ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೊರೊನಾ ಪರಿಸ್ಥಿತಿ ಬಿಗಡಾಯಿಸಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಿಗದಿಯಾಗಿದ್ದ ಪಶ್ಚಿಮ ಬಂಗಾಳ ಭೇಟಿಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ರಾಜ್ಯದಲ್ಲಿ ನಡೆಸಬೇಕೆಂದಿದ್ದ ಎಲ್ಲಾ ರ‍್ಯಾಲಿ, ಸಭೆಗಳನ್ನು ರದ್ದುಗೊಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ದೀದಿ, "ದೇಶಾದ್ಯಂತ ಕೊರೊನಾ ಹೆಚ್ಚುತ್ತಿರುವ ಹಾಗೂ ಏಪ್ರಿಲ್ 22ರ ಚುನಾವಣಾ ಆಯೋಗದ ಆದೇಶದ ಹಿನ್ನೆಲೆ ನನ್ನ ಪೂರ್ವ ನಿಗದಿತ ಎಲ್ಲಾ ಚುನಾವಣಾ ಸಭೆಗಳನ್ನು ರದ್ದುಗೊಳಿಸುತ್ತಿದ್ದು, ವರ್ಚುವಲ್ ಮೂಲಕವೇ ಜನರನ್ನ ತಲುಪಲಿದ್ದೇವೆ. ವರ್ಚುವಲ್ ಸಭೆಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.
-
In the wake of upsurge in #COVID19 cases across the country and the ECI Order dated 22nd April, 2021, I am cancelling all my prescheduled meetings and we will reach out to the people virtually.
— Mamata Banerjee (@MamataOfficial) April 22, 2021 " class="align-text-top noRightClick twitterSection" data="
We will be sharing the updated schedule of the virtual meetings shortly.
">In the wake of upsurge in #COVID19 cases across the country and the ECI Order dated 22nd April, 2021, I am cancelling all my prescheduled meetings and we will reach out to the people virtually.
— Mamata Banerjee (@MamataOfficial) April 22, 2021
We will be sharing the updated schedule of the virtual meetings shortly.In the wake of upsurge in #COVID19 cases across the country and the ECI Order dated 22nd April, 2021, I am cancelling all my prescheduled meetings and we will reach out to the people virtually.
— Mamata Banerjee (@MamataOfficial) April 22, 2021
We will be sharing the updated schedule of the virtual meetings shortly.
ಇದನ್ನೂ ಓದಿ: ಕೋವಿಡ್ ಪ್ರಕರಣಗಳು ಹೆಚ್ಚಿರುವ ರಾಜ್ಯಗಳ ಸಿಎಂಗಳೊಂದಿಗೆ ಇಂದು ಪ್ರಧಾನಿ ಮೋದಿ ಸರಣಿ ಸಭೆ
ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈವರೆಗೆ ಆರು ಹಂತಗಳ ಮತದಾನ ನಡೆದಿದೆ. ಕೋವಿಡ್ ಉಲ್ಬಣ ಹಿನ್ನೆಲೆ ಇನ್ನೆರಡು ಹಂತಗಳ ಮತದಾನಕ್ಕಾಗಿ ರ‍್ಯಾಲಿ, ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ ನಿನ್ನೆ ಭಾರತೀಯ ಚುನಾವಣಾ ಆಯೋಗ ಆದೇಶ ನೀಡಿತ್ತು.