ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಗೃಹ, ಹಣಕಾಸು ಸೇರಿ ಪ್ರಮುಖ ಖಾತೆಗಳನ್ನು ನೀಡಲಾಗಿದೆ.
ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ. ಜೂನ್ 30ರಂದು ಶಿಂಧೆ ಮುಖ್ಯಮುಂತ್ರಿಯಾಗಿ ಹಾಗೂ ಬಿಜೆಪಿಯ ನಾಯಕ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದಾದ 39 ದಿನಗಳ ನಂತರ ಅಂದರೆ ಅಗಸ್ಟ್ 9ರಂದು ಸಚಿವ ಸಂಪುಟ ರಚನೆ ಮಾಡಲಾಗಿತ್ತು. ಇದೀಗ ಆರು ದಿನಗಳ ನಂತರ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಸಚಿವ ಸಂಪುಟದಲ್ಲಿ ಸಿಎಂ ಏಕನಾಥ್ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡ್ನವೀಸ್ ಸೇರಿ ಒಟ್ಟು 20 ಜನರಿದ್ದಾರೆ. ಶಿಂಧೆ ನಗರಾಭಿವೃದ್ಧಿ, ಐಟಿ, ಜಿಎಡಿ, ಪಿಡಬ್ಲ್ಯೂಡಿ (ಸಾರ್ವಜನಿಕ ಯೋಜನೆಗಳು), ಸಾರಿಗೆ ಮತ್ತು ಇತರ ಇಲಾಖೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಇತ್ತ, ಫಡ್ನವೀಸ್ ಅವರಿಗೆ ಗೃಹ, ಹಣಕಾಸು ಮತ್ತು ಯೋಜನೆ, ಕಾನೂನು ಮತ್ತು ನ್ಯಾಯ, ಜಲಸಂಪನ್ಮೂಲ, ಇಂಧನ, ವಸತಿ ಖಾತೆಗಳನ್ನು ನೀಡಲಾಗಿದೆ.
ಇದನ್ನೂ ಓದಿ: ತಗ್ಗಿದ ಪ್ರಾದೇಶಿಕ, ಲಿಂಗ ಅಸಮಾನತೆ.. ಹೆಣ್ಣುಮಕ್ಕಳು ದೇಶದ ದೊಡ್ಡ ಭರವಸೆ: ರಾಷ್ಟ್ರಪತಿ ಮುರ್ಮು