ನವದೆಹಲಿ: ಜುಲೈ 17-18 ರಂದು ಬೆಂಗಳೂರಿನಲ್ಲಿ ನಡೆಯಲಿರುವ 'ಏಕತಾ ಸಭೆ'ಯಲ್ಲಿ ಭಾಗವಹಿಸಲು ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿಪಕ್ಷಗಳ ಪ್ರಮುಖ ನಾಯಕರನ್ನು ಆಹ್ವಾನಿಸಿದ್ದಾರೆ.
-
Congress president Mallikarjun Kharge invites leaders for next Opposition meet in Bengaluru on July 17-18
— ANI Digital (@ani_digital) July 11, 2023 " class="align-text-top noRightClick twitterSection" data="
Read @ANI Story | https://t.co/pvn3YsrH9S#MallikarjunKharge #Congress #Opposition pic.twitter.com/qYzk0rScmb
">Congress president Mallikarjun Kharge invites leaders for next Opposition meet in Bengaluru on July 17-18
— ANI Digital (@ani_digital) July 11, 2023
Read @ANI Story | https://t.co/pvn3YsrH9S#MallikarjunKharge #Congress #Opposition pic.twitter.com/qYzk0rScmbCongress president Mallikarjun Kharge invites leaders for next Opposition meet in Bengaluru on July 17-18
— ANI Digital (@ani_digital) July 11, 2023
Read @ANI Story | https://t.co/pvn3YsrH9S#MallikarjunKharge #Congress #Opposition pic.twitter.com/qYzk0rScmb
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೂ.23 ರಂದು ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದನ್ನು ಕಾಂಗ್ರೆಸ್ ಅಧ್ಯಕ್ಷರು ಪ್ರತಿಪಕ್ಷದ ನಾಯಕರಿಗೆ ಬರೆದ ಪತ್ರದಲ್ಲಿ ನೆನಪಿಸಿದ್ದಾರೆ. ನಮ್ಮ ಪ್ರಜಾಸತ್ತಾತ್ಮಕ ರಾಜಕೀಯಕ್ಕೆ ಧಕ್ಕೆ ತರುವ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ಸರ್ವಾನುಮತದ ಒಪ್ಪಂದಕ್ಕೆ ಬಂದಿದ್ದರಿಂದ ಸಭೆಯು ಉತ್ತಮ ಯಶಸ್ಸನ್ನು ಕಂಡಿದೆ ಎಂದು ಖರ್ಗೆ ತಮ್ಮ ಆಹ್ವಾನ ಪತ್ರಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಜುಲೈನಲ್ಲಿ ಮತ್ತೆ ಭೇಟಿಯಾಗಲು ನಾವು ಒಪ್ಪಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷರು ಇದೇ ವೇಳೆ ಇತರ ನಾಯಕರಿಗೆ ನೆನಪಿಸಿದ್ದಾರೆ.
ಇದನ್ನೂ ಓದಿ: ಬಜೆಟ್ ಅಧಿವೇಶನಕ್ಕೆ ಜಂಟಿ ಕಾರ್ಯತಂತ್ರ, ಫೆಬ್ರವರಿ 1ರಂದು ಪ್ರತಿಪಕ್ಷಗಳ ಸಭೆ!
"ಈ ಚರ್ಚೆಗಳನ್ನು ಮುಂದುವರಿಸುವುದು ಮತ್ತು ನಾವು ಸೃಷ್ಟಿಸಿದ ಆ ವೇಗವನ್ನು ಹಾಗೆಯೇ ಮುಂದುವರಿಸುವುದು ಮುಖ್ಯವಾಗಿದೆ ಎಂದು ನಾನು ನಂಬುತ್ತೇನೆ. ನಮ್ಮ ದೇಶ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಕಂಡು ಹಿಡಿಯಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ."ಅದರ ಮುಂದುವರಿಕೆಯಾಗಿ, ಜು.17 ರಂದು ಸಂಜೆ 6.00 ಗಂಟೆಗೆ ಬೆಂಗಳೂರಿನಲ್ಲಿ ರಾತ್ರಿ ಊಟದ ನಂತರ ಸಭೆಗೆ ಹಾಜರಾಗಲು ಅನುಕೂಲವಾಗುವಂತೆ ನಾನು ನಿಮ್ಮನ್ನು ಕೋರುತ್ತೇನೆ. ಸಭೆ ಜು.18 2023 ರಂದು ಬೆಳಗ್ಗೆ 11.00 ಗಂಟೆಯಿಂದ ಮುಂದುವರಿಯುತ್ತದೆ. ಬೆಂಗಳೂರಿನಲ್ಲಿ ನಿಮ್ಮನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಖರ್ಗೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜುಲೈ 13-14ರಂದು ಪ್ರತಿಪಕ್ಷಗಳ ಸಭೆ: ಶರದ್ ಪವಾರ್
ಪಾಟ್ನಾದಲ್ಲಿ ನಡೆದ ಮೊದಲ ಸಭೆ: 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 15ಕ್ಕೂ ಹೆಚ್ಚು ಪಕ್ಷಗಳು ಭಾಗವಹಿಸಿದ್ದ ಮೊದಲ ವಿರೋಧ ಪಕ್ಷದ ಸಭೆಯನ್ನು ಪಾಟ್ನಾದಲ್ಲಿ ನಡೆಸಲಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸೇರಿದಂತೆ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳ ಕಾರ್ಯತಂತ್ರವನ್ನು ವಿವರಿಸಲು ಈ ಸಭೆ ನಡೆಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಹಣಿಯಲು ಭಾರಿ ಪ್ಲ್ಯಾನ್: 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಪಕ್ಷಗಳನ್ನು ಸಜ್ಜುಗೊಳಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹತ್ವದ ಸಭೆ ಕರೆದಿದ್ದರು.
ಇದನ್ನೂ ಓದಿ: Mega opposition meet: ಪಾಟ್ನಾದ ಬೃಹತ್ ಪ್ರತಿಪಕ್ಷಗಳ ಸಭೆಗೆ ಕೆಸಿಆರ್ ಅನುಮಾನ, ಉಳಿದ ನಾಯಕರ ಹಾಜರಿ ಖಚಿತ