ETV Bharat / bharat

ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಅಂತಾರೆ, ಇಲ್ಲೊಬ್ಬ ಸ್ನೇಹಿತನನ್ನೇ ಕೊಂದುಬಿಟ್ಟ!

ಕೊಟ್ಟ ಸಾಲ ಮರಳಿ ಕೇಳಿದ್ದರಿಂದ ಆಕ್ರೋಶಗೊಂಡ ವ್ಯಕ್ತಿಯೋರ್ವ ತನ್ನ ಸ್ನೇಹಿತನ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

crime in gwalio
crime in gwalio
author img

By

Published : Jul 9, 2021, 4:43 PM IST

ಗ್ವಾಲಿಯಾರ್​​(ಮಧ್ಯಪ್ರದೇಶ): ಗೆಳೆಯ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕೊಟ್ಟಿದ್ದ ಸಾಲ ಮರಳಿ ನೀಡುವಂತೆ ಕೇಳಿದ್ದರಿಂದ ಆಕ್ರೋಶಗೊಂಡು ಸ್ನೇಹಿತನ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಪಡವಾ ಪೊಲೀಸ್​ ಠಾಣಾ ಕ್ಷೇತ್ರದಲ್ಲಿ ನಡೆದಿದೆ.

ಸ್ನೇಹಿತನ ಗಂಟಲು ಕತ್ತರಿಸಿ, ಕೊಲೆ ಮಾಡಿರುವ ವ್ಯಕ್ತಿ ಎರಡು ದಿನಗಳ ಕಾಲ ಮೃತದೇಹವನ್ನು ತನ್ನೊಂದಿಗೆ ಇಟ್ಟುಕೊಂಡಿದ್ದಾನೆ. ಮೃತ ವ್ಯಕ್ತಿಯ ಕುಟುಂಬಸ್ಥರು ಫೋನ್​ ಮಾಡಿ ಕೇಳಿದಾಗ ಆತನ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿ ತನಗೆ ದೊಡ್ಡ ಮಟ್ಟದ ಶಿಕ್ಷೆ ನೀಡುವಂತೆ ಕೇಳಿಕೊಂಡಿದ್ದಾನೆ. ವ್ಯಕ್ತಿಯನ್ನ ಬಂಧನ ಮಾಡಿರುವ ಪೊಲೀಸರು ಮೃತದೇಹವನ್ನ ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.

ಇದನ್ನೂ ಓದಿರಿ: ಬಾಸ್ಕೆಟ್‌ಬಾಲ್ ಆಟದ ಬಳಿಕ​ ಡ್ಯಾನ್ಸ್ ಮಾಡಿ ಗಮನ ಸೆಳೆದ ಸಂಸದೆ ಪ್ರಜ್ಞಾ ಸಿಂಗ್: ವಿಡಿಯೋ

ಇಂದು ಬೆಳಗ್ಗೆ ಇಮ್ರಾನ್ ಖಾನ್​ ತನ್ನ ಅಂಗಡಿಗೆ ಸ್ನೇಹಿತ ಅಮೃತ್​ಲಾಲ್​ಗೆ ಕರೆಯಿಸಿಕೊಂಡಿದ್ದಾನೆ. ಈ ವೇಳೆ ಆತನ ಕೊಲೆ ಮಾಡಿ, ಚೀಲದಲ್ಲಿ ತುಂಬಿಟ್ಟಿದ್ದಾನೆ. ಎರಡು ದಿನಗಳ ಕಾಲ ಅದರೊಂದಿಗೆ ಕಾಲ ಕಳೆದಿದ್ದಾನೆ. ಇದಾದ ಬಳಿಕ ಅಮೃತ್​ಲಾಲ್ ಕುಟುಂಬಸ್ಥರು ಇಮ್ರಾನ್​ ಖಾನ್​ಗೆ ಫೋನ್​ ಮಾಡಿ ಮಾಹಿತಿ ಪಡೆದುಕೊಂಡಾಗ ತಾನೇ ಖುದ್ದಾಗಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕೃತ್ಯಕ್ಕೆ ಬಳಕೆ ಮಾಡಿರುವ ಕೊಡಲಿ ಸಹ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಯನ್ನ ಕಂಬಿ ಹಿಂದೆ ತಳ್ಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.