ETV Bharat / bharat

ಅಪರೂಪದ ನಕ್ಷತ್ರ ಆಮೆಗಳ ಅಕ್ರಮ ಮಾರಾಟ: ಮುಂಬೈಯಲ್ಲಿ ಆರೋಪಿ ಸೆರೆ - ಅದೃಷ್ಟ ಬದಲಾಗುತ್ತದೆ ಎಂಬ ಭ್ರಮೆ

35 ಲಕ್ಷ ರೂ ಮೌಲ್ಯದ 20 ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Indian star tortoises
ಭಾರತೀಯ ನಕ್ಷತ್ರ ಆಮೆ
author img

By

Published : Dec 13, 2022, 4:00 PM IST

ಮುಂಬೈ: ನಗರದ ಪಶ್ಚಿಮ ಬೊರಿವಿಲಿಯಲ್ಲಿ ಇಪ್ಪತ್ತು ಅಪರೂಪದ ನಕ್ಷತ್ರ ಆಮೆಗಳ ಅಕ್ರಮ ಸಾಗಣೆ ಮತ್ತು ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಸೆರೆ ಹಿಡಿದಿದ್ದಾರೆ. ನದೀಮ್ ಶೇಖ್ ಬಂಧಿತ ಆರೋಪಿ. ಗಣಪತ್ ಪಾಟೀಲ್ ನಗರದಲ್ಲಿ ಲಕ್ಷಾಂತರ ರೂ ಮೌಲ್ಯದ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣೆಗೆ ಸಿಕ್ಕಿತ್ತು.

ಆರೋಪಿಯನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಕಲಂ 9, 39, 44, 48, 48, 51 ರ ಅಡಿಯಲ್ಲಿ ಬಂಧಿಸಲಾಗಿದೆ. ಆರೋಪಿ ಈ ಸರೀಸೃಪ ಜೀವಿಗಳನ್ನು ಎಲ್ಲಿಂದ ಪಡೆದಿದ್ದ. ಆತನ ಗ್ರಾಹಕರು ಯಾರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಕ್ಷತ್ರ ಆಮೆಗಳ ಬಗ್ಗೆ ಒಂದಿಷ್ಟು ಮಾಹಿತಿ: ಭಾರತೀಯ ನಕ್ಷತ್ರ ಆಮೆ ಅಥವಾ ಜಿಯೋಚೆಲೋನ್ ಎಲಿಗನ್ಸ್ ಎಂದು ಇವುಗಳನ್ನು ಕರೆಯುತ್ತಾರೆ. ಇದರ ವ್ಯಾಪಾರ ಮತ್ತು ಸಾಕುಪ್ರಾಣಿಗಳಾಗಿ ಮನೆಯಲ್ಲಿ ಸಾಕುವುದು ಭಾರತದಲ್ಲಿ ಕಾನೂನುಬಾಹಿರ. ಭಾರತೀಯ ನಕ್ಷತ್ರ ಆಮೆಗಳು 10 ಇಂಚು ಉದ್ದದವರೆಗೆ ಬೆಳೆಯುತ್ತವೆ. ಹೆಚ್ಚಾಗಿ ಸಸ್ಯಾಹಾರಿಗಳು. ಹುಲ್ಲು, ಹಣ್ಣು, ಹೂವು ಹಾಗು ಗಿಡಗಳ ಎಲೆಗಳನ್ನು ತಿಂದು ಬದುಕುತ್ತವೆ. ಇವುಗಳ ಮೈಮೇಲೆ ಸುಂದರವಾದ ಹಳದಿ ಮತ್ತು ಕಪ್ಪು ಬಣ್ಣ ಹಾಗು ನಕ್ಷತ್ರಾಕಾರ ಮತ್ತು ಪಿರಮಿಡ್ ತರಹದ ವಿನ್ಯಾಸಗಳಿವೆ.

ನಕ್ಷತ್ರ ಆಮೆಗಳು ಅವುಗಳ ಸೌಂದರ್ಯದಿಂದ ಕಳ್ಳಸಾಗಣೆಯಾಗುತ್ತಿವೆ. ಶ್ರೀಮಂತರು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಲು ಅಕ್ರಮವಾಗಿ ಖರೀದಿಸುತ್ತಾರೆ. ಸ್ಟಾರ್ ಆಮೆಯನ್ನು ಸಾಕುವುದರಿಂದ ಅದೃಷ್ಟ ಬದಲಾಗುತ್ತದೆ ಎಂಬ ಭ್ರಮೆಯಿದೆ. ಈ ಕಾರಣದಿಂದ ಆಮೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಬಹಳಷ್ಟು ಬೇಡಿಕೆಯಿದೆ.

ಇದನ್ನೂ ಓದಿ: ಒಂದು ಬಾರಿ ಕಚ್ಚಿದರೆ ಹೊರ ಬರುವ ವಿಷದಿಂದ 100 ಜನರ ಸಾವು..! ಇದು ಜಗತ್ತಿನ ವಿಷಕಾರಿ ಹಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.