ಕಾಸರಗೋಡು(ಕೇರಳ): ಕೇರಳದ ಕಾಸರಗೋಡಿನಲ್ಲಿ ವೃದ್ಧನೋರ್ವ ಕಳೆದ ಇಪ್ಪತ್ನಾಲ್ಕು ವರ್ಷಗಳಿಂದ ಕೇವಲ ಎಳನೀರು ಕುಡಿದೇ ಬದುಕು ಸಾಗಿಸುತ್ತಿದ್ದಾರೆ.
ಕಾಸರಗೋಡಿನ ಬಾಲಕೃಷ್ಣನ್ ಪಳಾಯಿ ಎಂಬವರು ಕೇರಳ ತೆಂಗು ಮಂಡಳಿಯ ಬ್ರಾಂಡ್ ಅಂಬಾಸಿಡರ್. ಇದೀಗ ತಮ್ಮ 63ನೇ ವಯಸ್ಸಿನಲ್ಲಿ ಆರೋಗ್ಯಕರ ಜೀವನ ನಡೆಸುತ್ತಿರುವ ಇವರು, ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಕಳೆದ 24 ವರ್ಷಗಳಿಂದಲೂ ಇವರು ಪ್ರತಿದಿನ ಎರಡು-ಮೂರು ಎಳನೀರು ಮಾತ್ರ ಸೇವನೆ ಮಾಡ್ತಿದ್ದು, ಬೇರೆ ಯಾವುದೇ ಆಹಾರ ಸೇವಿಸುತ್ತಿಲ್ಲ. ಪಿಲಿಕ್ಕೋಡ್ನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದಿಂದ ಪ್ರತಿದಿನ 25 ರೂ. ನೀಡಿ ಇವುಗಳನ್ನು ಖರೀದಿ ಮಾಡ್ತಾರೆ.
ಅಪರೂಪದ ಕಾಯಿಲೆ
ಆಹಾರಪ್ರಿಯರಾಗಿದ್ದ ಬಾಲಕೃಷ್ಣನ್ ಅವರಿಗೆ ಕಳೆದ 30 ವರ್ಷಗಳ ಹಿಂದೆ ಅಪರೂಪದ ಕಾಯಿಲೆ (food pipe) ಇರುವುದು ಗೊತ್ತಾಗುತ್ತದೆ. ಹೀಗಾಗಿ, ಆಹಾರ ಸೇವನೆ ಮಾಡಿದ ನಂತರ ದೇಹದಲ್ಲಿ ಜೀರ್ಣಕ್ರಿಯೆ ನಿಧಾನವಾಗುವ ಜೊತೆಗೆ ಆಹಾರ ಸೇವನೆ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ವೈದ್ಯರು ಎಳನೀರು ಸೇವನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಪ್ರತಿದಿನ ಎಳನೀರು ಸೇವನೆ ಮಾಡ್ತಿದ್ದಾರೆ.
ಇದನ್ನೂ ಓದಿ: ಕೋಳಿ ಅಂಕದ ಜಾಗದಲ್ಲೇ Mobile ATM ಸೇವೆ; ಬ್ಯಾಂಕ್ ಸೌಕರ್ಯಕ್ಕೆ ಜೂಜಾಡುವವರು ಖುಷ್!
ಕೇರಳದ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಬಾಲಕೃಷ್ಣನ್ ಅವರು ಕ್ರೀಡಾಪಟುವಾಗಿದ್ದು, 52ನೇ ವಯಸ್ಸಿನಲ್ಲಿ ರಾಷ್ಟ್ರೀಯ ನಾಗರಿಕ ಕ್ರೀಡಾಕೂಟ ಮತ್ತು 2010ರಲ್ಲಿ ಮಲೇಷ್ಯಾದಲ್ಲಿ ನಡೆದ ಮಾಸ್ಟರ್ಸ್ ಮೀಟ್ನಲ್ಲಿ ಭಾಗಿಯಾಗಿ ಪದಕ ಗೆದ್ದಿದ್ದಾರೆ.
ಸದ್ಯ ಪೊಲೀಸ್ ಹಾಗೂ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ಪಡೆದುಕೊಳ್ಳಲು ತಯಾರಿ ನಡೆಸಿರುವವರಿಗೆ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಳನೀರು ಸೇವನೆ ಮಾಡಲು ಆರಂಭಿಸಿದಾಗಿನಿಂದಲೂ ಇವರಿಗೆ ಯಾವುದೇ ರೀತಿಯ ತೊಂದರೆ, ಕಾಯಿಲೆ ಕಾಣಿಸಿಕೊಂಡಿಲ್ಲ.