ETV Bharat / bharat

ಕಾಂಗ್ರೆಸ್​ಗೆ ಬಿಗ್​ ಶಾಕ್..​ ಬಿಜೆಪಿಗೆ ಹಾರಿದ ಮಣಿಪುರ 'ಕೈ' ಮುಖ್ಯಸ್ಥ - ಬಿಜೆಪಿಗೆ ಸೇರ್ಪಡೆ

ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಮತ್ತು ಹಿರಿಯ ಶಾಸಕ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Manipur Congress chief joins BJP
ಬಿಜೆಪಿಗೆ ಹಾರಿದ ಮಣಿಪುರ ಕಾಂಗ್ರೆಸ್​ ಮುಖ್ಯಸ್ಥ
author img

By

Published : Aug 1, 2021, 1:19 PM IST

ಇಂಫಾಲ್ : ಮಣಿಪುರ ರಾಜ್ಯದಲ್ಲೂ ಪಕ್ಷಾಂತರ ಪರ್ವ ಆರಂಭವಾಗಿದೆ. ಪಕ್ಷಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಗೋವಿಂದದಾಸ್ ಕೊಂತೌಜಮ್ ಸಿಎಂ ಎನ್​. ಬಿರೆನ್ ಸಿಂಗ್ ಸಮ್ಮುಖದಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಈ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಅನಿಲ್ ಬಾಲುನಿ, ಪ್ರಮುಖ ವ್ಯಕ್ತಿಯೋರ್ವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಆಗಸ್ಟ್ ಒಂದು ಭಾನುವಾರ ( ಇಂದು ) ಮಧ್ಯಾಹ್ನ ನವದೆಹಲಿಯ 6ಎ ಡಿಡಿಯು ಮಾರ್ಗದ ಬಿಜೆಪಿ ಮುಖ್ಯ ಕಾರ್ಯಾಲಯದಲ್ಲಿ ಪ್ರಮುಖ ವ್ಯಕ್ತಿಯೊಬ್ಬರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಅವರು ಹೇಳಿದ್ದರು.

  • An eminent personality will join @BJP4India today (Sunday) 01 August, 12 noon at BJP HQ, 6A DDU Marg, New Delhi

    — Anil Baluni (@anil_baluni) August 1, 2021 " class="align-text-top noRightClick twitterSection" data=" ">

ಕೊಂತೌಜಮ್ ಮಣಿಪುರ ರಾಜ್ಯ ಕಾಂಗ್ರೆಸ್​ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವೈಯುಕ್ತಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕಳೆದ ಬುಧವಾರ ಶಾಸಕ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದ್ದರು. ಕೊಂತೌಜಮ್ ಬಿಶನ್​ಪುರ್ ಕ್ಷೇತ್ರದಿಂದ ಬರೋಬ್ಬರಿ 6 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಮುಂದಿನ ವರ್ಷ ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ರಾಜ್ಯ ಕಾಂಗ್ರೆಸ್​ ಮುಖ್ಯಸ್ಥನೇ ಪಕ್ಷ ತೊರೆದಿರುವುದು ಇಲ್ಲೂ ಕೂಡ ಕಾಂಗ್ರೆಸ್​ಗೆ ಹಿನ್ನಡೆ ಆಗುತ್ತಾ ಎಂಬ ಲೆಕ್ಕಾಚಾರಗಳು ಶುರುವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.