ಮುಂಬೈ(ಮಹಾರಾಷ್ಟ್ರ): ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹಲ್ಲೆ ಮಾಡಬಲ್ಲೆ, ಅವರನ್ನು ನಿಂದಿಸಬಲ್ಲೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ವಿವಾದಿತ ಹೇಳಿಕೆ ನೀಡಿದ್ದಾರೆ. ರ್‍ಯಾಲಿವೊಂದರಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಅವರು ಈ ರೀತಿಯಾಗಿ ಮಾತನಾಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿ ಜಿಲ್ಲಾ ಪರಿಷತ್ ಮತ್ತು ಪಂಚಾಯಿತಿ ಸಮಿತಿ ಚುನಾವಣೆಗೂ ಮುನ್ನ ನಡೆದ ರ್‍ಯಾಲಿಯಲ್ಲಿ ಅವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಪಟೋಲೆ, ಕಳೆದ 30 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ನನ್ನ ಹೆಸರಿನಲ್ಲಿ ಒಂದೇ ಒಂದು ಶಾಲೆಯೂ ಸಹ ಇಲ್ಲ. ನಾನು ಎಲ್ಲರಿಗೂ ಸಹಾಯ ಮಾಡುತ್ತೇನೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ನಾನು ಮೋದಿಗೆ ಹಲ್ಲೆ ಮಾಡಬಲ್ಲೆ, ಅವರನ್ನು ನಿಂದಿಸುವೆ. ಅದಕ್ಕಾಗಿಯೇ ಮೋದಿ ನನ್ನ ವಿರುದ್ಧ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿದ್ದರು ಎಂದರು.
ಇದನ್ನೂ ಓದಿ: 'ಭಾರತದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ': ವಿಶ್ವ ಆರ್ಥಿಕ ವೇದಿಕೆ ಉದ್ದೇಶಿಸಿ ಮೋದಿ ಭಾಷಣ
-
पाकिस्तानच्या सीमेनजीक पंजाबमध्ये मा. पंतप्रधान नरेंद्र मोदीजी @narendramodi यांचा ताफा 20 मिनिटे खोळंबून राहतो, तेथील काँग्रेसचे मुख्यमंत्री त्याची साधी दखल सुद्धा घेत नाहीत.
— Devendra Fadnavis (@Dev_Fadnavis) January 17, 2022 " class="align-text-top noRightClick twitterSection" data="
आता महाराष्ट्राचे काँग्रेस अध्यक्ष म्हणतात, मी मोदींना मारु शकतो, शिव्या देऊ शकतो... https://t.co/JdzCZkrpHi
">पाकिस्तानच्या सीमेनजीक पंजाबमध्ये मा. पंतप्रधान नरेंद्र मोदीजी @narendramodi यांचा ताफा 20 मिनिटे खोळंबून राहतो, तेथील काँग्रेसचे मुख्यमंत्री त्याची साधी दखल सुद्धा घेत नाहीत.
— Devendra Fadnavis (@Dev_Fadnavis) January 17, 2022
आता महाराष्ट्राचे काँग्रेस अध्यक्ष म्हणतात, मी मोदींना मारु शकतो, शिव्या देऊ शकतो... https://t.co/JdzCZkrpHiपाकिस्तानच्या सीमेनजीक पंजाबमध्ये मा. पंतप्रधान नरेंद्र मोदीजी @narendramodi यांचा ताफा 20 मिनिटे खोळंबून राहतो, तेथील काँग्रेसचे मुख्यमंत्री त्याची साधी दखल सुद्धा घेत नाहीत.
— Devendra Fadnavis (@Dev_Fadnavis) January 17, 2022
आता महाराष्ट्राचे काँग्रेस अध्यक्ष म्हणतात, मी मोदींना मारु शकतो, शिव्या देऊ शकतो... https://t.co/JdzCZkrpHi
ಕೈ ನಾಯಕನ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್, ಇತ್ತೀಚೆಗೆ ಪಂಜಾಬ್ನಲ್ಲಿ ಪ್ರಧಾನಿ ಮೋದಿ ಎದುರಿಸಿದ ಭದ್ರತಾ ಉಲ್ಲಂಘನೆ ಪ್ರಕರಣವನ್ನು ಪ್ರಸ್ತಾಪಿಸಿದ್ದು, ಮೋದಿ ಅವರಿಗೆ ಆದ ಭದ್ರತಾ ಲೋಪವನ್ನು ಪಂಜಾಬ್ ಸಿಎಂ ಗಮನಿಸಲಿಲ್ಲ, ಇದೀಗ ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷರು ಈ ರೀತಿಯಾಗಿ ಹೇಳಿಕೆ ನೀಡ್ತಿದ್ದಾರೆ ಎಂದರು.