ಭಾಗಲ್ಪುರ: ಪತಿಯೊಬ್ಬನು ತನ್ನ ಪತ್ನಿಯನ್ನು ನಾಲ್ಕು ವರ್ಷದ ಮಗಳ ಎದುರು ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ಬಿಹಾರದ ಭಾಗಲ್‌ಪುರ ಜಿಲ್ಲೆಯ ನಾಥನಗರ ಮಧುಸೂದನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿ ರಾಘೋಪುರ ಟಿಕಾರ್‌ನಲ್ಲಿ ನಡೆದಿದೆ. ಪತ್ನಿ ಇಶಾ ದೇವಿ (26) ಗಂಡನ ದುಷ್ಕೃತ್ಯಕ್ಕೆ ಬಲಿಯಾದ ದುರ್ದೈವಿ. ಆರೋಪಿ ಪಂಕಜ್ ಯಾದವ್ ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕೆ ಜಾಲ ಬೀಸಿದ್ದಾರೆ.
’ಅಪ್ಪ ಮಮ್ಮಿಯನ್ನೂ ಕೊಂದು ಹಾಕಿದರು. ಅಪ್ಪ ಆಗಾಗ ಅಮ್ಮನನ್ನು ಹೊಡೆಯುತ್ತಿದ್ದರು. ಆ ರಾತ್ರಿ ಅವರು ಜಗಳವಾಡಿದರು ಮತ್ತು ನಂತರ ಅವರು ತಾಯಿಯನ್ನು ಕೊಂದು ಹಾಕಿದರು’. ಹೀಗೆಂದು ಅಂಬೆಗಾಲಿಡುವ ಮಗು ಕೊಲೆ ಘಟನೆಯ ಬಗ್ಗೆ ವಿವರಣೆ ನೀಡಿದೆ. ಕೆಲವು ತಿಂಗಳಿಂದ ಮಗ ಮತ್ತು ಸೊಸೆ ನಡುವೆ ಯಾವುದೋ ವಿಚಾರಕ್ಕೆ ಜಗಳ ಆಡುತ್ತಿದ್ದರು. ನಿನ್ನೆ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಇಟ್ಟಿಗೆಯಿಂದ ಪತ್ನಿಯನ್ನು ತಲೆಗೆ ಜಜ್ಜಿ ಕೊಂದಿದ್ದಾನೆ ಎಂದು ಮೃತಳ ಅತ್ತೆ ಸುಖಾದೇವಿ ಕೂಡಾ ತಿಳಿಸಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ: ಶುಕ್ರವಾರ ರಾತ್ರಿ ತನ್ನ ಪತಿ ಪಂಕಜ್ ಯಾದವ್ ಪತ್ನಿ ಜತೆಗೆ ತೀವ್ರ ಜಗಳ ಆಡಿದ್ದನು. ವಾದ ವಾಗ್ವಾದ ಬೆಳೆದು ಪಂಕಜ್ ಕೋಪದಿಂದ ಇಟ್ಟಿಗೆ ಎತ್ತಿಕೊಂಡು ಹೋಗಿ ಪತ್ನಿಯ ತಲೆ, ಮುಖಕ್ಕೆ ಪದೇ ಪದೆ ಹೊಡೆದು, ಸ್ಥಳದಲ್ಲೇ ಕೊಂದು ಹಾಕಿದ್ದಾನೆ. ಕೊಲೆಯ ನಂತರ ಅವನು ತನ್ನ ಹೆಂಡತಿಯ ಶವವನ್ನು ಹತ್ತಿರದ ತೋಟದಲ್ಲಿ ಎಸೆದಿದ್ದಾನೆ.ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳಿಂದ ಪೊಲೀಸರಿಗೆ ಮಾಹಿತಿ: ಆರೋಪಿ ಪಂಕಜ್ ತನ್ನ ಪತ್ನಿಯನ್ನೂ ಕೊಂದು ನಂತರ ಶವವನ್ನು ತೋಟ ಖಾನಿ ತೋಟದಲ್ಲಿ ಎಸೆದಿದ್ದನು. ಬೆಳಗ್ಗೆ ತೋಟಕ್ಕೆ ಹೋಗಿದ್ದ ಜನರು ಮಹಿಳೆಯ ಶವವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮಹಿಳೆ ಮುಖ ಮುಖ ಸಂಪೂರ್ಣ ವಿರೂಪಗೊಂಡಿದ್ದು, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ಒದಗಿಸಿದ್ದಾರೆ.
