ETV Bharat / bharat

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ನಿವಾಸಕ್ಕೆ ಬಾಂಬ್​ ಬೆದರಿಕೆ ಕರೆ: ಆರೋಪಿ ಬಂಧನ

author img

By

Published : Aug 19, 2023, 9:49 PM IST

Bomb Threat to CM MK Stalin House: ಚೆನ್ನೈನ ಚಿತ್ತರಂಜನ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನಿವಾಸಕ್ಕೆ ಬಾಂಬ್​ ಬೆದರಿಕೆ ಹಾಕಿದ್ದ ಆರೋಪಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

man-threatens-tamil-nadu-cm-mk-stalins-house-with-bomb-arrested
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ನಿವಾಸಕ್ಕೆ ಬಾಂಬ್​ ಬೆದರಿಕೆ ಕರೆ: ಆರೋಪಿ ಬಂಧನ

ಚೆನ್ನೈ (ತಮಿಳುನಾಡು): ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನಿವಾಸದಲ್ಲಿ ಬಾಂಬ್​ ಇದೆ ಎಂದು ಬೆದರಿಕೆ ಕರೆ ಮಾಡಿದ್ದ ಆರೋಪಿಯೋರ್ವನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕನ್ಯಾಕುಮಾರಿ ಮೂಲದ ಇಸಾಕಿ ಮುತ್ತು ಎಂಬಾತನೇ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಶುಕ್ರವಾರ ಮಧ್ಯಾರಾತ್ರಿ 12.20ರ ಸುಮಾರಿಗೆ ಚೆನ್ನೈ ದಕ್ಷಿಣ ವಲಯ ಪೊಲೀಸ್ ನಿಯಂತ್ರಣ ಕೊಠಡಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ಮುಖ್ಯಮಂತ್ರಿ ನಿವಾಸದಲ್ಲಿ ಬಾಂಬ್ ಇದೆ ಎಂದು ಹೇಳಿದ್ದರು. ಇಷ್ಟು ಮಾತ್ರ ಹೇಳಿ ಕರೆಯನ್ನು ಈ ವ್ಯಕ್ತಿ ಕಡಿತಗೊಳಿಸಿದ್ದಾರೆ. ಆದ್ದರಿಂದ ಪೊಲೀಸ್​ ಉಪ ಆಯುಕ್ತ ಸಮಯ್​ ಸಿಂಗ್​ ಮೀನಾ ನೇತೃತ್ವದಲ್ಲಿ ತೆನಾಂಪೇಟೆ ಪೊಲೀಸರು, ಚಿತ್ತರಂಜನ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನಿವಾಸಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು.

ಬಾಂಬ್ ತಜ್ಞರು, ಶ್ವಾನದಳದೊಂದಿಗೆ ಪೊಲೀಸರು ಸಿಎಂ ನಿವಾಸದಲ್ಲಿ ಸುಮಾರು ಒಂದು ಗಂಟೆ ಕಾಲ ಶೋಧ ನಡೆಸಿದ್ದರು. ಆದರೆ, ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗಿಲ್ಲ. ಆದ್ದರಿಂದ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಖಚಿತವಾಗಿದೆ. ಅಂತೆಯೇ, ಪೊಲೀಸರು ಬಾಂಬ್ ಬೆದರಿಕೆ ಬಗ್ಗೆ ಕರೆ ಮಾಡಿದ್ದ ಮೊಬೈಲ್​ ಫೋನ್ ನಂಬರ್ ಬಗ್ಗೆ ತನಿಖೆ ಕೈಗೊಂಡಿದ್ದರು. ಈ ವೇಳೆ, ಕನ್ಯಾಕುಮಾರಿ ಜಿಲ್ಲೆಯ ಬೂತ್ಪಾಂಡಿಯಿಂದ ಆರೋಪಿ ಕರೆ ಮಾಡಿ ಮಾತನಾಡಿರುವುದು ಪತ್ತೆಯಾಗಿದೆ.

ಆದ್ದರಿಂದ ಚೆನ್ನೈ ಪೊಲೀಸರು ತಕ್ಷಣ ಕನ್ಯಾಕುಮಾರಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಕನ್ಯಾಕುಮಾರಿ ಪೊಲೀಸರು ಬೆದರಿಕೆ ಕರೆ ಮಾಡಿದ್ದ ಇಸಾಕಿ ಮುತ್ತುನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆತ ವಿಚಾರಣೆ ನಡೆಸಿದಾಗ ಸ್ವಲ್ಪ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ಎಂದು ಕಂಡು ಬಂದಿದೆ. ಈ ಕುರಿತ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ - ಪುಣೆ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ: ಭದ್ರತಾ ಸಂಸ್ಥೆಗಳಿಂದ ತಪಾಸಣೆ ಕಾರ್ಯ ಚುರುಕು..

ಇತ್ತೀಚೆಗೆ ಮಹಾರಾಷ್ಟ್ರದ ರಾಜಧಾನಿ ಮುಂಬೈಯಲ್ಲಿ ಇದೇ ರೀತಿಯಾಗಿ ಹುಸಿ ಬಾಂಬ್​ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. 61 ವರ್ಷದ ಪ್ರಕಾಶ್​ ಖೇಮಾನಿ ಎಂಬಾತನೇ ಬಂಧಿತ ಆರೋಪಿಯಾಗಿದ್ದ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಇಲ್ಲಿನ ಸಚಿವಾಲಯದಲ್ಲಿ ಬಾಂಬ್​ ಇಟ್ಟಿರುವುದಾಗಿ ಆರೋಪಿ ಪೊಲೀಸರಿಗೆ ಕರೆ ಮಾಡಿದ್ದ.

ಸಚಿವಾಲಯಗಳ ಸಂಕೀರ್ಣದ ಪ್ರಧಾನ ಕಚೇರಿಗೆ ಕರೆ ಮಾಡಿದ್ದ ಆರೋಪಿ, ಕಟ್ಟಡದಲ್ಲಿ ಬಾಂಬ್​ ಇಡಲಾಗಿದೆ ಹಾಗೂ ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಹೇಳಿದ್ದ. ಹೀಗಾಗಿ ಪೊಲೀಸರು ತಕ್ಷಣವೇ ಸಚಿವಾಲಯಕ್ಕೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು. ನಂತರ ಇದು ಹುಸಿ ಬಾಂಬ್ ಬೆದರಿಕೆ ಎಂದು ಖಚಿತವಾದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದರು.

ಇದನ್ನೂ ಓದಿ: Hoax call: ಸಚಿವಾಲಯ ಕಚೇರಿಯಲ್ಲಿ ಬಾಂಬ್ ಇಟ್ಟಿದ್ದಾಗಿ ಬೆದರಿಕೆ; ಆತಂಕ ಸೃಷ್ಟಿಸಿದ ಹುಸಿ ​ಕರೆ, ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.