ಮುಂಬೈ: ಕಳೆದ ಕೆಲ ವಾರಗಳಿಂದ ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ 50 ಸಾವಿರಕ್ಕೂ ಅಧಿಕ ಕೋವಿಡ್ ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಹೀಗಾಗಿ ಇಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ವಪಕ್ಷ ಸಭೆ ಕರೆದಿದ್ದರು.
ಸಭೆಯಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆ ಮಹಾಮಾರಿ ನಿಯಂತ್ರಣಕ್ಕೆ ಕಠಿಣ ಲಾಕ್ಡೌನ್ ಒಂದೇ ಪರಿಹಾರ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆದಿದ್ದು, ರಾಜ್ಯದಲ್ಲಿ ಪ್ರತಿದಿನ ಹೆಚ್ಚಿನ ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಕಾರಣ ಮತ್ತಷ್ಟು ಆತಂಕ ಸೃಷ್ಠಿಯಾಗಿದೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಲಾಕ್ಡೌನ್ ಬಿಟ್ಟು ನಮ್ಮ ಮುಂದೆ ಬೇರೆ ಆಯ್ಕೆ ಉಳಿದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
-
Maharashtra reports 55,411 new #COVID19 cases, 53,005 recoveries and 309 deaths in the last 24 hours
— ANI (@ANI) April 10, 2021 " class="align-text-top noRightClick twitterSection" data="
Total cases: 33,43,951
Total recoveries: 27,48,153
Death toll: 57,638
Active cases: 5,36,682 pic.twitter.com/58lLK158BH
">Maharashtra reports 55,411 new #COVID19 cases, 53,005 recoveries and 309 deaths in the last 24 hours
— ANI (@ANI) April 10, 2021
Total cases: 33,43,951
Total recoveries: 27,48,153
Death toll: 57,638
Active cases: 5,36,682 pic.twitter.com/58lLK158BHMaharashtra reports 55,411 new #COVID19 cases, 53,005 recoveries and 309 deaths in the last 24 hours
— ANI (@ANI) April 10, 2021
Total cases: 33,43,951
Total recoveries: 27,48,153
Death toll: 57,638
Active cases: 5,36,682 pic.twitter.com/58lLK158BH
ಇದನ್ನೂ ಓದಿ: ಬಂಗಾಳದ ಕೂಚ್ ಬಿಹಾರ ಹಿಂಸಾಚಾರ... ಮುಂದಿನ 3 ದಿನ ರ‍್ಯಾಲಿ ನಡೆಸದಂತೆ ನಿರ್ಬಂಧ!
ನಾಳೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಾರ್ಯಪಡೆಗಳೊಂದಿಗೆ ಸಭೆ ನಡೆಸಲಿದ್ದು, ಇದಾದ ಬಳಿಕ ಲಾಕ್ಡೌನ್ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಇದಕ್ಕೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವಿಂದ್ರ ಫಡ್ನವಿಸ್ ವಿರೋಧ ವ್ಯಕ್ತಪಡಿಸಿದ್ದು, ಲಾಕ್ಡೌನ್ ಹೇರಿಕೆ ಮಾಡಿದ್ರೆ ಜನರು ಗರಂ ಆಗಲಿದ್ದು, ವಾಣಿಜ್ಯ ವಹಿವಾಟು ಸಂಪೂರ್ಣವಾಗಿ ಬಂದ್ ಆಗಲಿದೆ. ಹೀಗಂತ ಲಾಕ್ಡೌನ್ಗೆ ನಮ್ಮಿಂದ ಯಾವುದೇ ವಿರೋಧವಿಲ್ಲ, ಆದರೆ ಸರಿಯಾದ ಯೋಜನೆ ತೆಗೆದುಕೊಂಡು ಲಾಕ್ಡೌನ್ ಘೋಷಣೆ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಇಂದು ಕೂಡ ದಾಖಲೆಯ 55,411 ಕೋವಿಡ್ ಪ್ರಕರಣ ದಾಖಲಾಗಿದ್ದು, 309 ಜನರು ಸಾವನ್ನಪ್ಪಿದ್ದಾರೆ. ಸದ್ಯ 5,36,682 ಸಕ್ರಿಯ ಪ್ರಕರಣಗಳಿವೆ.