ETV Bharat / bharat

ಮಣಿಪುರ ಹಿಂಸಾಚಾರವನ್ನು ಮ್ಯಾನ್ಮಾರ್ ಮೂಲದ ಪಿಡಿಎಫ್ ಬೆಂಬಲಿಸಿದೆ: ಎಂಪಿಸಿಸಿ ಅಧ್ಯಕ್ಷ ಆರೋಪ

ಇಂಫಾಲ್ ನಗರದ ಹೊರಗಿನ ವಿವಿಧ ಸ್ಥಳಗಳಲ್ಲಿ, ವಿಶೇಷವಾಗಿ ಇಂಫಾಲ್ ಚುರಾಚಂದ್‌ಪುರ, ಮೋರೆ ಗಡಿ ಪ್ರದೇಶ ಮತ್ತು ಹತ್ತಿರದ ಪ್ರದೇಶಗಳಲ್ಲಿ ಇನ್ನೂ ಉದ್ವಿಗ್ನತೆ ಇದೆ. ಎಂಪಿಸಿಸಿಯಿಂದ ಮಣಿಪುರ ರಾಜ್ಯಪಾಲರನ್ನು ಭೇಟಿ ಮಾಡಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ.ಮೇಘಚಂದ್ರ ಸಿಂಗ್ ತಿಳಿಸಿದರು.

MPCC President K Meghachandra Singh
ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ.ಮೇಘಚಂದ್ರ ಸಿಂಗ್
author img

By

Published : May 9, 2023, 9:46 PM IST

ತೇಜ್‌ಪುರ (ಅಸ್ಸಾಂ): ''ರಾಜ್ಯ ಸರ್ಕಾರವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಿಂಸಾಚಾರದ ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮಣಿಪುರದ ಪೆರಿಫೆರಿ ಪ್ರದೇಶ ಮತ್ತು ಮಣಿಪುರದ ಮೂರು ಹಾಟ್‌ಸ್ಪಾಟ್ ಇಂಫಾಲ್, ಚುರಾಚಂದ್‌ಪುರ ಮತ್ತು ಮೋರ್ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದೆ'' ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ. ಮೇಘಚಂದ್ರ ಸಿಂಗ್ ಹೇಳಿದರು. ಈಟಿವಿ ಭಾರತ ಹಿರಿಯ ವರದಿಗಾರ ಪ್ರಣಬ್ ಕುಮಾರ್ ದಾಸ್ ಅವರೊಂದಿಗೆ ವಿಶೇಷ ದೂರವಾಣಿ ಸಂದರ್ಶನದಲ್ಲಿ ಸಿಂಗ್ ಅವರು ಮಾತನಾಡಿದರು.

ಮೇ 3 ರಂದು ಬುಡಕಟ್ಟು ಮತ್ತು ಬಹುಸಂಖ್ಯಾತ ಮೈತೇಯಿ ಸಮುದಾಯದ ಸದಸ್ಯರ ನಡುವೆ ಮೀಸಲಾತಿ ವಿಚಾರಕ್ಕೆ ಸಂಧಿಸಿದಂತೆ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದವು. 23 ಸಾವಿರ ಜನರು ಸ್ಥಳಾಂತರಗೊಂಡಿದ್ದಾರೆ. ಘರ್ಷಣೆಯಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. 200 ಗಾಯಗೊಂಡಿದ್ದಾರೆ ಹಾಗೂ 5 ಸಾವಿರ ಜನರು ಇನ್ನೂ ಅಸುರಕ್ಷಿತ ವಲಯದಲ್ಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೇಜ್ರಿವಾಲ್ ಬಂಗಲೆ ವಿವಾದ: ಅಜಯ್ ಮಾಕೆನ್ ದೂರಿನ ಬಗ್ಗೆ 7 ದಿನಗಳಲ್ಲಿ ವರದಿ ಕೇಳಿದ ಎಲ್‌ಜಿ

