ETV Bharat / bharat

ಮಹಾತ್ಮನ ಸ್ಮರಣೆ : ತಮ್ಮ ಸಾವನ್ನು ಊಹಿಸಿದ್ದರಾ ಗಾಂಧೀಜಿ?.. ಕೊನೇ ದಿನದ ಸನ್ನಿವೇಶಗಳು.. - ಮಹಾತ್ಮ ಗಾಂಧಿಯವರ ಕುತೂಹಲಕಾರಿ ವಿಚಾರಗಳು

ಜನವರಿ 30ರಂದು ಬೆಳಗ್ಗೆ ಅಮೆರಿಕದ ಲೈಫ್ ಮ್ಯಾಗಜೀನ್ ಫೋಟೋಗ್ರಾಫರ್ ಮಾರ್ಗರೇಟ್ ಬರ್ಕ್ ವೈಟ್ ಗಾಂಧೀಜಿವರನ್ನು ಸಂದರ್ಶಿಸಲು ಬಂದಿದ್ದರು. ಅದೇ ಗಾಂಧೀಜಿಯವರ ಕೊನೆಯ ಸಂದರ್ಶನ..

MAHATMA GANDHI PREDICTS HIS DEATH BEFORE DAY
ತಮ್ಮ ಸಾವನ್ನು ಊಹಿಸಿದ್ದರಾ ಮಹಾತ್ಮ ಗಾಂಧಿ?.. ಕೊನೇ ದಿನದ ಸನ್ನಿವೇಶಗಳು..
author img

By

Published : Jan 30, 2022, 12:11 PM IST

ಅಂದು ಜನವರಿ 29, 1948. ದೇಶ ವಿಭಜನೆಯ ದುಷ್ಪರಿಣಾಮಗಳು ಕಡಿಮೆಯಾಗಿದ್ದರೂ, ಅಲ್ಲಲ್ಲಿ ಮತೀಯ ಸಂಘರ್ಷಗಳು ನಡೆಯುತ್ತಿದ್ದ ಸಮಯ.. ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಮತ್ತು ಅವರ ಕುಟುಂಬ ದೆಹಲಿಯಲ್ಲಿ ಮಹಾತ್ಮ ಗಾಂಧೀಜಿ ಅವರು ತಂಗಿದ್ದ ಬಿರ್ಲಾ ಹೌಸ್‌ಗೆ ಬಂದಿತ್ತು. ನೆಹರು, ಅವರ ಸಹೋದರಿ ಕೃಷ್ಣ, ಮಗಳು ಇಂದಿರಾ, ನಾಲ್ಕು ವರ್ಷದ ಮೊಮ್ಮಗ ರಾಜೀವ್ ಗಾಂಧಿ ಮತ್ತು ಸರೋಜಿನಿ ನಾಯ್ಡು ಬಿರ್ಲಾಹೌಸ್​ ಬಳಿಗೆ ಬಂದಿದ್ದರು.

ಕೆಲ ಸಮಯದ ನಂತರ ನಾಲ್ಕು ವರ್ಷದ ರಾಜೀವ್ (ಮಾಜಿ ಪ್ರಧಾನಿ ರಾಜೀವ್ ಗಾಂಧಿ) ಅತಿಥಿಗಳು ತಂದಿದ್ದ ಎಲ್ಲಾ ಹೂವುಗಳನ್ನು ಎತ್ತಿಕೊಂಡು ಗಾಂಧೀಜಿಯವರ ಪಾದದ ಸುತ್ತಲೂ ಜೋಡಿಸಿದ್ದ. ಈ ವೇಳೆ ರಾಜೀವ್​ನ ಕಿವಿ ಚಿವುಟಿದ ಮಹಾತ್ಮ ಗಾಂಧಿ 'ಹಾಗೆ ಮಾಡಬೇಡ.. ಸತ್ತವರಿಗೆ ಹಾಗೆ ಮಾಡುತ್ತಾರೆ' ಎಂದು ತಮಾಷೆಯಾಗಿ ಹೇಳಿದ್ದರು.

