ಮಂಡಿ: ಸಲಾಪರ್ - ಕಂಗು ಪ್ರದೇಶದ ಮಂಡಿಯಲ್ಲಿ ಕಳ್ಳಭಟ್ಟಿ ಸೇವನೆಯಿಂದಾಗಿ ಇಂದು ಸಾವನ್ನಪ್ಪಿದ ಇಬ್ಬರು ಸೇರಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. ವೈದ್ಯಕೀಯ ಕಾಲೇಜು ನೆರ್‌ಚೌಕ್‌ನಲ್ಲಿ ಇನ್ನು ನಾಲ್ವರು ಸಾವು - ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂದು ಎಸ್ಪಿ ಶಾಲಿನಿ ಅಗ್ನಿಹೋತ್ರಿ ಖಚಿತಪಡಿಸಿದ್ದಾರೆ.
ಮಾಹಿತಿ ಪ್ರಕಾರ, ಧ್ವಾಲ್ ಪ್ರದೇಶದ ನಿವಾಸಿ ಸೀತಾರಾಮ್ (55 ವರ್ಷ) ಅವರ ಆರೋಗ್ಯ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಇದ್ದಕ್ಕಿದ್ದಂತೆ ಹದಗೆಟ್ಟಿದೆ. ಸೀತಾರಾಮ್ ಆಸ್ಪತ್ರೆ ತಲುಪುವ ಮುನ್ನವೇ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಭಾಲಿಯಾನಿ ನಿವಾಸಿ ಭಗತ್ರಂ (42 ವರ್ಷ) ನೆರ್ಚೋಕ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.
ಏನಿದು ಘಟನೆ: ಮಂಡಿ ಜಿಲ್ಲೆಯ ಸುಂದರನಗರ ಉಪವಿಭಾಗದ ಸಾಲಪಾಡ್ ಪ್ರದೇಶದಲ್ಲಿ ಸೋಮವಾರ ಮತ್ತು ಮಂಗಳವಾರ ಕೆಲವರು ಮದ್ಯ ಸೇವಿಸಿದ್ದರು. ತಡರಾತ್ರಿ ಮದ್ಯ ಸೇವಿಸಿದ (ಸಲಪಾಡ್‌ನಲ್ಲಿ ಅಕ್ರಮ ಮದ್ಯ ಮಾರಾಟ) ಕೆಲವರು ಅಸ್ವಸ್ಥರಾಗಿದ್ದರು. ಸ್ಥಳೀಯರು ಮತ್ತು ಸಂಬಂಧಿಕರು ಕೂಡಲೇ ಅಸ್ವಸ್ಥಗೊಂಡವರನ್ನು ಸುಂದರನಗರದ ಸಿವಿಲ್ ಆಸ್ಪತ್ರೆಗೆ ಸಾಗಿಸಿದ್ದರು. ಉತ್ತಮ ಚಿಕಿತ್ಸೆಗಾಗಿ ಎಲ್ಲರನ್ನೂ ನೇರ್‌ಚೌಕ್‌ನ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಬುಧವಾರ ಚಿಕಿತ್ಸೆ ವೇಳೆ 5 ಮಂದಿ ಸಾವನ್ನಪ್ಪಿದ್ದರು.
ಓದಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದಿಲ್ಲವೆಂದು ಮರವೇರಿದ ಭೂಪ: ಮುಂದೇನಾಯ್ತು?
ಗುತ್ತಿಗೆ ಪಡೆದು ಮದ್ಯ ಖರೀದಿಸಿಲ್ಲ: ಸಿಕ್ಕಿರುವ ಮಾಹಿತಿ ಪ್ರಕಾರ ಎಲ್ಲ ಜನರು ಯಾವುದೇ ಗುತ್ತಿಗೆಯಿಂದ ಮದ್ಯ ಖರೀದಿಸಿಲ್ಲ. ಆದರೆ, ಚಂಡೀಗಢದಿಂದ ತಂದು ಮದ್ಯ ಮಾಫಿಯಾ ಇಲ್ಲಿ ಅಕ್ರಮವಾಗಿ ಮಾರಾಟ ಮಾಡ್ತಿದೆ. ಮಂಗಳವಾರ ತಡರಾತ್ರಿ ಮದ್ಯ ಸೇವಿಸಿದ್ದರಿಂದ ಕೆಲವರ ಆರೋಗ್ಯ ಹದಗೆಟ್ಟಿತ್ತು. ಕೂಡಲೇ ಸಂಬಂಧಿಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮತ್ತೊಂದೆಡೆ ಪೊಲೀಸರು ಕೂಡ ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.
ಎಸ್‌ಐಟಿ ರಚನೆ: ವಿಷಪೂರಿತ ಮದ್ಯ ಪ್ರಕರಣದ ತನಿಖೆಗೆ ಸರ್ಕಾರ ಎಸ್‌ಐಟಿ ರಚಿಸಿದೆ. ವಿಷಯದ ಗಂಭೀರತೆ ಪರಿಗಣಿಸಿದ ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ಘೋಷಿಸಿದೆ. ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 4 ಲಕ್ಷ ಹಾಗೂ ಜಿಲ್ಲಾಡಳಿತದಿಂದ 4 ಲಕ್ಷ ಪರಿಹಾರ ಸಿಗಲಿದೆ.
ಮಂಡಿ ಜಿಲ್ಲಾ ಪೊಲೀಸ್ ಕೇಂದ್ರ ರೇಂಜ್ ಡಿಐಜಿ ಮಧುಸೂದನ್ ಮತ್ತು ಎಸ್ಪಿ ಮಂಡಿ ಶಾಲಿನಿ ಅಗ್ನಿಹೋತ್ರಿ ನೇತೃತ್ವದಲ್ಲಿ ಸಲಾಪರ್-ಕಂಗು-ದೈಹಾರ್ ಪ್ರದೇಶದಲ್ಲಿ ದಾಳಿ ನಡೆಸಲಾಗುತ್ತಿದೆ. ಈ ಪ್ರದೇಶದಿಂದ ಅಕ್ರಮ ಮದ್ಯದ ಭಾರಿ ಸಂಗ್ರಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಕುರಿತು ತನಿಖೆ ಮುಂದುವರೆದಿದೆ.