ETV Bharat / bharat

ಪ.ಬಂಗಾಳ ಗವರ್ನರ್​​ ಟ್ವಿಟರ್ ಖಾತೆ ಬ್ಲಾಕ್​ ಮಾಡಿದ ಸಿಎಂ ಮಮತಾ.. ಕಾರಣ? - ಮಮತಾ ಗವರ್ನರ್ ಮುಸುಕಿನ ಗುದ್ದಾಟ

Mamata Banerjee blocks Dhankar on twitter : ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಜ್ಯಪಾಲರು ಶಾಸನ ಸಭೆಯ ಸ್ಪೀಕರ್​ ತಾವು ಕೇಳಿರುವ ಮಾಹಿತಿ ನೀಡದೇ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದ್ದರು..

Mamata Banerjee blocks Dhankar on twitter

author img

By

Published : Jan 31, 2022, 7:47 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್​ ಧನಕರ್​​ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ರಾಜ್ಯಪಾಲರ ಟ್ವಿಟರ್​​ ಖಾತೆಯನ್ನ ಸಿಎಂ ಬ್ಯಾನರ್ಜಿ ಬ್ಲಾಕ್ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಅನೇಕ ಪೋಸ್ಟ್​ ಮಾಡಿದ್ದಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ದೀದಿ ತಿಳಿಸಿದ್ದಾರೆ.

ಇದನ್ನೂ ಓದಿರಿ: 'ಆಫ್​ಲೈನ್ ಬೇಡ ಆನ್​ಲೈನ್​​​ ಮೂಲಕ ಬೋರ್ಡ್​​​ ಪರೀಕ್ಷೆ' ನಡೆಸಿ.. ಸಾವಿರಾರು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಅಸಂವಿಧಾನಿಕವಾಗಿ ನನ್ನನ್ನು ಅಥವಾ ನನ್ನ ಅಧಿಕಾರಿಗಳನ್ನ ನಿಂದಿಸುತ್ತಾ ಅವರು ಟ್ವೀಟ್ ಮಾಡುತ್ತಿರುತ್ತಾರೆ. ಸರ್ಕಾರಕ್ಕೆ ಮಹತ್ವದ ಸಲಹೆ ನೀಡುವ ಬದಲು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯಪಾಲ ಧನಕರ್​ ಅವರು ರಾಜ್ಯ ಮುಖ್ಯಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಹಲವಾರು ಸಂದರ್ಭಗಳಲ್ಲಿ ಬೆದರಿಕೆ ಹಾಕಿದ್ದು, ಸರ್ಕಾರಿ ಅಧಿಕಾರಿಗಳನ್ನ ಗುರಿಯಾಗಿಸಿಕೊಂಡು ಟ್ವೀಟ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

  • "I have been forced to block Governor Jagdeep Dhankhar on Twitter. Everyday he was issuing tweets targeting and threatening govt officials as if we're his bonded labourers," says West Bengal Chief Minister Mamata Banerjee

    (File pic) pic.twitter.com/gwTTY2nBzc

    — ANI (@ANI) January 31, 2022 " class="align-text-top noRightClick twitterSection" data=" ">

ಪಶ್ಚಿಮ ಬಂಗಾಳ ರಾಜ್ಯಪಾಲರನ್ನ ಪದಚ್ಯುತಿಗೊಳಿಸುವಂತೆ ತಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನೇಕ ಸಲ ಪತ್ರ ಸಹ ಬರೆದಿರುವುದಾಗಿ ಮಮತಾ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಜ್ಯಪಾಲರು ಶಾಸನ ಸಭೆಯ ಸ್ಪೀಕರ್​ ತಾವು ಕೇಳಿರುವ ಮಾಹಿತಿ ನೀಡದೇ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.