ಎಂಪಿಸಿಸಿಯಿಂದ ಮಣಿಪುರ ರಾಜ್ಯಪಾಲರನ್ನು ಭೇಟಿ: ''ಇನ್ನೂ 1000ಕ್ಕಿಂತ ಹೆಚ್ಚು ನಿರಾಶ್ರಿತರಾದ ಮೈತೇಯಿ ಮತ್ತು ಕುಕಿ ಜನರನ್ನು ಮೋರೆ ಬಳಿ ಅಸ್ಸೋಂ ರೈಫಲ್ಸ್ ರಕ್ಷಿಸಿದೆ ಎಂದು ಮೇಘಚಂದ್ರ ಹೇಳಿದರು. ಆದರೆ, ರಾಜ್ಯ ಸರ್ಕಾರ ಅವರಿಗೆ ಇನ್ನೂ ಏನನ್ನೂ ಮಾಡಿಲ್ಲ. ಇಡೀ ಮಣಿಪುರದಲ್ಲಿ ನಡೆದ ಹಿಂಸಾಚಾರದ ನಂತರ, ಕೇಂದ್ರೀಯ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ. ಕೇಂದ್ರ ಸರ್ಕಾರವು 355ನೇ ವಿಧಿಯನ್ನು ಜಾರಿಗೆ ತಂದಿದೆ. ಅದು ಸಂಪೂರ್ಣವಾಗಿ ಕಾಗದಗಳಲ್ಲಿದೆ ಎಂದು ಹೇಳಿದರು. ಇಂಫಾಲ್ ನಗರದ ಹೊರಗಿನ ವಿವಿಧ ಸ್ಥಳಗಳಲ್ಲಿ, ವಿಶೇಷವಾಗಿ ಇಂಫಾಲ್ ಚುರಾಚಂದ್‌ಪುರ, ಮೋರೆ ಗಡಿ ಪ್ರದೇಶ ಮತ್ತು ಹತ್ತಿರದ ಪ್ರದೇಶಗಳಲ್ಲಿ ಇನ್ನೂ ಉದ್ವಿಗ್ನತೆ ಇದೆ. ಎಂಪಿಸಿಸಿ ಮಣಿಪುರ ರಾಜ್ಯಪಾಲರನ್ನು ಭೇಟಿ ಮಾಡಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಮನವಿ ಪತ್ರ ಸಲ್ಲಿಸಿದೆ'' ಎಂದು ಕೆ. ಮೇಘಚಂದ್ರ ಸಿಂಗ್ ತಿಳಿಸಿದರು.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಲೀಗಲ್ ನೋಟಿಸ್ ನೀಡಿದ ಕಾಶ್ಮೀರ ಫೈಲ್ ನಿರ್ಮಾಪಕರು..

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ: ಮಣಿಪುರದ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದೆ. ಏಕೆಂದರೆ ಜನರಿಗೆ ಪ್ರಸ್ತುತ ಸರ್ಕಾರದ ಮೇಲೆ ನಂಬಿಕೆ ಇಲ್ಲ. ತೆರವು ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮಾಡಿಲ್ಲ. ಅದು ಅಸ್ಸೋಂ ರೈಫಲ್ ಸೇನೆ ಮತ್ತು ಸ್ಥಳೀಯ ಸಂಸ್ಥೆಯಿಂದ ಮಾತ್ರ ಎಂದು ಅವರು ಆರೋಪಿಸಿದರು. ಆಂದೋಲನಕಾರರು ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆ ಎಂಬ ವರದಿಗಳು ವೈರಲ್ ಆಗಿದ್ದು, ರಾಜ್ಯದಿಂದ ಬಂದ ಶಸ್ತ್ರಾಸ್ತ್ರಗಳು, ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಜನರ ವಿರುದ್ಧ ಬಳಸಿದ್ದಾರೆ ಎಂದರು.

ಕೆಲವು ಭಾಗಗಳಲ್ಲಿ ಕರ್ಫ್ಯೂವನ್ನು ಸಡಿಲಿಸಲಾಗಿದೆ. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತೊಂದರೆಗೆ ಈಡಾಗಿದ್ದಾರೆ. ರಾಜ್ಯದಲ್ಲಿ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಇಂಧನ ಬಿಕ್ಕಟ್ಟು ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ಇಶಾಮ್ ಮೇಘಚಂದ್ರ ಸಿಂಗ್ ಆರೋಪಿಸಿದರು.

ಇದನ್ನೂ ಓದಿ: ಅಮ್ರೇಲಿಯಲ್ಲಿ ಒಂದೇ ದಿನ ಸಿಂಹ, ಚಿರತೆ ದಾಳಿಗೆ ಇಬ್ಬರು ಮಕ್ಕಳು ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.