ETV Bharat / bharat

ಕುಟುಂಬಸ್ಥರು ಮಣ್ಣು ಮಾಡಿದ ಬಳಿಕ ವಿಡಿಯೋ ಚಾಟ್‌ಗೆ ಸಿಕ್ಕ ಮೃತ ವ್ಯಕ್ತಿ! - ಸತ್ತ ವ್ಯಕ್ತಿ ಎದ್ದು ಬಂದ

ಕುಟುಂಬಸ್ಥರು ಶವಸಂಸ್ಕಾರ ನೆರವೇರಿಸಿದ್ದ ವ್ಯಕ್ತಿಯೊಬ್ಬರು ಗೆಳೆಯನಿಗೆ ಕರೆ ಮಾಡಿ ಶಾಕ್​ ನೀಡಿದ್ದಾರೆ. ಗೆಳೆಯ ವಿಡಿಯೋ ಕರೆ ಮಾಡಿ ಆತ ಜೀವಂತವಿರುವುದನ್ನು ಖಾತ್ರಿಪಡಿಸಿಕೊಂಡಿದ್ದಾನೆ. ಇಲ್ಲಿದೆ ಇನ್​ಟ್ರೆಸ್ಟಿಂಗ್​ ಸ್ಫೋರಿ..

man-found-alive-after-family-buries-body-in-palghar-of-maharashtra
ಸತ್ತಿದ್ದಾನೆ ಎಂದು ಭಾವಿಸಿ ಮಣ್ಣು ಮಾಡಿದ ಕುಟುಂಬಸ್ಥರು: ಗೆಳೆಯನ ಜೊತೆ 'ಮೃತ' ವ್ಯಕ್ತಿಯ ವಿಡಿಯೋ ಚಾಟ್‌
author img

By

Published : Feb 7, 2023, 9:47 PM IST

ಪಾಲ್ಘರ್ (ಮಹಾರಾಷ್ಟ್ರ): ಸತ್ತಿದ್ದಾನೆ ಎಂದು ಭಾವಿಸಿ ಮಣ್ಣು ಮಾಡಲಾಗಿದ್ದ 60 ವರ್ಷದ ಆಟೋ ಚಾಲಕರೊಬ್ಬರು ಜೀವಂತವಾಗಿ ಪತ್ತೆಯಾಗಿದ್ದಾರೆ. ಇದು ವಿಚಿತ್ರ ಎನಿಸಿದರೂ ನಿಜ. ಜೀವಂತವಾಗಿರುವ ಈ ಚಾಲಕ ಮತ್ತು ಈತನ ಕುಟುಂಬಸ್ಥರು ಮಣ್ಣು ಮಾಡಿರುವ ವ್ಯಕ್ತಿ ಇಬ್ಬರೂ ನೋಡಲು ಒಂದೇ ರೀತಿಯಾಗಿದ್ದುದೇ ಇಂಥದ್ದೊಂದು ಘಟನೆಗೆ ಕಾರಣವಾಗಿತ್ತು. ಇಬ್ಬರ ಎತ್ತರ, ಮೈಬಣ್ಣ ಎಲ್ಲವೂ ಹೆಚ್ಚೂ ಕಡಿಮೆ ಒಂದೇ ತೆರನಾಗಿತ್ತಂತೆ. ಹೀಗಾಗಿಯೇ, ಕುಟುಂಬಸ್ಥರು ಮೃತ ವ್ಯಕ್ತಿ ನಮ್ಮವರೇ ಎಂದು ನಂಬಿ ಅಂತ್ಯಸಂಸ್ಕಾರ ನೆರವೇರಿಸಿ ದುಃಖದ ಮಡುವಿನಲ್ಲಿ ಮುಳುಗಿದ್ದರು. ಆದರೆ ಮುಂದೆ ನಡೆದಿದ್ದೇ ಬೇರೆ..!

ಸಂಪೂರ್ಣ ವಿವರ: ಜನವರಿ 29ರಂದು ಮಹಾರಾಷ್ಟ್ರದ ಪಾಲ್ಘರ್ ಮತ್ತು ಬೋಯ್ಸರ್ ನಿಲ್ದಾಣಗಳ ನಡುವೆ ಹಳಿ ದಾಟುತ್ತಿದ್ದಾಗ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆಗ ಪಾಲ್ಘರ್‌ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಮೃತನ ಗುರುತು ಮತ್ತು ವಾರಸುದಾರರ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೆಲ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಛಾಯಾಚಿತ್ರಗಳನ್ನು ಗಮನಿಸಿದ್ದ ಪಾಲ್ಘರ್​ನಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬರು ರೈಲ್ವೆ ಪೊಲೀಸರನ್ನು ಸಂಪರ್ಕಿಸಿದ್ದರು. ಮೃತರು ನನ್ನ ಸಹೋದರ ರಫೀಕ್ ಶೇಖ್ ಆಗಿದ್ದು, ಆಟೋ ಚಾಲಕರಾಗಿದ್ದಾರೆ. ಇವರು ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದರು ಎಂದು ಹೇಳಿದ್ದರು.

