ETV Bharat / bharat

Manipur violence: ಮಣಿಪುರದಲ್ಲಿ ರಾಹುಲ್​ ಗಾಂಧಿ ಪ್ರಯಾಣಕ್ಕೆ ತಡೆ; ಸುರಕ್ಷತೆಗಾಗಿ ಕ್ರಮವೆಂದ ಪೊಲೀಸರು

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಎರಡು ದಿನಗಳ ಭೇಟಿಗಾಗಿ ಮಣಿಪುರಕ್ಕೆ ಆಗಮಿಸಿದ್ದಾರೆ. ಆದರೆ, ಇಂಫಾಲದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಬಿಷ್ಣುಪುರದಲ್ಲಿ ಅವರ ಬೆಂಗಾವಲು ಪಡೆಯನ್ನು ಪೊಲೀಸರು ತಡೆದಿದ್ದಾರೆ.

author img

By

Published : Jun 29, 2023, 3:53 PM IST

rahul-gandhis-convoy-stopped-by-police-in-manipur
ಮಣಿಪುರದಲ್ಲಿ ರಾಹುಲ್​ ಗಾಂಧಿ ಪಯಣಕ್ಕೆ ತಡೆ.

ಇಂಫಾಲ (ಮಣಿಪುರ): ಹಿಂಸಾಚಾರ ಪೀಡಿತ ಮಣಿಪಾಲಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಭೇಟಿ ನೀಡಿದ್ದಾರೆ. ಈ ವೇಳೆ ಬಿಷ್ಣುಪುರದಲ್ಲಿ ಅವರ ಬೆಂಗಾವಲು ಪಡೆಯನ್ನು ಪೊಲೀಸರು ತಡೆದರು. ಇದರಿಂದ ರಾಜಧಾನಿ ಇಂಫಾಲಕ್ಕೆ ಮರಳಿದ್ದು, ಬೇರೆಡೆ ನಿಗದಿಯಾದ ತಮ್ಮ ಕಾರ್ಯಕ್ರಮ ಸ್ಥಳಕ್ಕೆ ಹೆಲಿಕಾಪ್ಟರ್​ ಮೂಲಕ ತೆರಳಲಿದಿದ್ದಾರೆ.

  • #WATCH | Manipur: Congress leader Rahul Gandhi's carcade was stopped by the police in Bishnupur.

    Rahul Gandhi is now going back to the airport in Imphal, from there he will go to the pre-fixed program by helicopter. pic.twitter.com/Z9XriOY0lN

    — ANI (@ANI) June 29, 2023 " class="align-text-top noRightClick twitterSection" data=" ">

ರಾಜ್ಯದ ಪರಿಸ್ಥಿತಿ ಅರಿಯಲು ಮತ್ತು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದ ಜನರನ್ನು ಭೇಟಿ ಮಾಡಲೆಂದು ರಾಹುಲ್​ ನೇತೃತ್ವದಲ್ಲಿ ಕಾಂಗ್ರೆಸ್​ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ ಅವರು ಚುರಚಂದ್‌ಪುರಕ್ಕೆ ರಸ್ತೆ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಇಂಫಾಲದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಬಿಷ್ಣುಪುರದಲ್ಲಿ ಪೊಲೀಸರು ಅವರ ಬೆಂಗಾವಲು ಪಡೆಯನ್ನು ತಡೆದಿದ್ದಾರೆ.

ಬಿಷ್ಣುಪುರ ಜಿಲ್ಲೆಯ ಉಟ್ಲೌ ಗ್ರಾಮದ ಬಳಿ ಬೆಂಗಾವಲು ಪಡೆಗೆ ಟೈರ್‌ಗಳು ಮತ್ತು ಕಲ್ಲುಗಳನ್ನು ಎಸೆಯುವ ಸಾಧ್ಯತೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ತಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದೆಡೆ, ರಾಹುಲ್​ ಪ್ರಯಾಣಕ್ಕೆ ಅವಕಾಶ ನೀಡದ್ದನ್ನು ಖಂಡಿಸಿ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

  • #WATCH | Manipur: Bishnupur SP Heisnam Balram Singh, says, "Seeing the ground situation, we stopped him (Rahul Gandhi) from moving forward and advised him to travel to Churachandpur via helicopter. There is a possibility of a grenade attack along the highway through which VIP… pic.twitter.com/B4rBdWuTjI

ಇದನ್ನೂ ಓದಿ: Manipur Violence: ಮಣಿಪುರ ಪರಿಸ್ಥಿತಿ ಕುರಿತು ಸರ್ವಪಕ್ಷ ಸಭೆ ನಡೆಸಿದ ಅಮಿತ್‌ ಶಾ: ಶಾಂತಿ ಸ್ಥಾಪನೆಗೆ ಅಗತ್ಯ ಕ್ರಮದ ಭರವಸೆ

ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಜನರು ರಸ್ತೆಯಲ್ಲಿ ನಿಂತಿದ್ದಾರೆ. ಆದರೆ ಬಿಷ್ಣುಪುರ ಎಸ್ಪಿ, ಎಎಸ್ಪಿ, ಎಡಿಎಂ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಬೆಂಗಾವಲು ಪಡೆ ತಡೆದು ನಿಲ್ಲಿಸಿದ್ದಾರೆ. ಈ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿಲ್ಲ. ಹೀಗಾಗಿ ನಮಗೆ ಮುಂದುವರಿಯಲು ಬಿಡುತ್ತಿಲ್ಲ ಎಂಬುವುದಾಗಿ ಪೊಲೀಸರು ಹೇಳುತ್ತಿದ್ದಾರೆ ಎಂದು ಮಣಿಪಾಲ ಕಾಂಗ್ರೆಸ್​ ಅಧ್ಯಕ್ಷ ಕೆ. ಮೇಘಚಂದ್ರ ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, "ರಾಹುಲ್ ಗಾಂಧಿ ಆಗಮನಕ್ಕಾಗಿ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದಾರೆ. ಆದರೆ, ಪೊಲೀಸರು ನಮ್ಮನ್ನು ಏಕೆ ತಡೆದಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ರಾಹುಲ್ ಭೇಟಿ ಸಂತ್ರಸ್ತ ಜನರನ್ನು ಭೇಟಿ ಮಾಡಲು ಬಂದಿದ್ದಾರೆ. ನಾವು ಸುಮಾರು 20-25 ಕಿಲೋಮೀಟರ್ ಪ್ರಯಾಣಿಸಿದ್ದೆವೆ. ಆದರೆ ಎಲ್ಲಿಯೂ ರಸ್ತೆ ತಡೆ ಇರಲಿಲ್ಲ. ಇಲ್ಲಿ ಸ್ಥಳೀಯ ಪೊಲೀಸರಿಗೆ ಯಾರು ಸೂಚನೆ ನೀಡಿದ್ದಾರೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

  • #WATCH | Bishnupur: K Meghachandra, MPCC President, says "People are standing on the roads to welcome Rahul Gandhi but Bishnupur SP, ASP, ADM and other police officials are blocking the roads. I have heard that there were instructions given by Manipur CM to block the roads. They… pic.twitter.com/K7wEhCRIx0

ಬಿಷ್ಣುಪುರ ಎಸ್ಪಿ ಹೈಸ್ನಮ್ ಬಲರಾಮ್ ಸಿಂಗ್ ಪ್ರತಿಕ್ರಿಯಿಸಿ, "ಸದ್ಯದ ಪರಿಸ್ಥಿತಿಯನ್ನು ನೋಡಿ ನಾವು ಅವರನ್ನು (ರಾಹುಲ್ ಗಾಂಧಿ) ಮುಂದೆ ಹೋಗದಂತೆ ತಡೆದಿದ್ದೇವೆ. ಹೆಲಿಕಾಪ್ಟರ್ ಮೂಲಕ ಚುರಚಂದಪುರಕ್ಕೆ ಪ್ರಯಾಣಿಸಲು ಸಲಹೆ ನೀಡಿದ್ದೇವೆ. ರಾಹುಲ್ ಗಾಂಧಿ ಅವರು ಚಲಿಸುವ ಹೆದ್ದಾರಿಯಲ್ಲಿ ಗ್ರೆನೇಡ್ ದಾಳಿಯ ಸಾಧ್ಯತೆಯಿದೆ. ಹೀಗಾಗಿ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಅವರಿಗೆ ಮುಂದೆ ಪ್ರಯಾಣಿಸಲು ಅನುಮತಿಸಲಿಲ್ಲ" ಎಂದು ಮಾಹಿತಿ ನೀಡಿದ್ದಾರೆ.

ಮಣಿಪುರ ಹಿಂಸಾಚಾರಕ್ಕೇನು ಕಾರಣ?: ಪರಿಶಿಷ್ಟ ಪಂಗಡ (ಎಸ್‌ಟಿ)ದ ಸ್ಥಾನಮಾನ ವಿವಾದದಿಂದ ಮೈಥೇಯಿ ಮತ್ತು ಬುಡಕಟ್ಟಿನ ಕುಕಿ ಸಮುದಾಯಗಳ ನಡುವೆ ಮೇ 3ರಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ 120ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅಂದಾಜು ಮೂರು ಸಾವಿರ ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಈ ಸಂಘರ್ಷದ ನಂತರ ಮೊದಲ ಬಾರಿಗೆ ರಾಹುಲ್​ ಗಾಂಧಿ ಎರಡು ದಿನಗಳ ಭೇಟಿಗಾಗಿ ಇಂಫಾಲ್‌ಗೆ ಆಗಮಿಸಿದ್ದಾರೆ.

ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣ.. ಜೂ.13ರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ: ಅಮಿತ್ ಶಾ ಭೇಟಿಯಾದ ಸಿಎಂ ಬಿರೇನ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.