ETV Bharat / bharat

ತನ್ನ ಐದು ತಿಂಗಳ ಮಗುವಿನ ಕೈ ಕಾಲು ಮುರಿದ ತಂದೆ: ಆರೋಪಿ ಪತ್ರಕರ್ತ ಅಂದರ್​ - ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆ

ಮಗನ ಪಾಲಿಗೆ ವಿಲನ್​ ಆದ ತಂದೆ- ಐದು ತಿಂಗಳ ಮಗುವಿನ ಮೇಲೆ ಕ್ರೌರ್ಯ- ಅಸ್ಸೋಂನಲ್ಲಿ ಪತ್ರಕರ್ತ ಅರೆಸ್ಟ್​

accused Alkesh Goswami
ಆರೋಪಿ ಅಲ್ಕೇಶ್ ಗೋಸ್ವಾಮಿ
author img

By

Published : Mar 5, 2023, 4:28 PM IST

ಗುವಾಹಟಿ (ಅಸ್ಸೋಂ): ಸ್ವತ: ತಂದೆಯೇ ತನ್ನ ಐದು ತಿಂಗಳ ಮಗನ ಕೈಕಾಲುಗಳನ್ನು ಮುರಿದು ಗಾಯಗೊಳಿಸಿರುವ ಅಘಾತಕಾರಿ ಮತ್ತು ಹೃದಯ ವಿದ್ರಾವಕ ಘಟನೆ ಗುವಾಹಟಿ ಸಿಟಿಯ ಕಾಹಿಲಿಪರ್​ನ ಪತ್ರಕರ್ತರ ವಸಾಹತು ಕಾಲೊನಿಯಲ್ಲಿ ನಡೆದಿದೆ. ತೀವ್ರ ಗಾಯಗೊಂಡಿದ್ದ ಮಗುವನ್ನು ಪ್ರಸ್ತುತ ಗುವಾಹಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಯಾಕೆ ಚಿತ್ರಹಿಂಸೆ ನೀಡಲಾಗಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

ಕ್ರೌರ್ಯ ಮೆರೆದ ಆರೋಪಿ ತಂದೆಯನ್ನು ಅಲ್ಕೇಶ್ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಭಗದತ್ತಾಪುರ ಠಾಣೆಯ ಪೊಲೀಸರು ಬಂಧಿಸಿ, ವಶಕ್ಕೆ ಪಡೆದಿದ್ದಾರೆ. ಆರೋಪಿ ಗುರುವಾರ ಮಗುವಿನ ಮೇಲೆ ಹಲ್ಲೆ ನಡೆಸಿದ್ದನು. ಮಗು ನೋವು ತಡೆದುಕೊಳ್ಳಲಾಗದೇ, ಗುರುವಾರ ರಾತ್ರಿಯಿಂದ ಶುಕ್ರವಾರದವರೆಗೂ ಅಳಲು ಪ್ರಾರಂಭಿಸಿದೆ. ಮಗು ಇಷ್ಟು ಅಳಲು ಕಾರಣವೇನು, ಮಗುವಿಗೆ ಏನೋ ಆಗಿದೆ ಎಂದು ಅದರ ತಾಯಿ ಪರಿಶೀಲಿಸಿದ್ದಾರೆ. ನಂತರ ಮಗುವನ್ನು ಶುಕ್ರವಾರ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯಲ್ಲಿ ಮಗುವನ್ನೂ ವೈದ್ಯರು ಪರಿಶೀಲಿಸಿದ ಬಳಿಕ ಎರಡೂ ಕಾಲುಗಳು ಮತ್ತು ಒಂದು ಕೈ ಮುರಿತವಾಗಿದೆ ಎಂದು ತಿಳಿಸಿದ್ದಾರೆ. ಆ ಬಳಿಕ ಸ್ಥಳೀಯರು ಮಗುವಿನ ತಂದೆಯನ್ನು ಪ್ರಶ್ನಿಸಿದ್ದಾರೆ. ಮಗುವಿಗೆ ಏನು ಮಾಡಿದ್ದೀಯಾ ಎಂದು ತಮ್ಮದೇ ಪೊಲೀಸ್​ ಭಾಷೆಯಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಅಲ್ಲೇಶ್ ಗೋಸ್ವಾಮಿ ಮಗುವಿನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ನಂತರ ಸ್ಥಳೀಯ ನಿವಾಸಿಗಳು ಅಲ್ಕೇಶ್ ಗೋಸ್ವಾಮಿಯನ್ನು ಪೊಲೀಸರಿಗೆ ಒಪ್ಪಿಸಿ, ತನಿಖೆಗೆ ಒತ್ತಾಯಿಸಿದ್ದಾರೆ.

