ETV Bharat / bharat

ಬಿಟ್‌ಕಾಯಿನ್​ ಹೂಡಿಕೆಯಲ್ಲಿ 10 ಲಕ್ಷ ರೂ. ಕಳೆದುಕೊಂಡು ಕಳ್ಳತನದ ಕಥೆ ಕಟ್ಟಿದ ವ್ಯಕ್ತಿ

ಮಗಳ ಮದುವೆಗೋಸ್ಕರ ಕೂಡಿಟ್ಟಿದ್ದ 10 ಲಕ್ಷ ರೂಪಾಯಿ ಹಣವನ್ನು ಬಿಟ್‌ಕಾಯಿನ್​ ಹೂಡಿಕೆಯಲ್ಲಿ ಕಳೆದುಕೊಂಡಿರುವ ವ್ಯಕ್ತಿಯೋರ್ವ, ಪೊಲೀಸ್ ಠಾಣೆಯಲ್ಲಿ ಕಳ್ಳತನದ ಕಟ್ಟು ಕಥೆ ಕಟ್ಟಿ ಸಿಕ್ಕಿಬಿದ್ದಿದ್ದಾನೆ.

Bitcoin trade
Bitcoin trade
author img

By

Published : Nov 23, 2021, 5:47 PM IST

ಪಾಲ್ಗರ್​(ಮಹಾರಾಷ್ಟ್ರ): ಕಳೆದ ಕೆಲ ದಿನಗಳಿಂದ ದೇಶದಲ್ಲಿ ಬಿಟ್‌ಕಾಯಿನ್​​ ವಿಚಾರ ಭಾರೀ ಸುದ್ದಿಯಲ್ಲಿದ್ದು, ಎಲ್ಲರೂ ಇದರ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಇದರ ಮಧ್ಯೆ ಅನೇಕರು ಹಣ ಹೂಡಿಕೆ ಸಹ ಮಾಡ್ತಿದ್ದಾರೆ. ಅದೇ ರೀತಿ ಮಾಡಲು ಹೋಗಿರುವ ವ್ಯಕ್ತಿಯೋರ್ವ ಮಗಳ ಮದುವೆಗೆ ಇಟ್ಟುಕೊಂಡಿದ್ದ 10 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾನೆ.

ದಿನಸಿ ಮತ್ತು ಇತರೆ ಅಗತ್ಯ ವಸ್ತು ಪೂರೈಕೆ ಮಾಡುವ ವ್ಯಾಪಾರ ಮಾಡ್ತಿದ್ದ ಸುಮಂತ್​​ ತನ್ನ ಮಗಳ ಮದುವೆಗೋಸ್ಕರ 10 ಲಕ್ಷ ರೂಪಾಯಿ ಕೂಡಿಟ್ಟಿದ್ದ. ಆದರೆ ಈ ಎಲ್ಲ ಹಣವನ್ನು ಬಿಟ್‌ಕಾಯಿನ್​​ ಹೂಡಿಕೆಯಲ್ಲಿ ಕಳೆದುಕೊಂಡಿದ್ದಾನೆ. ಇದರಿಂದ ಮಗಳ ಮದುವೆ ಹೇಗೆ ಮಾಡುವುದು ಎಂಬ ಆತಂಕ ಆತನಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: ಮತ್ತು ಬರುವ ಔಷಧಿ ನೀಡಿ ಯುವತಿ ಮೇಲೆ ಗ್ಯಾಂಗ್​ ರೇಪ್​.. ಕಾಮುಕರ ಬಂಧನಕ್ಕೆ ತಲಾಶ್​ ​

ಕಳ್ಳತನದ ಕಥೆ ಕಟ್ಟಿದ ವ್ಯಕ್ತಿ

ಬಿಟ್‌ಕಾಯಿನ್​ ಹೂಡಿಕೆಯಲ್ಲಿ 10 ಲಕ್ಷ ರೂ. ನಷ್ಟವಾಗುತ್ತಿದ್ದಂತೆ ವಸಾಲಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಸಮಂತ್​​ ಕಳ್ಳತನದ ಕಥೆ ಕಟ್ಟಿದ್ದಾನೆ. ದುಷ್ಕರ್ಮಿಯೋರ್ವ ದ್ವಿಚಕ್ರ ವಾಹನದಲ್ಲಿ ಬಂದು ತನ್ನ ಹಣ ದೋಚಿ ಪರಾರಿಯಾಗಿದ್ದಾನೆಂದು ಪೊಲೀಸರ ಮುಂದೆ ಹೇಳಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ದೂರು ಸಹ ದಾಖಲು ಮಾಡಿದ್ದಾನೆ.

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಆತನನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಿಟ್‌ಕಾಯಿನ್​ ಹೂಡಿಕೆಯಲ್ಲಿ ಹಣ ಹಾಕಿ ಕಳೆದುಕೊಂಡಿರುವುದು ತಿಳಿದು ಬಂದಿದೆ. ಹೀಗಾಗಿ ಎಚ್ಚರಿಕೆ ನೀಡಿ, ಕಳುಹಿಸಿಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.