ETV Bharat / bharat

ಮಾನಗೇಡಿ ಕೃತ್ಯ.. ತುಂಬಿದ ಬಸ್​​ನಲ್ಲೇ ಯುವತಿ ಮುಂದೆ ಹಸ್ತಮೈಥುನ: ಸಿಕ್ಕಿಬಿದ್ದ ವಿಕೃತ ಕಾಮಿ

ಸಾರ್ವಜನಿಕ ಸ್ಥಳದಲ್ಲಿ ಮಾನಗೇಡಿ ಕೃತ್ಯ- ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮುಂದೆ ಕಾಮುಕನಿಂದ ಹಸ್ತಮೈಥುನ- ಆರೋಪಿ ಪೊಲೀಸರ ವಶಕ್ಕೆ

author img

By

Published : Jan 5, 2023, 3:53 PM IST

man-allegedly-masturbates-next-to-girl-on-dtc-bus-in-rohini
ಬಸ್​​ನಲ್ಲಿ ಯುವತಿ ಮುಂದೆ ಹಸ್ತಮೈಥುನ: ಸಿಕ್ಕಿಬಿದ್ದ ವಿಕೃತ ಕಾಮಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಮಾನಗೇಡಿ ಕೃತ್ಯ ವರದಿಯಾಗಿದೆ. ಸಾರ್ವಜನಿಕ ಬಸ್​​ನಲ್ಲೇ ವಿಕೃತ ಕಾಮಿಯೊಬ್ಬ ಯುವತಿ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಈ ಕೃತ್ಯ ಎಸಗಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಇಲ್ಲಿನ ರೋಹಿಣಿ ಪ್ರದೇಶದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ಪೊಲೀಸ್​ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಬಸ್​ನಲ್ಲಿ ನಡೆದ್ದೇನು?: ಸಾರಿಗೆ ಸಂಸ್ಥೆಯಾದ ದೆಹಲಿ ಬಸ್ ಸೇವೆ (ಡಿಟಿಸಿ) ಬಸ್​ನಲ್ಲಿ ಯುವತಿಯೊಬ್ಬಳು ಪ್ರಯಾಣಿಸುತ್ತಿದ್ದರು. ಇದೇ ವೇಳೆ ಕಾಮುಕನೋರ್ವ ಯುವತಿ ಮುಂದೆ ನಿಂತು ತನ್ನ ಪ್ಯಾಂಟ್​ನ ಜಿಪ್​ ತೆರೆದು ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ. ಆಗ ಬಸ್​ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಮಾರ್ಷಲ್ ಸಂದೀಪ್ ಗಮನಕ್ಕೆ ಈ ಕೃತ್ಯವನ್ನು ಯುವತಿ ತಂದಿದ್ದಾರೆ. ಇದರಿಂದ ಮಾರ್ಷಲ್​ ಸಂದೀಪ್​ ಅವರು ವಿಕೃತಿ ಮೆರೆಯುತ್ತಿದ್ದ ಆರೋಪಿಯನ್ನು ಹಿಡಿದಿದ್ದಾರೆ.

ಇದನ್ನೂ ಓದಿ: ಆ್ಯಸಿಡ್‌ ನಾಗನ ಪರ ವಕಾಲತ್ತಿಗೆ ವಕೀಲರ ನಕಾರ: ಕೋರ್ಟ್‌ ವಿಚಾರಣೆಗೆ ತಾಂತ್ರಿಕ ತೊಂದರೆ

ಅಲ್ಲದೇ, ಆರೋಪಿಗೆ ಪ್ರಶ್ನೆ ಮಾಡಿ, ತರಾಟೆಗೆ ತೆಗೆದುಕೊಳ್ಳಲು ಶುರು ಮಾಡಿದ್ದು, ಇದರಿಂದ ಆರೋಪಿ ಕಣ್ಣೀರು ಸುರಿಸುವ ನಾಟಕ ಮಾಡಿದ್ದಾನೆ. ನಂತರ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಸದ್ಯ ಮಾರ್ಷಲ್​ ಕೈಗೆ ಸಿಕ್ಕಿಬಿದ್ದ ಈ ಆರೋಪಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪೊಲೀಸರಿಂದ ವಿಚಾರಣೆ: ಬಸ್​​ನಲ್ಲಿ ಈ ಕೃತ್ಯ ಎಸಗಿದ ಆರೋಪಿಯನ್ನು ಮೂಲತಃ ಬಿಹಾರದ ನಿವಾಸಿ ಎಂದು ಗುರುತಿಸಲಾಗಿದೆ. ಇನ್ನೂ ಯಾವುದೇ ದೂರು ದಾಖಲಾಗದ ಕಾರಣ ಆತನನ್ನು ಬಂಧಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ, ಉತ್ತರ ರೋಹಿಣಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸುಮನ್ ನೇತೃತ್ವದಲ್ಲಿ ಆರೋಪಿಯ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ದೂರು ನೀಡದ ಸಂತ್ರಸ್ತೆ: ಇತ್ತ, ಈ ಘಟನೆ ಸಂಬಂಧ ಸಂತ್ರಸ್ತೆಯನ್ನೂ ಪೊಲೀಸರು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ, ಸಂತ್ರಸ್ತೆಯು ತನ್ನ ಹೇಳಿಕೆಯನ್ನು ದಾಖಲಿಸಲು ಅಥವಾ ಈ ಸಂಬಂಧ ಯಾವುದೇ ದೂರು ನೀಡಲು ಆಕೆ ನಿರಾಕರಿಸಿದ್ದಾಳೆ ಎಂದೂ ಪೊಲೀಸ್​ ಅಧಿಕಾರಿ ಹೇಳಿದ್ದಾರೆ. ಮುಂದೆ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದರೆ, ತಕ್ಷಣವೇ ಕಾನೂನು ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಠಾಣೆ ಮೆಟ್ಟಿಲೇರಿದ್ದ ಮಹಿಳಾ ಮಾರ್ಷಲ್: ಕೆಲ ದಿನಗಳ ಹಿಂದೆಯಷ್ಟೇ ಡಿಟಿಸಿ ಬಸ್​​ನಲ್ಲಿ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತನ್ನ ಸಹೋದ್ಯೋಗಿಯ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಕೆಲಸ ವಿಚಾರವಾಗಿ ಅನುಚಿತ ವರ್ತನೆ ಮತ್ತು ದೈಹಿಕ ಹಲ್ಲೆ ಆರೋಪದ ಮೇಲೆ ಮ್ಯಾನೇಜರ್​ ವಿರುದ್ಧ ಕೇಶವಪುರಂ ಪೊಲೀಸ್ ಠಾಣೆಯಲ್ಲಿ ಮಹಿಳಾ ಮಾರ್ಷಲ್​ ದೂರು ದಾಖಲಿಸಿದ್ದರು. ಆದರೆ, ನಂತರ ಇಬ್ಬರೂ ಸಹ ಸಂಧಾನ ಮಾಡಿಕೊಳ್ಳುವ ಮೂಲಕ ಈ ಪ್ರಕರಣ ಸುಖಾಂತ್ಯ ಕಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: 1,500 ರೂ.ಗಾಗಿ ಚಿಕಿತ್ಸೆ ನೀಡದ ವೈದ್ಯರು, ಗರ್ಭಿಣಿ ಸಾವು: ಅಂತ್ಯಸಂಸ್ಕಾರಕ್ಕೆ ₹3 ಸಾವಿರ ಕೊಟ್ಟ ಮುಖಂಡ!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.