ಆರೋಪಿ ಅಲ್ಕೇಶ್ ಗೋಸ್ವಾಮಿ ಗುವಾಹಟಿ ಸಿಟಿಯ ಕಾಹಿಲಿಪರ್​ ಕಾಲೋನಿಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದಾರೆ. ಈ ರೀತಿ ತನ್ನ ಮಗುವಿನ ಮೇಲೆ ಹಲ್ಲೆ ನಡೆಸಿ, ಹಿಂಸಿಸಲು ಪ್ರೇರೇಪಿಸಿದ್ದು, ಇನ್ನೂ ಮಾಹಿತಿ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಇಡೀ ಘಟನೆಯ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.

ಬಿಹಾರ ಮೂಲದ ಕಾರ್ಮಿಕ ರೈಲಿಗೆ ಸಿಲುಕಿ ಸಾವು: ತಮಿಳುನಾಡಿನ ತಿರುಪುರ್ ಬಳಿ ಬಿಹಾರ ಮೂಲದ ಕಾರ್ಮಿಕನೊಬ್ಬ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದರಿಂದ ವಲಸೆ ಕಾರ್ಮಿಕರು ಇಲ್ಲಿನ ರೈಲ್ವೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಸಾವಿಗೀಡಾದ ಕಾರ್ಮಿಕ ಸಂಜೀವ್ ಕುಮಾರ ಎಂದು ಗುರುತಿಸಲಾಗಿದೆ. ತಿರುಪುರ್ ಜಿಲ್ಲೆಯ ನಿಟ್ವೇರ್ ಕಂಪನಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 2 ರಂದು ಮಧ್ಯರಾತ್ರಿ ಸಂಜೀವ್ ಕುಮಾರ್ ತಿರುಪುರ್ ಬಳಿಯ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ತಕ್ಷಣ ಎಚ್ಚೆತ್ತ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದರು. ನಂತರ ವಲಸೆ ಕಾರ್ಮಿಕನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಿರುಪುರ್ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರ್ಪಡೆ ಮಾಡಿದ್ದಾರೆ. ಇವುಗಳ ಮಧ್ಯೆಯೂ ಕಾರ್ಮಿಕನನ್ನು ಕೊಲೆ ಮಾಡಿ ಶವವನ್ನು ರೈಲ್ವೆ ಹಳಿ ಮೇಲೆ ಎಸೆಯಲಾಗಿದೆ ಎಂದು ವಿವಿಧ ಮೂಲಗಳಿಂದ ಸುದ್ದಿ ಹಬ್ಬಿತ್ತು.

ಟ್ರ್ಯಾಕ್ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ: ರಾತ್ರಿ ರೈಲ್ವೆ ಹಳಿ ದಾಟುತ್ತಿದ್ದಾಗ ಸಂಜೀವ್ ಕುಮಾರ್ ಅವರಿಗೆ ಡಿಕ್ಕಿ ಹೊಡೆದಿದೆ. ಮಧ್ಯರಾತ್ರಿ 12.56 ಕ್ಕೆ ತಿರುವನಂತಪುರಂನಿಂದ ಚೆನ್ನೈಗೆ ರೈಲನ್ನು ಚಲಾಯಿಸುತ್ತಿದ್ದ ಕರುಪಸಾಮಿ ನೀಡಿದ ಮಾಹಿತಿಯಂತೆ, ಟ್ರ್ಯಾಕ್ ದಾಟಲು ಪ್ರಯತ್ನಿಸಿದ್ದ ವ್ಯಕ್ತಿಯೊಬ್ಬರಿಗೆ ರಾತ್ರಿ ತಿರುವನಂತಪುರಂನಿಂದ ಚೆನ್ನೈಗೆ ಸಂಚರಿಸುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೆವು. ಆಗ ವಲಸೆ ಕಾರ್ಮಿಕ ಸಂಜೀವ್ ಕುಮಾರ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂಓದಿ:'ಅಂತರ್​ಜಾತಿ ವಿವಾಹಕ್ಕೆ 3 ಲಕ್ಷ, ಪೊಲೀಸರಿಗೆ ದೂರು ಕೊಟ್ಟಿದ್ದಕ್ಕೆ 3 ಲಕ್ಷ ರೂಪಾಯಿ ದಂಡ ಹಾಕಿದ್ರು'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.