ಮೆಹಬೂಬ್ನಗರ(ತೆಲಂಗಾಣ): ದೇಶಾದ್ಯಂತ ಮಹಾಮಾರಿ ವೈರಸ್ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಕೂಡ ಸಾವಿರಾರು ಜನರು ಮಾಸ್ಕ್ ಧರಿಸಿಕೊಳ್ಳದೇ ಓಡಾಡುತ್ತಿರುವ ದೃಶ್ಯ ಮೇಲಿಂದ ಮೇಲೆ ಕಂಡು ಬರುತ್ತವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಾಸ್ಕ್ ಖರೀದಿಗೆ ಹಣವಿಲ್ಲದಿದ್ದರೂ, ಪಕ್ಷಿಯ ಗೂಡು ಧರಿಸಿಕೊಂಡು ಸರ್ಕಾರಿ ಕಚೇರಿಗೆ ಆಗಮಿಸಿ ಎಲ್ಲರಿಂದಲೂ ಶ್ಲಾಘನೆಗೊಳಗಾಗಿದ್ದಾರೆ.
-
Mekala Kurmayya can’t buy a mask-still wore one. Kurmayya who hails from Chinnamunugal Chad in Mahabubnagar district #Telangana came to mandal center for a pension wearing a bird-nest as a mask! Not the best-but he tried. Govts should distribute masks for those who can’t afford pic.twitter.com/NogkmgNr5n
— Revathi (@revathitweets) April 22, 2021 " class="align-text-top noRightClick twitterSection" data="
">Mekala Kurmayya can’t buy a mask-still wore one. Kurmayya who hails from Chinnamunugal Chad in Mahabubnagar district #Telangana came to mandal center for a pension wearing a bird-nest as a mask! Not the best-but he tried. Govts should distribute masks for those who can’t afford pic.twitter.com/NogkmgNr5n
— Revathi (@revathitweets) April 22, 2021Mekala Kurmayya can’t buy a mask-still wore one. Kurmayya who hails from Chinnamunugal Chad in Mahabubnagar district #Telangana came to mandal center for a pension wearing a bird-nest as a mask! Not the best-but he tried. Govts should distribute masks for those who can’t afford pic.twitter.com/NogkmgNr5n
— Revathi (@revathitweets) April 22, 2021
ತೆಲಂಗಾಣದ ಮೆಹಬೂಬ್ನಗರದಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬಸರ್ಕಾರಿ ಕಚೇರಿಗೆ ಮಾಸ್ಕ್ ಬದಲಿಗೆ ಪಕ್ಷಿಗಳ ಗೂಡು ಧರಿಸಿ ಆಗಮಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹೆಚ್ಚು ವೈರಲ್ ಆಗಿದೆ. ಮೇಕಲಾ ಕುರ್ಮಯ್ಯ ತನ್ನ ಪಿಂಚಣಿ ಹಣ ಸಂಗ್ರಹಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಮುಖವಾಡ ಖರೀದಿ ಮಾಡಲು ಸಾಧ್ಯವಾಗದ ಕಾರಣ ಆತ ಈ ರೀತಿಯಾಗಿ ನಡೆದುಕೊಂಡಿದ್ದಾನೆ.
ಇದನ್ನೂ ಓದಿ: 35 ವರ್ಷದ ನಂತ್ರ ಹೆಣ್ಣು ಮಗುವಿನ ಜನನ.. ಮನೆಗೆ ಕರೆತರಲು 4.5 ಲಕ್ಷ ರೂ. ನೀಡಿ ಹೆಲಿಕಾಪ್ಟರ್ ಬುಕ್!
ತೆಲಂಗಾಣದಲ್ಲಿ ಮಾಸ್ಕ್ ಹಾಕಿಕೊಳ್ಳದಿದ್ದರೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತಿದ್ದು, ಯಾವುದೇ ಕಚೇರಿಯೊಳಗೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ. ಹೀಗಾಗಿ ಅವರು ಹಕ್ಕಿಯ ಗೂಡು ಮುಖವಾಡದ ರೀತಿಯಲ್ಲಿ ಹಾಕಿ ಕಚೇರಿಯೊಳಗೆ ಕಾಲಿಟ್ಟಿದ್ದಾರೆ. ಅನಕ್ಷರಸ್ಥನಾಗಿದ್ದರೂ ಈ ವ್ಯಕ್ತಿ ಮಾಸ್ಕ್ ಹಾಕಿಕೊಂಡು ಕಚೇರಿಗೆ ಆಗಮಿಸಿರುವುದಕ್ಕೆ ಇದೀಗ ಎಲ್ಲಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.