ನೆಹರು ಕುಟುಂಬ ಬಿರ್ಲಾ ಹೌಸ್​ನಿಂದ ತೆರಳಿದ ಬಳಿಕ, ಧಾರ್ಮಿಕ ಗಲಭೆಗಳಲ್ಲಿ ಗಾಯಗೊಂಡ ಗ್ರಾಮಸ್ಥರ ಗುಂಪೊಂದು ಬಿರ್ಲಾ ಹೌಸ್ ಬಳಿ ಬಂದಿತ್ತು. ಆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ 'ನೀನು ನಮ್ಮನ್ನು ನಾಶ ಮಾಡಿದೆ. ಈಗ ನೀನು ಮಾಡಿರುವ ನಷ್ಟ ಸಾಕು. ಈಗಲಾದರೂ ಎಲ್ಲರನ್ನೂ ಬಿಟ್ಟು ಹಿಮಾಲಯಕ್ಕೆ ಹೋಗು' ಎಂದು ಗಾಂಧೀಜಿಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದನು.

'ಇದು ಸಾವಿನ ಸಂಕೇತ': ಅಂದಿನ ರಾತ್ರಿ ಗಾಂಧೀಜಿಯವರಿಗೆ ನಿದ್ರೆ ಬಂದಿರಲಿಲ್ಲ. ಯಾವತ್ತೂ ಎಷ್ಟೇ ಕೆಲಸ ಮಾಡಿದರೂ, ಸುಸ್ತು ಎಂದು ಹೇಳದ ವ್ಯಕ್ತಿ ಅಂದು 'ನನಗೆ ಬೇಸರವಾಗುತ್ತಿದೆ' ಎಂದು ಹೇಳಿಕೊಂಡಿದ್ದರು. ಬೇಸರವಾಗಿದ್ದರೂ, ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷ ಅನುಸರಿಸಬೇಕಾದ ನೀತಿಗಳ ಬಗ್ಗೆ ಲೇಖನವೊಂದನ್ನು ಅವರು ಬರೆದಿದ್ದರು.

ಇದರ ಜೊತೆಗೆ 'ಆತನ ಮಾತುಗಳು ದೇವರ ವಾಕ್ಯಗಳಂತೆ ನನಗೆ ಭಾಸವಾಗುತ್ತಿವೆ. ಇದು ಸಾವಿನ ಸಂಕೇತ. ನನಗೆ ಹಿಮಾಲಯದಲ್ಲಿ ಶಾಂತಿ ಇಲ್ಲ. ಈ ಸಂಘರ್ಷಗಳೊಂದಿಗೆ ನಾನು ಶಾಂತಿಯನ್ನು ಬಯಸುತ್ತೇನೆ. ಇದೆಲ್ಲರ ನಡುವೆ ನಾನು ಸಾಯಲು ಬಯಸುತ್ತೇನೆ. ಎಲ್ಲವೂ ದೇವರ ಇಚ್ಛೆ' ಎಂದು ಮೊಮ್ಮಗಳು ಮನುಗೆ ಹೇಳಿದ್ದರು ಮಹಾತ್ಮಗಾಂಧಿ.

ಪದೇಪದೆ ಗಾಂಧೀಜಿ ಕೆಮ್ಮುತ್ತಿದ್ದರು. ಈ ವೇಳೆ ಪೆನ್ಸಿಲಿನ್ ಇಂಜೆಕ್ಷನ್ ಕೊಡೋಕೆ ಮುಂದಾದ ಮನು ಅವರನ್ನು ತಡೆದ ಗಾಂಧೀಜಿ 'ಯಾವ ಕ್ಷಣದಲ್ಲಿ ಏನಾಗುತ್ತೋ ಯಾರಿಗೆ ಗೊತ್ತು? ನಾನು ಬದುಕುತ್ತೇನೆಯೋ ಇಲ್ಲವೋ? ಎಂದು ಹೇಳಿದ್ದರು. ಒಮ್ಮೊಮ್ಮೆ ನಾನು 125 ವರ್ಷ ಬದುಕುತ್ತೇನೆ ಎಂದು ಗಾಂಧೀಜಿ ಹೇಳುತ್ತಿದ್ದರು..