ತಕ್ಷಣ ಮಧುಸೂದನಪುರ ಎಸ್‌ಎಚ್‌ಒ ಮಹೇಶ್‌ಕುಮಾರ್ ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಡಿಎಸ್ಪಿ ಅಜಯ್ ಕುಮಾರ್ ಚೌಧರಿ ಕೂಡ ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಮಧುಸೂದನಪುರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚಿಸಿದರು. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮಗು ಹೇಳಿಕೆ ಮೇಲೆ ದೂರು ದಾಖಲು:ಮಗು ಹಾಗೂ ಅತ್ತೆಯ ಹೇಳಿಕೆ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿ ಬಂಧಿಸಲು ತಂಡ ರಚಿಸಿದ್ದಾರೆ. ಕೌಟುಂಬಿಕ ಕಲಹದಿಂದ ಪಂಕಜ್ ತನ್ನ ಪತ್ನಿಯನ್ನೂ ಕೊಂದಿರುವ ಕುರಿತಾಗಿ ಹಲವಾರು ಹಂತಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಕೆಲವು ಸ್ಥಳೀಯರಿಂದ ಸಾಕ್ಷಿಗಳನ್ನೂ ಪಡೆದಿದ್ದೂ, ಮಹಿಳೆಯ ಸಂಬಂಧಿಕರಿಂದಲೂ ಸಾಕ್ಷಿಗಳನ್ನೂ ಪಡೆದಿದ್ದಾರೆ.
ಸಂಭೋಗಕ್ಕೆ ಬರದಿದ್ದಕ್ಕೆ ಪತ್ನಿ ಕೊಂದ ಪತಿ: ಲೈಂಗಿಕ ಸಂಭೋಗಕ್ಕೆ ಅವಕಾಶ ನೀಡಲಿಲ್ಲ ಎಂದು ಸಿಟ್ಟಿಗೆದ್ದು ಪತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ. ಹೀಗೆ ಸಿಟ್ಟಿನ ಕೈಯಲ್ಲಿ ಬುದ್ದಿಕೊಟ್ಟ ಗಂಡ, ಹೆಂಡತಿಯನ್ನು ಕೊಂದು ಶವವನ್ನು ಸೋಯಾಬೀನ್ ಗದ್ದೆಯಲ್ಲಿ ಸುಟ್ಟು ಸಾಕ್ಷಿ ನಾಶಮಾಡಲೂ ಯತ್ನಿಸಿದ್ದಾನೆ. ಮಾಯಾ ಸಂಜಯ್ ಸಾಖ್ರೆ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಪತಿ ಸಂಜಯ್ ಸಾಖ್ರೆಯನ್ನೂ ಪೊಲೀಸರು ಬಂಧಿಸಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಸೋಯಾಬೀನ್ ಗದ್ದೆಯಲ್ಲಿ ಅಪರಿಚಿತ ವಿವಾಹಿತ ಮಹಿಳೆಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿ ಪತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪೊಪಾಳಿ ಉಮರಖಂಡ ತಾಲೂಕಿನ ವಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ:ಮೈಸೂರು: ವಿವಾಹಿತನೊಂದಿಗೆ ಕಪಿಲಾ ನದಿಗೆ ಹಾರಿ ಯುವತಿ ಆತ್ಮಹತ್ಯೆ