ETV Bharat / bharat

ಮಣಿಪುರ ಹಿಂಸಾಚಾರ.. ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಿದ ರಾಜ್ಯಪಾಲೆ, 10 ಲಕ್ಷ ರೂ ಪರಿಹಾರ ವಿತರಣೆ!

ರಾಜ್ಯಪಾಲೆ ಅನುಸೂಯಾ ಉಯಿಕೆ ಚುರಚಂದಪುರದ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಸಂತ್ರಸ್ತ ಜನರೊಂದಿಗೆ ಸಂವಾದ ನಡೆಸಿದರು. ಉದ್ವಿಗ್ನ ಪರಿಸ್ಥಿತಿ ಇರುವ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಎಲ್ಲ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

author img

By

Published : Jul 29, 2023, 9:55 PM IST

Etv Bharatmanipur-governor-hands-over-rs-10-lakh-each-to-the-two-women-paraded-naked
Etv Bharatಮಣಿಪುರ ಹಿಂಸಾಚಾರ.. ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಿದ ರಾಜ್ಯಪಾಲೆ, 10 ಲಕ್ಷ ರೂ ಪರಿಹಾರ ವಿತರಣೆ!

ತೇಜ್‌ಪುರ: ಜನಾಂಗೀಯ ಘರ್ಷಣೆಯ ಕೇಂದ್ರ ಬಿಂದುವಾಗಿರುವ ಚುರಾಚಂದ್‌ಪುರದ ಪರಿಹಾರ ಶಿಬಿರಗಳಿಗೆ ಮಣಿಪುರ ರಾಜ್ಯಪಾಲ ಅನುಸೂಯಾ ಉಯಿಕೆ ಶನಿವಾರ ಭೇಟಿ ನೀಡಿದರು. ಈ ವೇಳೆ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

ವಿರೋಧ ಪಕ್ಷಗಳ 21 ಸದಸ್ಯರ ನಿಯೋಗವು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಈ ಸಂದರ್ಭದಲ್ಲೇ ರಾಜ್ಯಪಾಲರು, ಸಂತ್ರಸ್ತರ ಶಿಬಿರಗಳಿಗೆ ಭೇಟಿ ನೀಡಿ, ಘಟನೆ ಸಂತ್ರಸ್ತ ಇಬ್ಬರು ಮಹಿಳೆಯರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಮೌಲ್ಯದ ಚೆಕ್‌ಗಳನ್ನು ಹಸ್ತಾಂತರಿಸಿದರು.

ಅಸ್ಸೋಂ ರೈಫಲ್ಸ್ ಹೆಲಿಪ್ಯಾಡ್‌ನಲ್ಲಿ ಇಳಿದ ರಾಜ್ಯಪಾಲರು, ಸೇಂಟ್ ಪಾಲ್ಸ್ ಇನ್‌ಸ್ಟಿಟ್ಯೂಟ್ ಪರಿಹಾರ ಶಿಬಿರಕ್ಕೆ ಮತ್ತು ರೆಂಗ್‌ಕೈನಲ್ಲಿರುವ ಯಂಗ್ ಲರ್ನರ್ ಶಾಲೆಯಲ್ಲಿರುವ ಸಂತ್ರಸ್ತರ ಶಿಬಿರಗಳಿಗೆ ಭೇಟಿ ನೀಡಿದರು. ಸಂತ್ರಸ್ತ ಜನರು ತಂಗಿರುವ ಪರಿಹಾರ ಶಿಬಿರಗಳನ್ನು ಅವರು ಪರಿಶೀಲಿಸಿದರು. ಮತ್ತು ಅವರೊಂದಿಗೆ ಸಂವಾದ ನಡೆಸಿದರು. ಪ್ರತಿ ಕುಟುಂಬಕ್ಕೆ ನೈರ್ಮಲ್ಯ ಕಿಟ್‌ಗಳು, ಮಕ್ಕಳಿಗೆ ಆಹಾರ ಪದಾರ್ಥಗಳು ಸೇರಿದಂತೆ ಪರಿಹಾರ ಸಾಮಗ್ರಿಗಳ ಜತೆ ನಗದನ್ನು ವಿತರಿಸಿದರು ಹಾಗೂ ಘಟನೆಯಿಂದ ನೊಂದವರಿಗೆ ಧೈರ್ಯ ತುಂಬಿದರು.

