ಫಿರೋಜಾಬಾದ್: 1974ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 80 ವರ್ಷದ ವ್ಯಕ್ತಿ ಇದೀಗ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪ್ರಕರಣ ನಡೆದಿದೆ. 45 ವರ್ಷಗಳ ಹಿಂದೆ ಫಿರೋಜಾಬಾದ್ ಜಿಲ್ಲೆಯ ನರ್ಕಿ ಗ್ರಾಮದಲ್ಲಿ ಮಹಿಳೆಯೊಬ್ಬರ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಲಯ ಈ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆದೇಶ ನೀಡಿದ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಪರಿಗಣಿಸಿದ್ದು, ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇದರ ಹೊರತಾಗಿ 20 ಸಾವಿರ ದಂಡವನ್ನು ಕೂಡ ವಿಧಿಸಲಾಗಿದೆ. ಒಂದು ವೇಳೆ, ಅಪರಾಧಿ ಈ ದಂಡದ ಹಣವನ್ನು ಪಾವತಿ ಮಾಡುವಲ್ಲಿ ವಿಫಲರಾದರೆ ಹೆಚ್ಚುವರಿಯಾಗಿ ಮತ್ತೊಂದು ವರ್ಷ ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ತಿಳಿಸಿದೆ.
1974ರ ಹತ್ಯೆ: ಪ್ರಾಸಿಕ್ಯೂಷನ್ ಪ್ರಕಾರ, 1984 ಸೆಪ್ಟೆಂಬರ್ 14ರಂದು ಮಹೇಂದ್ರ ಸಿಂಗ್ ಎಂಬ ಆರೋಪಿ ಅದೇ ಗ್ರಾಮದ ಮಹಿಳೆಯ ಮಾತು ಕೇಳಿ, ರಾಮ್ ಬೆಟಿಯ ಗಂಡನನ್ನು ರೈಫೆಲ್ನಿಂದ ಹತ್ಯೆ ಮಾಡಿದ್ದನು. ಈ ಪ್ರಕರಣ ಸಂಬಂದ ರಾಮ್ ಬೆಟಿ ಮಗಳು ಮೀರಾ ದೇಮಿ ಮಹೇಂದ್ರ ಸಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಮಯದಲ್ಲಿ ನಾರ್ಖಿ ಆಗ್ರಾದ ಭಾಗವಾಗಿತ್ತು. ಆಗ್ರಾದ ನ್ಯಾಯಾಲಯದಲ್ಲಿ ಈ ಪ್ರಕರಣದ ಸುದೀರ್ಘ ಹೋರಾಟ ಕೂಡ ನಡೆದಿತ್ತು. ಬಳಿಕ ಈ ಪ್ರಕರಣ ಫಿರೋಜಾಬಾದ್ ಕೋರ್ಟ್ಗೆ ವರ್ಗವಾಯಿತು. ಇಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಧೀಶರಾದ ಜೀತೇಂದ್ರ ಗುಪ್ತಾ ಅವರು ಪ್ರಕರಣದ ವಿಚಾರಣೆ ನಡೆಸಿದರು.
ಈ ಪ್ರಕರಣದ ಪ್ರಾಸಿಕ್ಯೂಟರ್ ಆಗಿರುವ ಎಡಿಜಿಸಿ ಶ್ರೀನಾರಾಯಣ ಶರ್ಮಾ, ಪ್ರಕರಣ ಸಂಬಂಧ ಹಲವು ಸಾಕ್ಷ್ಯಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅನೇಕ ಸಾಕ್ಷ್ಯಗಳನ್ನು ಕೋರ್ಟ್ ಮುಂದೆ ಸಲ್ಲಿಸಲಾಗಿದೆ. ಇದರ ಆಧಾರದ ಮೇಲೆ ಮಹೇಂದ್ರ ಸಿಂಗ್ ಅವರನ್ನು ದೋಷಿ ಎಂದು ನ್ಯಾಯಾಲಯ ತಿಳಿಸಿದೆ ಎಂದರು.
ಎಮ್ಮೆ ಕದ್ದು 58 ವರ್ಷದ ಬಳಿಕ ಸಿಕ್ಕ ಕಳ್ಳ
ಇದೇ ರೀತಿ ಕಳ್ಳತನ ಮಾಡಿದ್ದ ಆರೋಪಿ ಹಲವು ದಶಕಗಳ ಬಳಿಕ ಸಿಕ್ಕ ಪ್ರಕರಣ ಕರ್ನಾಟಕದ ಬೀದರ್ನಲ್ಲೂ ಇತ್ತೀಚೆಗೆ ವರದಿ ಆಗಿತ್ತು. 1965ರಲ್ಲಿ ಬೀದರ್‌ನ ಮೆಹಕರ್ ಪೊಲೀಸ್ ಠಾಣೆಯಲ್ಲಿ 2 ಎಮ್ಮೆ 1 ಕರು ಕಳುವಾದ ಕುರಿತು ಮುರಳೀಧರರಾವ್ ಮಾಣಿಕರಾವ್ ಕುಲಕರ್ಣಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿತ್ತು. ಈ ಕಳ್ಳತನ ಪ್ರಕರಣವನ್ನು 58 ವರ್ಷಗಳ ಬಳಿಕ ಭೇದಿಸಿದ ಪೊಲೀಸರು ಮಹಾರಾಷ್ಟ್ರ ಮೂಲದ ಆರೋಪಿ ಗಣಪತಿ ವಿಠ್ಠಲ ವಾಗೋರೆಯನ್ನು ಬಂಧಿಸಿದ್ದರು.
ಇದನ್ನೂ ಓದಿ: 23 ವರ್ಷದ ಸಂಗಾತಿಗೆ ಕ್ಯಾಬ್‌ನಲ್ಲಿ ಹಲವು ಬಾರಿ ಇರಿದ ಪ್ರೇಮಿ.. ಮಹಿಳೆ ಸ್ಥಿತಿ ಗಂಭೀರ