ETV Bharat / bharat

1998ರ ರಸ್ತೆ ಕಾಮಗಾರಿ ಯೋಜನೆ: 5 ಕೋಟಿ ಬಾಕಿ ಹಣಕ್ಕೆ 300 ಕೋಟಿ ಬಡ್ಡಿ ಪಾವತಿಸಲು ಸರ್ಕಾರಕ್ಕೆ ಆದೇಶ

author img

By

Published : Jan 4, 2023, 3:28 PM IST

1998ರ ರಸ್ತೆ ಕಾಮಗಾರಿ- ಗುತ್ತಿಗೆದಾರನಿಗೆ ಪಾವತಿಸಬೇಕಿದ್ದ 5 ಕೋಟಿ ಹಣಕ್ಕೆ 300 ಕೋಟಿ ಬಡ್ಡಿ - ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ ಸರ್ಕಾರ

Maha govt pays Rs 300 crore interest to contractor for bridge project worth Rs 226 crore
1998ರ ರಸ್ತೆ ಕಾಮಗಾರಿ ಯೋಜನೆ: 5 ಕೋಟಿ ಬಾಕಿ ಹಣಕ್ಕೆ 300 ಕೋಟಿ ಬಡ್ಡಿ ಪಾವತಿಸಲು ಸರ್ಕಾರಕ್ಕೆ ಆದೇಶ

ಮುಂಬೈ (ಮಹಾರಾಷ್ಟ್ರ) : ರಸ್ತೆ ಕಾಮಗಾರಿ ಯೋಜನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬಹುಕೋಟಿ ಬಡ್ಡಿ ಪಾವತಿಸುವಂತೆ ಸುಪ್ರೀಂ ಕೋರ್ಟ್​ ಆದೇಶಿಸಿದೆ. ವಾರ್ಧಾ ಜಿಲ್ಲೆಯ ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಸರ್ಕಾರವು 5. 71 ಕೋಟಿ ರೂ.ಗಳನ್ನು ಪಾವತಿ ಮಾಡಬೇಕಿರುವ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಕಾನೂನು ಹೋರಾಟದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, 5 ಕೋಟಿ ರೂಪಾಯಿ ಅಸಲು ಮೊತ್ತಕ್ಕೆ ಸುಮಾರು 300 ಕೋಟಿ ರೂಪಾಯಿ ಬಡ್ಡಿಯನ್ನು ಪಾವತಿಸಬೇಕಾಗಿ ಬಂದಿದೆ.

ಪ್ರಕರಣದ ಹಿನ್ನೆಲೆ : ಖರೆ ಮತ್ತು ತಾರ್ಕುಂಡೆ ಇನ್ಫ್ರಾಸ್ಟ್ರಕ್ಚರ್ ಕಂಪನಿಯು 1997 ರ ಅಕ್ಟೋಬರ್​ನಲ್ಲಿ ವರ್ಧಾ ಜಿಲ್ಲೆಯ ಜಾಮ್‌ನಿಂದ ಚಂದ್ರಾಪುರ ಜಿಲ್ಲೆಯ ವರೋರಾಗೆ ಸರಣಿ ರಸ್ತೆ, ಸೇತುವೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆದಾರರು ಈ ಕಾಮಗಾರಿಯನ್ನು 226 ಕೋಟಿ ರೂಪಾಯಿ ವೆಚ್ಚದಲ್ಲಿ 1998 ಅಕ್ಟೋಬರ್ ರಲ್ಲಿ ಪೂರ್ಣಗೊಳಿಸಿದ್ದರು. ಈ ಕಾಮಗಾರಿ ಮುಗಿದ ಬಳಿಕ ಟೋಲ್ ವಸೂಲಿ ನಿಲ್ಲಿಸಿ ರಸ್ತೆ, ಸೇತುವೆಯನ್ನು ಸಾರ್ವಜನಿಕ ಇಲಾಖೆಗೆ ವರ್ಗಾಯಿಸಲಾಗಿತ್ತು.

