ETV Bharat / bharat

ಚಿಕಿತ್ಸೆಗೆ ಬಂದು ಸಿಕ್ಕಿಬಿದ್ದ ಮೋಸ್ಟ್ ವಾಂಟೆಡ್ ನಕ್ಸಲ್​​: ಈತನ ತಲೆಗೆ ಘೋಷಿಸಲಾಗಿತ್ತು 15 ಲಕ್ಷ ರೂ. ಬಹುಮಾನ - ನಕ್ಸಲ್​ ಚಟುವಟಿಕೆ

ಜಾರ್ಖಂಡ್‌ನ ಮೋಸ್ಟ್ ವಾಂಟೆಡ್ ನಕ್ಸಲ್​ ಲಿಸ್ಟ್​ನಲ್ಲಿದ್ದ ನಕ್ಸಲ್‌ ನಾಯಕನನ್ನು ಮಹಾರಾಷ್ಟ್ರದ ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

maharashtra-ats-arrests-jharkhand-maoist-leader-carrying-rs-15-lakh-bounty
ಚಿಕಿತ್ಸೆಗೆ ಬಂದು ಸಿಕ್ಕಿ ಬಿದ್ದ ಮೋಸ್ಟ್ ವಾಂಟೆಡ್ ನಕ್ಸಲ್​​: ಈತನ ತಲೆಗೆ ಘೋಷಿಸಲಾಗಿತ್ತು 15 ಲಕ್ಷ ರೂ. ಬಹುಮಾನ
author img

By

Published : Sep 18, 2022, 7:58 PM IST

ನಲಸೋಪಾರಾ (ಮಹಾರಾಷ್ಟ್ರ): ಜಾರ್ಖಂಡ್‌ನ ನಕ್ಸಲ್‌ ನಾಯಕನೊಬ್ಬನನ್ನು ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ. ದೀಪಕ್‌ ಯಾದವ್‌ ಅಲಿಯಾಸ್‌ ಕಾರು ಹುಲಸ್‌ ಯಾದವ್‌ ಎಂಬಾತನೇ ಬಂಧಿತ ನಕ್ಸಲ್​.

ಜಾರ್ಖಂಡ್‌ನ ಹಜಾರಿಬಾಗ್‌ನ ನಿವಾಸಿಯಾಗಿರುವ ದೀಪಕ್‌ ಯಾದವ್‌ ತಲೆಗೆ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಅಲ್ಲದೇ, ಜಾರ್ಖಂಡ್‌ ಸರ್ಕಾರ ಈತನನ್ನು ಮೋಸ್ಟ್ ವಾಂಟೆಡ್ ನಕ್ಸಲ್​ ಎಂದೂ ಪ್ರಕಟಿಸಿತ್ತು.

ಚಿಕಿತ್ಸೆಗೆ ಬಂದು ಸಿಕ್ಕಿಬಿದ್ದ ನಕ್ಸಲ್​: 45 ವರ್ಷದ ಕಾರು ಹುಲಸ್‌ ಯಾದವ್‌ ತನ್ನ ಕಾಲಿಗೆ ಗಾಯವಾಗಿದ್ದು, ಇದರ ಚಿಕಿತ್ಸೆಗೆಂದು ಜಾರ್ಖಂಡ್‌ನಿಂದ ಮಹಾರಾಷ್ಟ್ರಕ್ಕೆ ಬಂದಿದ್ದ. ರಾಜ್ಯ ರಾಜಧಾನಿ ಮುಂಬೈನಿಂದ ಕೇವಲ 50 ಕಿಲೋ ಮೀಟರ್​ ದೂರದಲ್ಲಿರುವ ಪಲ್ಘಾರ್​ ಜಿಲ್ಲೆಯ ನಲಸೋಪಾರಾದ ಧನಿವ್ ಬಾಗ್ ರಾಮ್ ನಗರ ಪ್ರದೇಶದಲ್ಲಿ ಉಳಿದುಕೊಂಡಿದ್ದ ಎಂದು ಹೇಳಲಾಗಿದೆ.

  • I congratulate ATS Maharashtra team for a successful early morning operation in which a top naxal leader Karu Yadav was apprehended from Nalasopara, on whom there was a bounty of ₹ 15 lakh !
    Keep it up team Maharashtra 👍🏼! pic.twitter.com/FWkXgm6weg

    — Devendra Fadnavis (@Dev_Fadnavis) September 18, 2022 " class="align-text-top noRightClick twitterSection" data=" ">

ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳದ ಪೊಲೀಸರು ದಾಳಿ ಮಾಡಿ, ನಕ್ಸಲ್​​ ಕಾರು ಹುಲಸ್‌ ಯಾದವ್‌ನನ್ನು ಬಂಧಿಸಿದೆ. 2004ರಿಂದ ಜಾರ್ಖಂಡ್​ನಲ್ಲಿ ನಕ್ಸಲ್​ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ. ಎರಡು ತಿಂಗಳಿಂದ ನಲಸೋಪಾರಾದಲ್ಲಿ ನೆಲೆಸಿದ್ದ ಎಂದು ಎಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲ್‌ ನಾಯಕ ಕಾರು ಹುಲಸ್‌ ಯಾದವ್‌ ಬಂಧನದ ಬಗ್ಗೆ ಈಗಾಗಲೇ ಜಾರ್ಖಂಡ್​ನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ನಕ್ಸಲ್​ನನ್ನು ಸ್ಥಳೀಯ ಕೋರ್ಟ್​ಗೆ ಹಾಜರುಪಡಿಸಿದ ನಂತರ ಜಾರ್ಖಂಡ್​ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಮಹಾರಾಷ್ಟ್ರ ಪೊಲೀಸರು ವಿವರಿಸಿದ್ದಾರೆ.

ಇದನ್ನೂ ಓದಿ: ಗುಜರಾತ್​ನ ಮುಂದ್ರಾ ಬಂದರಿನಲ್ಲಿ 48 ಕೋಟಿ ಮೌಲ್ಯದ ಇ ಸಿಗರೇಟ್​ಗಳ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.