ETV Bharat / bharat

ಮನೆಯಲ್ಲಿ ಮಲಗಿದ್ದ ಸಹೋದರಿ ಮಗಳ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಭೂಪ - ಒಡಿಶಾ ಅಪರಾಧ ಸುದ್ದಿ

ವ್ಯಕ್ತಿಯೊಬ್ಬ ಕಂಠ ಪೂರ್ತಿ ಕುಡಿದು ಬಂದು ಮನೆಯಲ್ಲಿ ಮಲಗಿದ್ದ ಸಹೋದರಿ ಮಗಳ ಮೇಲೆ ಸಿಮೇಎಣ್ಣೆ ಸುರಿದು ಬೆಂಕಿ ಹಚ್ಚಿ ಕೌರ್ಯ ಮೆರೆದಿರುವ ಘಟನೆ ಒಡಿಶಾದಲ್ಲಿ ಗಂಜಾಂನಲ್ಲಿ ನಡೆದಿದೆ.

Odisha crime news, Odisha fire incident news, ಗಂಜಾಂನಲ್ಲಿ ಸೊಸೆಗೆ ಬೆಂಕಿ ಹಚ್ಚಿದ ಮಾವ, ಒಡಿಶಾ ಅಪರಾಧ ಸುದ್ದಿ, ಒಡಿಶಾ ಬೆಂಕಿ ಅವಘಡ ಸುದ್ದಿ,
ಬೆಂಕಿ ಅವಘಡ
author img

By

Published : Apr 26, 2022, 10:50 AM IST

Updated : Apr 26, 2022, 12:33 PM IST

ಗಂಜಾಂ (ಒಡಿಶಾ): ಸೋಮವಾರ ರಾತ್ರಿ ವ್ಯಕ್ತಿಯೊಬ್ಬ ತನ್ನ ಸೊಸೆಯನ್ನು ಕುಡಿದ ಮತ್ತಿನಲ್ಲಿ ಸುಟ್ಟು ಹಾಕಿರುವ ಘಟನೆ ಜಿಲ್ಲೆಯ ಬೈದ್ಯನಾಥಪುರ ಪೊಲೀಸ್ ವ್ಯಾಪ್ತಿಯ ಬಿದ್ಯಾ ನಗರದಲ್ಲಿ ಸಂಚಲನ ಮೂಡಿಸಿದೆ. ಆರೋಪಿ ಸಿಪ್ರಾನ್ ದಿಗಲ್ ನಿನ್ನೆ ರಾತ್ರಿ ಕಂಠ ಪೂರ್ತಿ ಕುಡಿದು ಮನೆಗೆ ಮರಳಿದ್ದಾನೆ. ಈ ವೇಳೆ, ದಿಗಲ್​ ಸಹೋದರಿ ಮನೆಯ ಹೊರಗೆ ಕುಳಿತುಕೊಂಡಿದ್ದಾರೆ. ಆದರೆ ಸಹೋದರಿಯ ಮಗಳು ಗಾಯತ್ರಿ ಮನೆಯೊಳಗೆ ಮಲಗಿದ್ದಳು.

ದಿಗಲ್ ಮನೆಯಲ್ಲಿಟ್ಟಿದ್ದ ಸೀಮೆಎಣ್ಣೆ ತೆಗೆದುಕೊಂಡು ಗಾಯತ್ರಿ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯ ನೋವು ತಾಳಲಾರದೇ ಗಾಯತ್ರಿ ಜೋರಾಗಿ ಕಿರುಚಿದ್ದಾಳೆ. ಇದನ್ನು ಕೇಳಿದ ಗಾಯತ್ರಿ ತಾಯಿ ಮತ್ತು ನೆರೆಹೊರೆಯವರು ಸ್ಥಳಕ್ಕೆ ಬಂದು ನೋಡಿದಾಗ ಮಗಳು ಬೆಂಕಿಯಲ್ಲಿ ಬೇಯುತ್ತಿರುವುದು ಕಂಡು ಬಂದಿದೆ. ಕೂಡಲೇ ನೆರೆಹೊರೆಯವರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ದಿಗಲ್​ನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದರು.

ಓದಿ: ನೂರೊಂದು ಆಸೆ ಹೊತ್ತು ಗೃಹ ಪ್ರವೇಶ.. 2 ದಿನದ ಬಳಿಕ ಹೊಸ ಮನೆಯಲ್ಲಿ ಸುಟ್ಟು ಕರಕಲಾದ ದಂಪತಿ!

ಗಾಯತ್ರಿಯನ್ನು ಮೊದಲು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಟಕ್‌ನ SCB ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಬೆಂಕಿ ದುರ್ಘಟನೆಯಲ್ಲಿ ಗಾಯತ್ರಿ ಶೇ.70ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

Last Updated : Apr 26, 2022, 12:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.