ಗುತ್ತಿದಾರನಿಗೆ 5 ಕೋಟಿ ಪಾವತಿಸುವಂತೆ ಆದೇಶ : ಈ ಕಾಮಗಾರಿಯ ಬಿಲ್ ಪಾವತಿಸದ ಕಾರಣ ಗುತ್ತಿಗೆದಾರರು ಮಧ್ಯಸ್ಥಿಕೆಗೆ ಒತ್ತಾಯಿಸಿದರು. ಅದರಂತೆ ನಿವೃತ್ತ ಮುಖ್ಯ ಎಂಜಿನಿಯರ್ ಆರ್.ಎಚ್. ತದ್ವಿ ಅವರನ್ನು ಮಧ್ಯಸ್ಥರದಾರನ್ನಾಗಿ ನೇಮಿಸಲಾಯಿತು. ಈ ಪ್ರಕರಣದಲ್ಲಿ 2004ರ ಮಾರ್ಚ್ 4ರಂದು ಮಧ್ಯಸ್ಥಿಕೆದಾರರು ಗುತ್ತಿಗೆದಾರರಿಗೆ ತಿಂಗಳಿಗೆ ಶೇ.25ರ ಬಡ್ಡಿ ಸಮೇತ ರೂ.5 ಕೋಟಿ 71 ಲಕ್ಷ ಪಾವತಿಸುವಂತೆ ಆದೇಶಿಸಿದ್ದರು.

ಈ ಆದೇಶದ ವಿರುದ್ಧ ಸರ್ಕಾರವು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2006 ರ ಡಿಸೆಂಬರ್ 15ರಂದು ಮಧ್ಯಸ್ಥರ ಆದೇಶವನ್ನು ಎತ್ತಿಹಿಡಿಯಿತು. ಜೊತೆಗೆ ಅಸಲು ಮೊತ್ತದ ಬಡ್ಡಿಯನ್ನು ಶೇ. 25 ರಿಂದ 18 ಕ್ಕೆ ಇಳಿಸಲು ಆದೇಶಿಸಿತು.

ಇದನ್ನೂ ಓದಿ :ಹತ್ಯೆ ಪ್ರಕರಣ: ಅಮಾನತಾಗಿರುವ ಬಿಜೆಪಿ ಮುಖಂಡನ ಹೋಟೆಲ್ ನೆಲಸಮ

5 ಕೋಟಿಗೆ 300 ಕೋಟಿ ಬಡ್ಡಿ ಪಾವತಿಗೆ ಆದೇಶ : ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಸರ್ಕಾರವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. 2021ರ ಫೆಬ್ರವರಿ 18ರಂದು ಹೈಕೋರ್ಟ್ ಮಧ್ಯಸ್ಥರ ತೀರ್ಪನ್ನು ಎತ್ತಿಹಿಡಿದಿತ್ತು. ಮತ್ತೆ ಸರ್ಕಾರವು ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅರ್ಜಿಯನ್ನು ಸಲ್ಲಿಸಿತು. ವಾದ ಪ್ರತಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ 2021ರ ಡಿಸೆಂಬರ್ 1ರಂದು ಅರ್ಜಿಯನ್ನು ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿದಿತ್ತು.

ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ ಸರ್ಕಾರ : ಸರ್ಕಾರದ ಮನವಿಯನ್ನು ತಿರಸ್ಕರಿಸಿದ ನಂತರ, ಅಂತಿಮವಾಗಿ 2022ರ ಡಿಸೆಂಬರ್ 13 ರಂದು ರಾಜ್ಯ ಸಚಿವ ಸಂಪುಟವು ಕಾಮಗಾರಿ ಮೂಲಕ ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟ ಉಂಟು ಮಾಡಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ.

ಇದನ್ನೂ ಓದಿ : ಆರೇ ಗಂಟೆಯಲ್ಲಿ 18 ಲಕ್ಷ ಕಳೆದುಕೊಂಡ ಸಾಫ್ಟ್​ವೇರ್​ ಇಂಜಿನಿಯರ್​..ಯುವತಿಗೆ ವಂಚನೆ ಮಾಡಿದ ಸೈಬರ್​ ಅಪರಾಧಿಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.