ಮತ್ತೊಂದೆಡೆ, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಕೇರಳದಲ್ಲಿ ನೆಲೆಸಿದ್ದ 'ಮೃತ' ವ್ಯಕ್ತಿಯ ಪತ್ನಿಯನ್ನು ಸಂಪರ್ಕಿಸಿದ್ದರು. ಆಗ ಕೇರಳದಿಂದ ಪಾಲ್ಘರ್‌ಗೆ ಬಂದಿದ್ದ ಈ ಮಹಿಳೆ, ಶವ ತನ್ನ ಗಂಡನದ್ದೇ ಎಂದು ಗುರುತಿಸಿದ್ದರು. ಹೀಗಾಗಿಯೇ ರೈಲ್ವೆ ಹಳಿಯಲ್ಲಿ ಪತ್ತೆಯಾದ ಮೃತದೇಹವು ರಫೀಕ್ ಶೇಖ್ ಅವರದ್ದೇ ಎಂದು ತಿಳಿದು ಕುಟುಂಬಕ್ಕೆ ಪೊಲೀಸರು ಹಸ್ತಾಂತರಿಸಿದ್ದರು. ಅಲ್ಲಿಂದ ಕಳೆದೆರಡು ದಿನಗಳ ಹಿಂದೆಯಷ್ಟೇ ಕುಟುಂಬಸ್ಥರು ಶವದ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದರು.

'ಮೃತ'ನೊಂದಿಗೆ ವಿಡಿಯೋ ಚಾಟ್‌!: ಇದರ ನಡುವೆ ಸತ್ತಿದ್ದಾನೆ ಎಂದು ಭಾವಿಸಿ ಮಣ್ಣು ಮಾಡಲಾಗಿದ್ದ ರಫೀಕ್ ಶೇಖ್ ಭಾನುವಾರ ತನ್ನ ಗೆಳೆಯೊಬ್ಬರಿಗೆ ಕರೆ ಮಾಡಿದ್ದಾನೆ. ಆಗ ಖುದ್ದು ಆ ಸ್ನೇಹಿತನಿಗೆ ಅರೆಕ್ಷಣ ವಿಚಿತ್ರ ಮತ್ತು ಅಚ್ಚರಿ ಮೂಡಿದೆ. ಮಣ್ಣು ಮಾಡಲಾದ ರಫೀಕ್ ಶೇಖ್ ಹೇಗೆ ಕರೆ ಮಾಡಿದ ಎಂದು ಅನುಮಾನಗೊಂಡ ಸ್ನೇಹಿತ ಖಚಿತಪಡಿಸಿಕೊಳ್ಳಲು ವಿಡಿಯೋ ಕಾಲ್​ ಮಾಡಿದ್ದಾನೆ.

ಈ ಮೂಲಕ ಇಬ್ಬರೂ ಪರಸ್ಪರ ಮಾತನಾಡಿದ್ದಾರೆ. ಅಲ್ಲದೇ, ಶೇಖ್ ನಾನು ಚೆನ್ನಾಗಿದ್ದೇನೆ ಮತ್ತು ಪಾಲ್ಘರ್​ನ​ ನಿರ್ಗತಿಕರ ಕೇಂದ್ರದಲ್ಲೇ ತಂಗಿದ್ದು ಎಂದು ನನ್ನ ಸ್ನೇಹಿತನಿಗೆ ತಿಳಿಸಿದ್ದಾನೆ. ನಂತರ ಈ ಬಗ್ಗೆ ಸ್ನೇಹಿತ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಅಲ್ಲದೇ, ಸ್ನೇಹಿತನ ಜೊತೆಗಿನ ರಫೀಕ್ ಶೇಖ್ ಮಾತನಾಡಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಣ್ಣು ಮಾಡಿದ ಶವ ಯಾರದ್ದು?: ಕೇರಳದ ಕುಟುಂಬಕ್ಕೆ ಶವ ಹಸ್ತಾಂತರ ಮಾಡುವಲ್ಲಿ ಪೊಲೀಸರು ಏನಾದರೂ ಎಡವಿದ್ದರಾ ಎಂಬ ಪ್ರಶ್ನೆಯನ್ನು ಇಡೀ ಪ್ರಕರಣ ಹುಟ್ಟು ಹಾಕಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಪೊಲೀಸ್​ ಇಲಾಖೆಯ ಇನ್ಸ್‌ಪೆಕ್ಟರ್ ನರೇಶ್ ರಣಧೀರ್, ಕುಟುಂಬ ಸದಸ್ಯರು ಶವವನ್ನು ಗುರುತಿಸಿ ನಂತರವೇ ಅಗತ್ಯ ಎಲ್ಲ ವಿಧಿವಿಧಾನಗಳನ್ನು ಅನುಸರಿಸಿ ಅವರಿಗೆ ಹಸ್ತಾಂತರಿಸಲಾಗಿತ್ತು. ಆದರೆ, ಇದೀಗ ಶೇಖ್ ಬದುಕಿರುವ ಬಗ್ಗೆ ಕುಟುಂಬಸ್ಥರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಹಾಗಾದರೆ ರಫೀಕ್ ಶೇಖ್ ಕುಟುಂಬಸ್ಥರು ಮಣ್ಣು ಮಾಡಿದ ಶವ ಯಾರದ್ದು ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಮೃತಪಟ್ಟ 109 ವರ್ಷದ ವೃದ್ಧೆ ಮತ್ತೆ ಜೀವಂತ; ನೆಚ್ಚಿನ ಚಾಟ್‌ ತಿಂದು ಮಾತು ಶುರು ಮಾಡಿದ ಅಜ್ಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.