ ಬಾತ್' 104ನೇ ಸಂಚಿಕೆ ಪ್ರಸಾರ