ಚೆನ್ನೈ(ತಮಿಳುನಾಡು): ವಿವಿಧ ಯೋಜನೆಗಳಿಗೆ ಚಾಲನೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಪ್ರವಾಸ ಕೈಗೊಂಡಿದ್ದು, ಚೆನ್ನೈನ ನೆಹರು ಮೈದಾನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದರು. ಇವರೊಂದಿಗೆ ಇದೇ ಮೊದಲ ಸಲ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವೇದಿಕೆ ಹಂಚಿಕೊಂಡು, ಮಾತನಾಡಿದರು.
ಹಿಂದಿ ಭಾಷೆಗೆ ಸರಿಸಮಾನವಾಗಿ ತಮಿಳನ್ನ ಅಧಿಕೃತ ಭಾಷೆ ಎಂದು ಘೋಷಣೆ ಮಾಡುವಂತೆ ಸಿಎಂ ಸ್ಟಾಲಿನ್ ಒತ್ತಾಯ ಮಾಡಿದ್ದು, ಮದ್ರಾಸ್ ಹೈಕೋರ್ಟ್ನಲ್ಲಿ ಅಧಿಕೃತ ಭಾಷೆಯನ್ನಾಗಿ ಬಳಕೆ ಮಾಡಲು ಮೋದಿ ಮೇಲೆ ಒತ್ತಡ ಹೇರಿದರು. ತಮಿಳು ವಿಧಾನಸಭೆಯಲ್ಲಿ ಇತ್ತೀಚೆಗೆ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ಗೆ ವಿನಾಯಿತಿ ಮಸೂದೆ ಅಂಗೀಕಾರ ಮಾಡಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ, ರಾಜ್ಯಕ್ಕೆ ಬರುವ 14,006 ಕೋಟಿ ಜಿಎಸ್ಟಿ ಹಣ ನೀಡುವಂತೆ ಮನವಿ ಮಾಡಿಕೊಂಡರು.
ಕಳೆದ ವರ್ಷ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಿಎಂಕೆ, ತಮಿಳು ಭಾಷೆಗೆ ಅಧಿಕೃತ ಮತ್ತು ಆಡಳಿತಾತ್ಮಕ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯ ಮಾಡುತ್ತಾ ಇದೆ. ಇಂದಿನ ಕಾರ್ಯಕ್ರಮದಲ್ಲೂ ಸ್ಟಾಲಿನ್ ಈ ವಿಷಯ ಪ್ರಸ್ತಾಪ ಮಾಡಿ, ಎಲ್ಲರ ಗಮನ ಸೆಳೆದರು.
-
#WATCH | Tamil Nadu: Prime Minister Narendra, in the presence of CM MK Stalin, lays the foundation stone of development works worth over Rs. 31,000 crores, including the Bangalore-Chennai Expressway, at Jawaharlal Nehru Stadium in Chennai. pic.twitter.com/le2FqoSnIW
— ANI (@ANI) May 26, 2022 " class="align-text-top noRightClick twitterSection" data="
">#WATCH | Tamil Nadu: Prime Minister Narendra, in the presence of CM MK Stalin, lays the foundation stone of development works worth over Rs. 31,000 crores, including the Bangalore-Chennai Expressway, at Jawaharlal Nehru Stadium in Chennai. pic.twitter.com/le2FqoSnIW
— ANI (@ANI) May 26, 2022#WATCH | Tamil Nadu: Prime Minister Narendra, in the presence of CM MK Stalin, lays the foundation stone of development works worth over Rs. 31,000 crores, including the Bangalore-Chennai Expressway, at Jawaharlal Nehru Stadium in Chennai. pic.twitter.com/le2FqoSnIW
— ANI (@ANI) May 26, 2022
ತಮಿಳುನಾಡಿನಲ್ಲಿ ಒಟ್ಟು 11 ಯೋಜನೆಗಳಿಗೆ ನಮೋ ಶಿಲಾನ್ಯಾಸ ನಡೆಸಲಿದ್ದು, ಇದಕ್ಕಾಗಿ 31,500 ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದೆ. ಚೆನ್ನೈನ ಜವಾಹರ್ಲಾಲ್ ನೆಹರು ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಇದೇ ವೇಳೆ, ತಮಿಳುನಾಡಿನಲ್ಲಿ ನಿರ್ಮಾಣಗೊಂಡಿರುವ 1,152 ನಿವಾಸಗಳನ್ನ ಫಲಾನುಭವಿಗಳಿಗೆ ಹಂಚಿಕೆ ಮಾಡಿದರು. ಇದಕ್ಕೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಚೆನ್ನೈನಲ್ಲಿ ರೋಡ್ ಶೋ ನಡೆಸಿದರು.