ETV Bharat / bharat

ಬಿಜೆಪಿ ಹಿಂಸಾತ್ಮಕ ಪ್ರತಿಭಟನೆ ಮೇಲೆ ಫೈರಿಂಗ್​ ಮಾಡಬೇಕಿತ್ತು: ಆದರೆ..? ಸಿಎಂ ಬ್ಯಾನರ್ಜಿ ಹೀಗೆಂದಿದ್ದೇಕೆ? - violent protesters of BJP

ಬಿಜೆಪಿ ಮಂಗಳವಾರ ನಡೆಸಿದ ನಬನ್ನಾ ಚಲೋ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿತ್ತು. ರ‍್ಯಾಲಿಯಲ್ಲಿ 50 ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದಾರೆ. ಇದನ್ನು ತಡೆಯಲು ಪೊಲೀಸರು ಫೈರಿಂಗ್​ ಮಾಡದೇ ಸಂಯಮ ಮೆರೆದಿದ್ದಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಖಾಕಿ ಪಡೆಯ ಬೆನ್ನು ತಟ್ಟಿದ್ದಾರೆ.

mamata-banerjee-criticize-over-bjp-protest
ಸಿಎಂ ಮಮತಾ ಬ್ಯಾನರ್ಜಿ
author img

By

Published : Sep 14, 2022, 7:52 PM IST

ಕೋಲ್ಕತ್ತಾ: ನಿನ್ನೆ ಬಿಜೆಪಿ ನಡೆಸಿದ ಪ್ರತಿಭಟನಾ ಮೆರವಣಿಗೆ ಕ್ರೂರವಾಗಿತ್ತು. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲೆಂದೇ ಬಿಜೆಪಿ ಇದನ್ನು ನಡೆಸಿತ್ತು. ಪೊಲೀಸರು ಗರಿಷ್ಠ ಸಂಯಮದಿಂದ ಇದನ್ನು ತಡೆದಿದ್ದಾರೆ. ಇಲ್ಲವಾದಲ್ಲಿ ಇದು ಗುಂಡು ಹಾರಿಸಿ ತಡೆಯಬೇಕಾಗಿದ್ದ ಪ್ರತಿಭಟನೆಯಾಗಿತ್ತು ಎಂದು ಪೊಲೀಸರ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಮರ್ಥಿಸಿಕೊಂಡಿದ್ದಾರೆ.

ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಪ್ರತಿಭಟನೆಯ ಬಗ್ಗೆ ನಡೆದ ಚರ್ಚೆಯ ವೇಳೆ ಮಮತಾ ಅವರು ಮಾತನಾಡಿದರು. ಬಿಜೆಪಿಯ ಪ್ರತಿಭಟನೆ ಅಶಾಂತಿಗಾಗಿ ನಡೆಸಲಾಗಿದೆ. ಕೇಸರಿ ಪಕ್ಷ ಹೊರಗಿನಿಂದ ರೈಲುಗಳಲ್ಲಿ ಬಾಂಬ್, ಶಸ್ತ್ರಸಜ್ಜಿತ ಗೂಂಡಾಗಳನ್ನು ಕರೆಸಿಕೊಂಡಿತ್ತು. ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯೋಜನೆ ರೂಪಿಸಲಾಗಿತ್ತು ಎಂದು ಆರೋಪಿಸಿದರು.

ಪ್ರತಿಭಟನಾಕಾರರು ಅನೇಕ ಪೊಲೀಸ್ ಸಿಬ್ಬಂದಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯನ್ನು ತಡೆಯಲು ಪೊಲೀಸರು ಗುಂಡು ಹಾರಿಸಬಹುದಿತ್ತು. ಆದರೆ, ನಮ್ಮ ಪೊಲೀಸರು ಗರಿಷ್ಠ ಸಂಯಮವನ್ನು ಮೆರೆದಿದ್ದಾರೆ ಎಂದು ಮಮತಾ ಬ್ಯಾನರ್ಜಿ ಖಾಕಿ ಪಡೆಗೆ ಶಹಬ್ಬಾಸ್​ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ನಡೆಯುವ ಅತಿದೊಡ್ಡ ಹಬ್ಬವಾದ ದುರ್ಗಾ ಪೂಜೆಯ ಸಮೀಪದಲ್ಲೇ ಬಿಜೆಪಿ ಈ ಪ್ರತಿಭಟನೆ ಜನರಿಗೆ ಮತ್ತು ವ್ಯಾಪಾರಿಗಳಿಗೆ ಅನಾನುಕೂಲವನ್ನುಂಟು ಮಾಡಿದೆ ಎಂದು ಟೀಕಿಸಿದರು.

ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ಪ್ರತಿಭಟನೆಗಳ ವಿರುದ್ಧ ನಮ್ಮ ತಕರಾರಿಲ್ಲ. ಆದರೆ, ಬಿಜೆಪಿ ಮತ್ತು ಅದರ ಬೆಂಬಲಿಗರು ಹಿಂಸಾಚಾರ, ವಿಧ್ವಂಸಕ ಕೃತ್ಯ ಎಸಗಿದರು. ವಾಹನಿಗಳಿಗೆ ಬೆಂಕಿ ಹಚ್ಚಿ ಅರಾಜಕತೆ ಸೃಷ್ಟಿಸಿದರು. ಆಸ್ತಿ- ಪಾಸ್ತಿ ನಷ್ಟ ಮಾಡಿದ್ದಾರೆ. ಇದು ಜನರಲ್ಲಿ ಭಯವನ್ನು ಹುಟ್ಟುಹಾಕಿದೆ. ಇಂತಹ ವರ್ತನೆಯನ್ನು ಸಹಿಸಲಾಗದು. ಇದರ ತಡೆಗೆ ಕಠಿಣ ಕ್ರಮ ಅಗತ್ಯವಿರುತ್ತದೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ. ಇದು ಖಂಡಿತ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಓದಿ: ಮಹಾರಾಷ್ಟ್ರದಿಂದ ಗುಜರಾತ್​ಗೆ ಚಿಪ್​ ಘಟಕ ಶಿಫ್ಟ್​: ರಾಜಕೀಯ ಕೆಸರೆರಚಾಟ ಶುರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.