ಯುವಕರು ಕಾನೂನು ಕೈಗೆ ತೆಗೆದುಕೊಳ್ಳದಂತೆ ಮನವಿ ಮಾಡಿದರು, ಜತಗೆ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಬೇಕು ಎಂದು ರಾಜ್ಯಪಾಲರು ಎಲ್ಲರಿಗೂ ತಿಳಿ ಹೇಳಿದರು. ಸಂತ್ರಸ್ತ ಜನರಿಗೆ ಸಾಂತ್ವನ, ಸಹಾನುಭೂತಿ ಮತ್ತು ತನ್ನ ಬೆಂಬಲವನ್ನು ನೀಡಲು ಶಿಬಿರಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ರಾಜ್ಯಪಾಲರು ಇದೇ ವೇಳೆ ಹೇಳಿದರು. ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಲಿದೆ. ಅವರ ಕಷ್ಟಗಳನ್ನು ಪರಿಹರಿಸಲು ಶಕ್ತಿ ಮೀರಿ ಪ್ರಯತ್ನ ಮಾಡಲಾಗುತ್ತದೆ, ಶಾಂತಿಯನ್ನು ಮರುಸ್ಥಾಪಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಇದೇ ವೇಳೆ ರಾಜ್ಯಪಾಲರು ಭರವಸೆ ನೀಡಿದರು.

ಇನ್ನೊಂದು ಕಡೆ ರಾಜ್ಯಪಾಲರಾದ ಅನುಸೂಯಾ ಉಯಿಕೆ, ತುಬಾಂಗ್‌ನಲ್ಲಿ ಮಾಜಿ ಸೈನಿಕರ ಕುಟುಂಬಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಕುಕಿ ಇನ್ಪಿ, ಐಟಿಎಲ್‌ಎಫ್, ಮಾನವ ಹಕ್ಕುಗಳ ಕುಕಿ ಮಹಿಳಾ ಸಂಘಟನೆಯು ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿತು. ಜನರ ಸಮಸ್ಯೆಗಳನ್ನು ಆಲಿಸಲು ಎರಡನೇ ಬಾರಿಗೆ ಜಿಲ್ಲೆಗೆ ಬಂದಿದ್ದೇನೆ ಎಂದು ರಾಜ್ಯಪಾಲರು ಹೇಳಿದರು.

ಸಾರ್ವಜನಿಕವಾಗಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಇಬ್ಬರು 'ಸಹೋದರಿಯರನ್ನು' ನಾನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇನೆ ಮತ್ತು ಅವರ ನೋವುಗಳನ್ನು ಆಲಿಸಿದ್ದೇನೆ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಅವರಿಗೆ ಸಾಂತ್ವನ ಹೇಳಿದ್ದು, ಧೈರ್ಯವನ್ನು ತುಂಬಿದ್ದೇನೆ. ಅಷ್ಟೇ ಅಲ್ಲ ಅವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ವಿತರಿಸಿದ್ದೇನೆ. "ಘಟನೆಯಿಂದ ದೇಶ ಮತ್ತು ಇಡೀ ದೇಶವು ನಾಚಿಕೆಪಡುವಂತಾಗಿದೆ , ಅವರಿಗೆ ಅಗತ್ಯವಾದ ಆರ್ಥಿಕ ಮತ್ತು ನೈತಿಕ ಬೆಂಬಲವನ್ನು ನೀಡಲಾಗುವುದು" ಎಂದು ರಾಜ್ಯಪಾಲರು ಇದೇ ವೇಳೆ ಭರವಸೆ ನೀಡಿದರು.

ಇದನ್ನು ಓದಿ:ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ.. ಆರೋಪಿಗಳ ಮನೆ ಮೇಲೆ ಬುಲ್ಡೋಜರ್​ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.