'ಬದುಕಿದ್ದರೆ ಸಿಗುತ್ತೇನೆ ಎಂದು ಹೇಳು' : ಜನವರಿ 30ರಂದು ಬೆಳಗ್ಗೆ ಅಮೆರಿಕದ ಲೈಫ್ ಮ್ಯಾಗಜೀನ್ ಫೋಟೋಗ್ರಾಫರ್ ಮಾರ್ಗರೇಟ್ ಬರ್ಕ್ ವೈಟ್ ಗಾಂಧೀಜಿವರನ್ನು ಸಂದರ್ಶಿಸಲು ಬಂದಿದ್ದರು. ಅದೇ ಗಾಂಧೀಜಿಯವರ ಕೊನೆಯ ಸಂದರ್ಶನ. 125 ವರ್ಷ ಬದುಕುವ ನಿಮ್ಮ ಆಸೆ ಇನ್ನೂ ಇದೆಯೇ ಎಂದು ಮಾರ್ಗರೇಟ್ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗಾಂಧೀಜಿ 'ಜಗತ್ತಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ನೋಡಿದಾಗ ನನಗೆ ಆ ಭರವಸೆ ಹೋಗಿತ್ತು ಎಂದು ಗಾಂಧೀಜಿ ಉತ್ತರಿಸಿದ್ದರು.

ಅಂದು ಸಂಜೆ ನಾಲ್ಕು ಗಂಟೆಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜೊತೆಗೆ ಮಹಾತ್ಮ ಗಾಂಧಿಯವರ ಸಭೆಯೊಂದು ಇತ್ತು. ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ನೆಹರು ಅವರ ನಡುವಿನ ಭಿನ್ನಾಭಿಪ್ರಾಯಗಳ ಕುರಿತ ಸಭೆ ಅದಾಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆ ಅದಾಗಿತ್ತು. ಈ ವೇಳೆ ಕೆಲವರು ಮಹಾತ್ಮ ಗಾಂಧಿಯನ್ನು ಭೇಟಿಯಾಗಲು ಬಂದಿದ್ದರು. ಈ ವೇಳೆ 'ಪ್ರಾರ್ಥನೆಯ ನಂತರ ಭೇಟಿಯಾಗಲು ಅವರಿಗೆ ಹೇಳು.. ಬದುಕಿದ್ದರೆ ಭೇಟಿಯಾಗುತ್ತೇನೆ' ಎಂದು ಗಾಂಧಿ ತನ್ನ ಸಹಾಯಕನಿಗೆ ಹೇಳಿದ್ದರು.

ಸಮಯ ತಪ್ಪಿದ್ದರು ಗಾಂಧೀಜಿ : ಪ್ರತಿದಿನ ಐದು ಗಂಟೆಗೆ ಪ್ರಾರ್ಥನೆ ಆರಂಭವಾಗುತ್ತಿತ್ತು. ಆದರೆ, ಅಂದು ಪ್ರಾರ್ಥನೆಗೆ ತಡವಾಗಿತ್ತು. ಐದು ಗಂಟೆಯಾದರೂ ಪಟೇಲ್ ಅವರೊಂದಿಗಿನ ಚರ್ಚೆ ಮುಗಿದಿರಲಿಲ್ಲ. ಮೊಮ್ಮಗಳು ಮನು ಗಡಿಯಾರವನ್ನು ತೋರಿಸಿ 5 ಗಂಟೆ ಐದು ನಿಮಿಷ ಎಂದು ಗಾಂಧೀಜಿಗೆ ತೋರಿಸಿದ್ದರು. ಗಾಂಧಿ ಸ್ಥಳದಿಂದ ಮೇಲೆದ್ದರು.

ಪಟೇಲ್ ಅಲ್ಲಿಂದ ತೆರಳಿದರು. ಪ್ರಾರ್ಥನೆಗೆ 10 ನಿಮಿಷ ತಡವಾಗಿತ್ತು. ಹತ್ತಿರದ ಪ್ರಾರ್ಥನಾ ಸ್ಥಳಕ್ಕೆ ಬೇಗ ಬೇಗ ತೆರಳುತ್ತಿದ್ದರು. ಗಾಂಧೀಜಿಯ ಸಹಾಯಕರೂ ಅವರ ಹಿಂದೆ ಬರುತ್ತಿದ್ದರು. ಗಾಂಧೀಜಿ ಹೊರಡುತ್ತಿದ್ದ ದಾರಿಯಲ್ಲೇ ಮರಣ ಕಾದಿತ್ತು. ಗಾಂಧೀಜಿಯ ಮನಸ್ಸಿನಲ್ಲಿ ಏನಿತ್ತೋ ಗೊತ್ತಿಲ್ಲ. ಸರಿಯಾಗಿ 5 ಗಂಟೆ 17 ನಿಮಿಷಕ್ಕೆ ಗಾಂಧೀಜಿಯವರ ಸಮಯ ನಿಂತು ಹೋಗಿತ್ತು..

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.