ಜೈಪುರ (ರಾಜಸ್ಥಾನ): ಪಾಕ್ ಪರ ಬೇಹುಗಾರಿಕೆ ಆರೋಪದ ಮೇಲೆ ರಾಜಸ್ಥಾನದ ವಿಶೇಷ ಪಡೆ, 42 ವರ್ಷದ ವ್ಯಕ್ತಿಯನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಸಲ್ಮೇರ್ ನಿವಾಸಿ ಸತ್ಯನಾರಾಯಣ್ ಪಲಿವಾಲ್ ವಿರುದ್ಧ ಬೇಹುಗಾರಿಕೆ ಆರೋಪದ ಮೇಲೆ ಸಿಐಡಿ (ವಿಶೇಷ ಶಾಖೆ) ಪ್ರಕರಣ ದಾಖಲಿಸಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಂಕಿತ ಭಾರತೀಯ ಸೇನೆಯ ಬಗ್ಗೆ ವರ್ಗೀಕೃತ ಮಾಹಿತಿ ಹಂಚಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಹಸ್ಯ ಕಾಯ್ದೆಯಡಿ ಜೈಪುರದ ಅಪರಾಧ ತನಿಖಾ ಇಲಾಖೆ (ವಿಶೇಷ ಶಾಖೆ) ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಏಜೆಂಟರೊಂದಿಗಿನ ಸಂಪರ್ಕದಲ್ಲಿದ್ದೇನೆ ಮತ್ತು ಸೂಕ್ಷ್ಮ ಮಿಲಿಟರಿ ಮಾಹಿತಿ ಹೊಂದಿದ್ದೇನೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ರಾಜಸ್ಥಾನ್ ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನ ಪರ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಸಾಂಬಾ ಜಿಲ್ಲೆಯ ಕುಲ್ಜೀತ್ ಕುಮಾರ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು.
ಮೂಲಗಳ ಪ್ರಕಾರ, ಕುಲ್ಜೀತ್ ಸಾಂಬಾದ ಪ್ರಮುಖ ಸ್ಥಳಗಳ ಛಾಯಾಚಿತ್ರ ತೆಗೆದು ಅವುಗಳನ್ನು 2018 ರಿಂದ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರು, ಹಾಗೆ ಮಾಡಲು ಅವರು ಭಾರಿ ಮೊತ್ತವನ್ನು ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಸಂಸ್ಥೆಗಳು ಸಾಂಬಾ ಪೊಲೀಸರ ಜೊತೆಗೂಡಿ ಆರೋಪಿಗಳನ್ನು ಬಂಧಿಸಿವೆ.