ETV Bharat / bharat

ಕೇವಲ 500 ರೂಗಾಗಿ ಸ್ನೇಹಿತನ ಶಿರಚ್ಛೇದ: ರುಂಡದೊಂದಿಗೆ ಠಾಣೆಗೆ ಬಂದ ವ್ಯಕ್ತಿ - ಸ್ನೇಹಿತನ ಶಿರಚ್ಛೇದ

ತಾನು ನೀಡಿದ್ದ 500 ರೂ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಶಿರಚ್ಛೇದ ಮಾಡಿ, ಠಾಣೆಗೆ ಶರಣಾಗಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.

man-beheads-friend-for-rs-500-surrenders-with-severed-head-in-assam
ಅಸ್ಸಾಂನಲ್ಲಿ 500 ರೂಗಾಗಿ ಸ್ನೇಹಿತನ ಶಿರಚ್ಛೇದ : ತಲೆಯೊಂದಿಗೆ ಠಾಣೆಗೆ ಬಂದ ವ್ಯಕ್ತಿ
author img

By

Published : Aug 17, 2022, 10:55 AM IST

ಸೋನಿತ್​ಪುರ,ಅಸ್ಸೋಂ: ಸ್ವಾತಂತ್ರ್ಯೋತ್ಸವದ ಮಧ್ಯ ರಾತ್ರಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಶಿರಚ್ಛೇದ ಮಾಡಿದ ಘಟನೆ ಅಸ್ಸೋಂನಲ್ಲಿ ನಡೆದಿದೆ. ಕೊಟ್ಟ ಹಣ ವಾಪಸ್​ ಕೇಳಿದ್ದ ವ್ಯಕ್ತಿಯೊಬ್ಬ ಸ್ನೇಹಿತನ ಕೊಂದು ಸೋನಿತ್​​​ಪುರ ಜಿಲ್ಲೆಯ ರಂಗಪಾರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ವ್ಯಕ್ತಿಯ ಕೈಯಲ್ಲಿದ್ದ ತಲೆಯನ್ನು ಕಂಡು ಠಾಣೆಯ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಶಿರಚ್ಛೇದ ಮಾಡಿದ ವ್ಯಕ್ತಿಯನ್ನು ತುನಿರಾಮ್ ಮಾದ್ರಿ (25) ಎಂದು ಗುರುತಿಸಲಾಗಿದೆ.

ನಡೆದ ಘಟನೆ ಏನು?: ಇಲ್ಲಿನ ರಂಗಪಾರ ಪೊಲೀಸ್ ಠಾಣಾ ವ್ಯಾಪ್ತಿಯ ದಯಾಲ್‌ಪುರ ಗ್ರಾಮದ ನಿವಾಸಿ ತುನಿರಾಮ್ ಮಾದ್ರಿ ಅದೇ ಗ್ರಾಮದ ನಿವಾಸಿ ಬ್ರೈಲರ್ ಹೇಮ್ರಾಮ್ (55) ಅವರ ತಲೆ ಕಡಿದು ಹತ್ಯೆ ಮಾಡಿದ್ದಾನೆ. ಬಳಿಕ ಕೊಲೆಯಾದ ವ್ಯಕ್ತಿಯ ತಲೆ ಮತ್ತು ಚಾಕುವಿನೊಂದಿಗೆ ಸುಮಾರು 10 ಕಿಲೋಮೀಟರ್ ನಡೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾನೆ.

ಬ್ರೈಲರ್ ಹೇಮ್​ರಾಮ್ ಎಂಬಾತ ತುನಿರಾಮ್ ಮಾದ್ರಿಗೆ ತಾನು ನೀಡಿದ್ದ 500 ರೂಪಾಯಿ ಕೊಡುವಂತೆ ಕೇಳಿದ್ದಾನೆ. ಈ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಆ ಜಗಳ ತಾರಕಕ್ಕೇರಿ ತುನಿರಾಮ್ ಮಾದ್ರಿ ಹರಿತವಾದ ಚಾಕುವಿನಿಂದ ಹೇಮ್​ರಾಮ್‌ನ ಕತ್ತು ಕೊಯ್ದಿದ್ದಾನೆ.

ತುನಿರಾಮ್ ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಹೇಮ್ರಾಮ್ ಬೆದರಿಕೆ ಹಾಕಿದ್ದಾನೆ. ಇದರಿಂದ ಆಕ್ರೋಶಗೊಂಡ ತುನಿರಾಮ್ ಹೇಮ್​ರಾಮ್‌ನ ತಲೆ ಕಡಿದು ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ರಂಗಪಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಜಮ್ಮುವಿನಲ್ಲಿ ಒಂದೇ ಕುಟುಂಬದ ಆರು ಮಂದಿ ಶವ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.