ಪುಣೆ(ಮಹಾರಾಷ್ಟ್ರ): ಕ್ಯೂಟಿಸ್ ಬಯೋಟೆಕ್ ಎಂಬ ಮಹಾರಾಷ್ಟ್ರದ ನಾಂದೆಡ್ ಮೂಲದ ಔಷಧ ಉತ್ಪನ್ನಗಳ ಮಾರಾಟ ಸಂಸ್ಥೆಯೊಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ 'ಕೋವಿಶೀಲ್ಡ್' ಲಸಿಕೆ ವಿರುದ್ಧ ವಾಣಿಜ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದೆ.
'ಕೋವಿಶೀಲ್ಡ್' ಎನ್ನುವ ಹೆಸರಿನ ಬಳಕೆಗೆ ಸಂಬಂಧಿಸಿದಂತೆ ಮೊಕದ್ದಮೆ ಹೂಡಲಾಗಿದೆ. ತನ್ನ ಸ್ಯಾನಿಟೈಸೇಷನ್ ಉತ್ಪನ್ನಗಳಿಗೆ ಕೋವಿಶೀಲ್ಡ್ ಎಂಬ ಹೆಸರನ್ನು ಬಳಸಲು ನಿರ್ಧರಿಸಲಾಗಿತ್ತು. ಈ ವಿಚಾರವಾಗಿ ಸೆರಮ್ಗೂ ಮುನ್ನವೇ ನಾವು ಅನುಮತಿ ಕೇಳಿದ್ದೆವು ಎಂದು ಕ್ಯೂಟಿಸ್ ಬಯೋಟೆಕ್ ವಾದಿಸುತ್ತಿದೆ.
ಕಳೆದ ವರ್ಷ ಡಿಸೆಂಬರ್ 11ರಂದು ಕ್ಯೂಟಿಸ್ ಇಂತಹದ್ದೇ ಇನ್ನೊಂದು ವಿಚಾರವಾಗಿ ನ್ಯಾಯಾಲಯದ ಮಟ್ಟಿಲೇರಿತ್ತು. ಆ ಪ್ರಕರಣ ಇನ್ನೂ ಬಾಕಿ ಇರುವಾಗಲೇ ಈಗ ಸೆರಮ್ ವಿರುದ್ಧ ಹೊಸದಾಗಿ ದಾವೆ ಹೂಡಿದೆ.
ಆರಂಭದಲ್ಲಿ ಈ ಕುರಿತು ನಾಂದೆಡ್ನ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಸ್ಥಳೀಯ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸೆರಮ್ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆ ಪುಣೆ ವಾಣಿಜ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಪ್ರಕರಣವನ್ನು ಜನವರಿ 19 ರಂದು ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.