ನಾಶಿಕ್(ಮಹಾರಾಷ್ಟ್ರ): ಹಸಿವಿನಿಂದ ಕಂಗೆಟ್ಟಿದ್ದ ಚಿರತೆವೊಂದು ಬೆಕ್ಕನ್ನು ಬೆನ್ನಟ್ಟಿ ಹೋಗಿದ್ದ ಸಂದರ್ಭದಲ್ಲಿ ಎರಡು ಬಾವಿಯಲ್ಲಿ ಬಿದ್ದಿರುವ ಘಟನೆ ನಾಶಿಕ್ನಲ್ಲಿ ನಡೆದಿದೆ. ಇದರ ದೃಶ್ಯಾವಳಿ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಾವಿಯಲ್ಲಿ ಎರಡು ಪ್ರಾಣಿಗಳು ಬಿದ್ದಿರುವ ಕಾರಣ, ಕೆಲಹೊತ್ತು ಅಲ್ಲೇ ಕಾಲ ಕಳೆದಿವೆ. ಇದಾದ ಬಳಿಕ ಅರಣ್ಯ ಸಿಬ್ಬಂದಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅವುಗಳನ್ನು ರಕ್ಷಣೆ ಮಾಡಿದ್ದಾರೆ. ಚಿರತೆಯನ್ನ ಅರಣ್ಯ ಪ್ರದೇಶಕ್ಕೆ ಬಿಟ್ಟು ಬದಿರುವುದಾಗಿ ಅರಣ್ಯಾಧಿಕಾರಿ ಪಂಕಜ್ ಗರ್ಗ್ ತಿಳಿಸಿದ್ದಾರೆ.
ಬಾವಿಯಲ್ಲಿ ಬಿದ್ದ ಸಂದರ್ಭದಲ್ಲಿ ಚಿರತೆಯು ಬೆಕ್ಕಿನ ಮೇಲೆ ದಾಳಿಗೆ ಮುಂದಾದಾಗ, ಬೆಕ್ಕಿನಿಂದಲೂ ಪ್ರತಿರೋಧ ವ್ಯಕ್ತವಾಗಿದೆ.