ETV Bharat / bharat

ಕ್ರಿಸ್​ಮಸ್​ ಹಬ್ಬಕ್ಕೆ ಕರೆದು ವಿಚ್ಚೇದಿತ ಪತ್ನಿ ಮೇಲೆ ಪತಿ ವಿಷದ ಸಿರಿಂಜ್​ನಿಂದ ದಾಳಿ - ವಿಷದ ಸಿರಿಂಜ್​ನಿಂದ ವ್ಯಕ್ತಿ ದಾಳಿ

ವಿಚ್ಚೇದನ ಪಡೆದಿದ್ದ ಪತಿ, ಮಾಜಿ ಪತ್ನಿಯ ಮೇಲೆ ದಾಳಿ - ಕ್ರಿಸ್​ಮಸ್​​ ಹಬ್ಬದ ಕೂಟಕ್ಕೆ ಕರೆದು ವಿಷದ ಸಿರಿಂಜ್​ನಿಂದ ಗಾಯ - ದೂರಿನ ಬಳಿಕ ಆರೋಪಿ ಅರೆಸ್ಟ್​

man-stabs-ex-wife-with-contaminated-syringe
ವಿಚ್ಚೇದಿತ ಪತ್ನಿಯ ಮೇಲೆ ಪತಿ ವಿಷದ ಸಿರಿಂಜ್​ನಿಂದ ದಾಳಿ
author img

By

Published : Dec 27, 2022, 7:22 AM IST

ಸೂರತ್ (ಗುಜರಾತ್): ವಿಚ್ಚೇದನ ಪಡೆದಿದ್ದ ಪತಿ ಕ್ರಿಸ್​ಮಸ್​ ಹಬ್ಬದ ಹಿನ್ನೆಲೆ ಮಾಜಿ ಪತ್ನಿಯನ್ನು ಪಾರ್ಟಿಗೆ ಆಹ್ವಾನಿಸಿ ವಿಷದ ಸೂಜಿ(ಸಿರಿಂಜ್​) ಮೂಲಕ ದಾಳಿ ನಡೆಸಿದ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಸಿರಿಂಜ್​ನಲ್ಲಿ ಯಾವುದಾದರೂ ಮಾರಕ ಅಂಶ ಇತ್ತೇ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

2 ತಿಂಗಳ ಹಿಂದಷ್ಟೇ 15 ವರ್ಷಗಳ ವೈವಾಹಿಕ ಜೀವನಕ್ಕೆ ಇಬ್ಬರೂ ಇತಿಶ್ರೀ ಹಾಡಿದ್ದರು. ವಿಚ್ಚೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದ ವ್ಯಕ್ತಿ ಕ್ರಿಸ್​ಮಸ್​ ಹಬ್ಬದ ವೇಳೆ ಮಾಜಿ ಪತ್ನಿ ಮತ್ತು ಮಕ್ಕಳನ್ನು ಕೂಟಕ್ಕೆ ಆಹ್ವಾನಿಸಿದ್ದಾನೆ. ಎಲ್ಲರೂ ಸೇರಿ ಶಾಪಿಂಗ್​ ನಡೆಸಿದ್ದಾರೆ. ಈ ವೇಳೆ, ಮಾಜಿ ಪತಿ, ಮಹಿಳೆಯ ಮೇಲೆ ಸಿರಿಂಜ್​ನಿಂದ ದಾಳಿ ಮಾಡಿ ಪರಾರಿಯಾಗಿದ್ದಾನೆ.

ಗಾಯಗೊಂಡು ಅಸ್ವಸ್ಥಳಾದ ಮಹಿಳೆ ಕೆಲ ಸಮಯದ ಬಳಿಕ ಸಾವರಿಸಿಕೊಂಡು ಸಮೀಪದ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಅವರನ್ನು ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಚೇತರಿಸಿಕೊಂಡ ಬಳಿಕ ಅಧಿಕಾರಿಗಳು ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

ಆರೋಪಿ ವಿರುದ್ಧ ಸೆಕ್ಷನ್​ 328 (ವಿಷದಿಂದ ಗಾಯಗೊಳಿಸುವುದು), ಸೆಕ್ಷನ್​ 270 (ಜೀವಕ್ಕೆ ಅಪಾಯಕಾರಿ ಸೋಂಕು ಹರಡುವುದು) ಮತ್ತು ಸೆಕ್ಷನ್​ 324 (ಸ್ವಯಂಪ್ರೇರಿತ ದಾಳಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಬಂಧಿಸಿ, ವಿಚಾರಣೆ ನಡೆಸಿದ ವೇಳೆ ಆಸ್ಪತ್ರೆಯಿಂದ ವಿಷದ ಸಿರಿಂಜ್​ ಪಡೆದಿದ್ದಾಗಿ ಆತ ಬಾಯ್ಬಿಟ್ಟಿದ್ದಾನೆ. ದಾಳಿ ನಡೆಸಿದ ಸಿರಿಂಜ್​ ಅನ್ನು ವಶಕ್ಕೆ ಪಡೆದುಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರಲ್ಲಿ ಏನಿತ್ತು ಎಂಬುದರ ಬಗ್ಗೆ ವರದಿ ಬಂದ ನಂತರವಷ್ಟೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದರು.

ಓದಿ: ಅಬ್ಬಬ್ಬಾ ಒಂದಲ್ಲ ಎರಡಲ್ಲ ಬರೋಬ್ಬರಿ 46 ಕೆಜಿಯ ಗಡ್ಡೆ ಹೊರ ತೆಗೆದ ವೈದ್ಯರು... ಮಹಿಳೆ ಜೀವ ಉಳಿಸಿದ ಅಪರೂಪದ ಶಸ್ತ್ರಚಿಕಿತ್ಸೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.