ETV Bharat / bharat

ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದೇ ಮೋದಿ 'ಅಚ್ಛೇ ದಿನ್': ಖರ್ಗೆ ಆಕ್ರೋಶ - ಮಲ್ಲಿಕಾರ್ಜುನ್​ ಖರ್ಗೆ

ನರೇಂದ್ರ ಮೋದಿ ಅಚ್ಛೇ ದಿನ ವಿಚಾರವಾಗಿ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ವಾಗ್ದಾಳಿ ನಡೆಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದೇ ಕೇಂದ್ರದ ದೊಡ್ಡ ಸಾಧನೆ ಎಂದಿದ್ದಾರೆ.

Mallikarjun Kharge
Mallikarjun Kharge
author img

By

Published : Jul 2, 2021, 3:37 PM IST

ನವದೆಹಲಿ: ​ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಮೇಲಿಂದ ಮೇಲೆ ಏರಿಕೆಯಾಗುತ್ತಲೇ ಇದೆ. ಈ ಬಗ್ಗೆ ಟೀಕಾಸ್ತ್ರ ಪ್ರಯೋಗಿಸಿರುವ ಕೈ ನಾಯಕ ಮಲ್ಲಿಕಾರ್ಜುನ್​ ಖರ್ಗೆ, ಇದೇ ಪ್ರಧಾನಿ ಮೋದಿಯವರ 'ಅಚ್ಛೇ ದಿನ್'​ ಎಂದಿದ್ದಾರೆ.

  • PM @narendramodi’s #AccheDin means an unprecedented inflationary & economic crisis. Thanks to bad policies, essential items like food, LPG, fuel, cement etc. are now luxuries for the common man.

    This is severely exacerbating the misery unleashed by #COVID19

    1/n

    — Leader of Opposition, Rajya Sabha (@LoPIndia) July 2, 2021 " class="align-text-top noRightClick twitterSection" data=" ">

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನ ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಖರ್ಗೆ, ನರೇಂದ್ರ ಮೋದಿ ಪ್ರಕಾರ ಅಚ್ಛೇ ದಿನ್​ ಅಂದರೆ, ಅತಿಯಾದ ಹಣದುಬ್ಬರ, ಆರ್ಥಿಕತೆ ಕುಸಿತ. ಇಂತಹ ಕೆಟ್ಟ ರಾಜಕೀಯ ನಡೆಸಿರುವುದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದಾರೆ.

ಜನಸಾಮಾನ್ಯರ ಅಗತ್ಯ ವಸ್ತುಗಳಾಗಿರುವ ಎಲ್​​ಪಿಜಿ, ತೈಲ, ಸಿಮೆಂಟ್​ ಬೆಲೆ ಏರಿಕೆ ಮಾಡಿದ್ದು ನಿಮ್ಮ ಸಾಧನೆಯಾಗಿದೆ. ಕಡಿಮೆ ಬೆಲೆಗೆ ಲಭ್ಯವಾಗಬೇಕಾಗಿದ್ದ ವಸ್ತುಗಳು ಇದೀಗ ದುಬಾರಿ ಬೆಲೆಗೆ ಲಭ್ಯವಾಗುವಂತೆ ಮಾಡಿದ್ದು, ಇವು ಸಾಮಾನ್ಯ ಜನರಿಗೆ ಲಕ್ಸುರಿಯಾಗಿ ಪರಿಣಮಿಸಿವೆ ಎಂದಿದ್ದಾರೆ.

ಇದನ್ನೂ ಓದಿರಿ: ದುಬೈನಿಂದ ಬೆಂಗಳೂರು ಏರ್ಪೋರ್ಟ್‌ಗೆ ಬಂದ ಮಹಿಳೆ ಸೂಟ್‌ಕೇಸ್‌ನಲ್ಲಿ 56 ಕೋಟಿ ಮೌಲ್ಯದ ಹೆರಾಯಿನ್!

ಈ ಹಿಂದೆ ಕೂಡ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಖರ್ಗೆ, ಕೋವಿಡ್​ ನಿಯಂತ್ರಣದ ವಿಚಾರದಲ್ಲಿ ಕೇಂದ್ರ ಎಡವಿದೆ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.