ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು, ನಿನ್ನೆಗಿಂತಲೂ ಇಂದು ಹೆಚ್ಚಿನ ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಅಲ್ಲಿನ ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.
-
Maharashtra reports 15,817 new #COVID19 cases, 11,344 discharges and 56 deaths in last 24 hours.
— ANI (@ANI) March 12, 2021 " class="align-text-top noRightClick twitterSection" data="
Total cases 22,82,191
Total recoveries 21,17,744
Death toll 52,723
Active cases 1,10,485 pic.twitter.com/0151QFwsFL
">Maharashtra reports 15,817 new #COVID19 cases, 11,344 discharges and 56 deaths in last 24 hours.
— ANI (@ANI) March 12, 2021
Total cases 22,82,191
Total recoveries 21,17,744
Death toll 52,723
Active cases 1,10,485 pic.twitter.com/0151QFwsFLMaharashtra reports 15,817 new #COVID19 cases, 11,344 discharges and 56 deaths in last 24 hours.
— ANI (@ANI) March 12, 2021
Total cases 22,82,191
Total recoveries 21,17,744
Death toll 52,723
Active cases 1,10,485 pic.twitter.com/0151QFwsFL
ಕಳೆದ 24 ಗಂಟೆಯಲ್ಲಿ 15,817 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 56 ಜನರು ಸಾವನ್ನಪ್ಪಿದ್ದಾರೆ. ಇದರ ಜತೆಗೆ 11,344 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಈಗಾಗಲೇ ನಾಗ್ಪುರ್, ಅಕೋಲಾದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದ್ದು, ಪುಣೆಯಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಕೊರೊನಾ ಆರ್ಭಟ: ಪುಣೆಯಲ್ಲಿ ನೈಟ್ ಕರ್ಫ್ಯೂ, ಶಾಲಾ-ಕಾಲೇಜ್ ಬಂದ್!
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ನೆರೆಯ ಕರ್ನಾಟಕಕ್ಕೂ ಆತಂಕ ಮೂಡಿಸಿದ್ದು, ಗಡಿ ಭಾಗಗಳಲ್ಲಿ ಹೆಚ್ಚಿನ ಸೋಂಕಿತ ಪ್ರಕರಣ ದಾಖಲಾಗುವ ಸಾಧ್ಯತೆ ದಟ್ಟವಾಗಿದೆ. ಪ್ರಮುಖವಾಗಿ ಮುಂಬೈ, ಥಾಣೆ, ಪುಣೆ, ನಾಗ್ಪುರ್, ಅಕೋಲಾ ಹಾಗೂ ನಾಶಿಕ್ದಲ್ಲಿ ಹೆಚ್ಚಿನ ಸೋಂಕಿತ ಪ್ರಕರಣಗಳು ಕಂಡು ಬರುತ್ತಿವೆ.