ETV Bharat / bharat

ಏರ್​ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿ ಪ್ರಯಾಣಿಕ ದುಂಡಾವರ್ತನೆ - man smoking in air india flight

ಭಾರತೀಯ ಮೂಲದ ಅಮೆರಿಕನ್​ ಪ್ರಜೆಯೊಬ್ಬ ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿದ್ದಲ್ಲದೇ, ಅನುಚಿತವಾಗಿ ವರ್ತಿಸಿದ ಕಾರಣ ವಶಕ್ಕೆ ಪಡೆಯಲಾಗಿದೆ.

ವಿಮಾನದಲ್ಲಿ ಅಮೆರಿಕನ್​ ಪ್ರಜೆ ಕಿರಿಕ್​
ವಿಮಾನದಲ್ಲಿ ಅಮೆರಿಕನ್​ ಪ್ರಜೆ ಕಿರಿಕ್​
author img

By

Published : Mar 12, 2023, 1:09 PM IST

ಮುಂಬೈ (ಮಹಾರಾಷ್ಟ್ರ): ವಿಮಾನಗಳಲ್ಲಿ ಪ್ರಯಾಣಿಕರ ದುಂಡಾವರ್ತನೆ ಪ್ರಕರಣಗಳು ನಿಂತಿಲ್ಲ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಏರ್​ ಇಂಡಿಯಾ ವಿಮಾನದಲ್ಲಿ ಭಾರತೀಯ ಮೂಲದ ಅಮೆರಿಕದ ಪ್ರಜೆ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಲ್ಲದೇ, ಸಹ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಏರ್ ಇಂಡಿಯಾದ ಲಂಡನ್​- ಮುಂಬೈ ವಿಮಾನದ ಶೌಚಾಲಯದಲ್ಲಿ ಭಾರತೀಯ ಮೂಲದ ಅಮೆರಿಕನ್​ ಪ್ರಜೆಯಾದ ರಮಾಕಾಂತ್​(37) ಎಂಬಾತ ನಿಷೇಧದ ಮಧ್ಯೆ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಾನೆ. ಆಗ ಅಲಾರಾಂ ರಿಂಗಣಿಸಿದೆ. ತಕ್ಷಣವೇ ವಿಮಾನ ಸಿಬ್ಬಂದಿ ಆತನನ್ನು ಅಲ್ಲಿಂದ ಹೊರಬರಲು ಸೂಚಿಸಿದ್ದಾರೆ. ರಮಾಕಾಂತ್​ ಕೈಯಲ್ಲಿ ಸಿಗರೇಟ್​ ಇರುವುದನ್ನು ಕಂಡು, ಅದನ್ನು ಕಸಿದುಕೊಂಡಿದ್ದಾರೆ.

ಬಳಿಕ ಆತನಿಗೆ ಎಚ್ಚರಿಕೆ ನೀಡಿ ಸೀಟಿನಲ್ಲಿ ಕೂರಿಸಿದ್ದಾರೆ. ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಈ ವರ್ತನೆಯಿಂದ ಪ್ರಯಾಣಿಕರು ಭಯಗೊಂಡರು. ಅಲ್ಲದೇ, ಜೋರಾಗಿ ಕಿರುಚಾಡಲೂ ಆರಂಭಿಸಿದ್ದಾನೆ. ವಿಮಾನದಲ್ಲಿ ಈತನ ಗಿಮಿಕ್​ನಿಂದಾಗಿ ಭೀತಿಗೊಳಗಾದ ವಿಮಾನ ಸಿಬ್ಬಂದಿ ಆತನ ಕೈ- ಕಾಲುಗಳನ್ನು ಕಟ್ಟಿ ಸೀಟಿಗೆ ತಂದು ಕೂರಿಸಿದ್ದಾರೆ.

ಇಷ್ಟಾದರೂ ಬಿಡದ ಆತ, ಸಹ ಪ್ರಯಾಣಿಕರ ಮೇಲೆ ತಲೆಯಿಂದ ಗುದ್ದಲು ಶುರು ಮಾಡಿದ್ದಾನೆ. ವಿಮಾನದಲ್ಲಿ ವೈದ್ಯರೊಬ್ಬರು ಆತನನ್ನು ಪರೀಕ್ಷಿಸಿದರು. ರಮಾಕಾಂತ್ ಅವರ ಬ್ಯಾಗ್‌ ಪರಿಶೀಲಿಸಿದಾಗ ಅದರಲ್ಲಿ ಕೆಲವು ಔಷಧಿಗಳು ಪತ್ತೆಯಾಗಿವೆ. ಅಲ್ಲದೇ, ಬ್ಯಾಗ್​ನಲ್ಲಿ ಇ-ಸಿಗರೇಟ್ ಇರುವುದು ಪತ್ತೆಯಾಗಿತ್ತು ಎಂದು ಏರ್ ಇಂಡಿಯಾದ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.

ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಕಿರಿಕ್​ ಪ್ರಯಾಣಿಕನನ್ನು ಸಹರ್ ಪೊಲೀಸರಿಗೆ ಒಪ್ಪಿಸಲಾಯಿತು. ಆತನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಭಾರತೀಯ ಮೂಲದವನಾದರೂ ಅಮೆರಿಕದ ಪ್ರಜೆಯಾಗಿದ್ದು, ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

"ಆರೋಪಿಯು ಅಮಲೇರಿದ ಸ್ಥಿತಿಯಲ್ಲಿದ್ದಾನೋ ಅಥವಾ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಆರೋಪಿಯ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದೇವೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರ ಸಿಗರೇಟ್​ ಸೇದಿದ ಘಟನೆಗಳು: ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿ ಯುವತಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಮಾರ್ಚ್ 5ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದ ಇಂಡಿಗೋ 6E716 ವಿಮಾನದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿ ಸಿಗರೇಟ್​ ಸೇದಿದ್ದಳು. ವಿಮಾನ ಇಳಿದ ಬಳಿಕ ಭದ್ರತಾ ಸಿಬ್ಬಂದಿ ಆಕೆಯನ್ನು ವಶಕ್ಕೆ ಪಡೆದಿದ್ದರು.

ಸ್ಪೈಸ್​ ಜೆಟ್ ವಿಮಾನದಲ್ಲಿ ಘಟನೆ: ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಪ್ರಯಾಣಿಕನೋರ್ವ ರಾಜಾರೋಷವಾಗಿ ಸಿಗರೇಟ್​ ಸೇದುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ದುಬೈನಿಂದ ದೆಹಲಿಗೆ ಬರುತ್ತಿದ್ದ ಸ್ಪೈಸ್​ ಜೆಟ್​ ವಿಮಾನದಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಇಂಥ ಭೀಕರ ದೃಶ್ಯ ಎಂದಾದರೂ ನೋಡಿದ್ದೀರಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.