ನಾಸಿಕ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಸಿಕ್‌ನ ವೈದ್ಯರೊಬ್ಬರು ತಮ್ಮ ಎರಡನೇ ಪತ್ನಿಯು ಅರಿವಳಿಕೆ (ಅನಸ್ತೇಶಿಯಾ) ಚುಚ್ಚುಮದ್ದು ನೀಡಿದ್ದರಿಂದ ಸಾವನ್ನಪ್ಪಿದ್ದಾರೆ. ಅನಸ್ತೇಶಿಯಾ ಇಂಜೆಕ್ಷನ್ ಕೊಟ್ಟ ಬಳಿಕ ಆ ವೈದ್ಯ 33 ದಿನ ದಿನಗಳ ಕೋಮಾಕ್ಕೆ ಜಾರಿದ್ದರು.
ಮೃತರನ್ನು ಸತೀಶ್ ಕೇಶವರಾವ್ ದೇಶಮುಖ್ ಎಂದು ಗುರುತಿಸಲಾಗಿದೆ. ಎರಡನೇ ಪತ್ನಿಯಾದ ಸುಹಾಸಿನಿ ಈ ಕೃತ್ಯ ಎಸಗಿದ್ದಾರೆ. ಸುಹಾಸಿನಿಗೆ ಅರುಣ್ ಕಾಂಡೇಕರ್ ಎಂಬುವವರೊಂದಿಗೂ ಸಂಬಂಧ ಇತ್ತು ಎನ್ನಲಾಗಿದೆ.
ಇದನ್ನೂ ಓದಿ: ಲಿಫ್ಟ್ ನೆಪದಲ್ಲಿ ಬೈಕ್ ಸವಾರನಿಗೆ ವಿಷದ ಇಂಜೆಕ್ಷನ್ ಚುಚ್ಚಿದ ಆರ್ಎಂಪಿ ವೈದ್ಯ: ಪತ್ನಿ ಫೋನ್ ಕಾಲ್ನಲ್ಲಿತ್ತು ಕೊಲೆ ರಹಸ್ಯ!
ಇದೇ ವಿಷಯವಾಗಿ ಸೆಪ್ಟೆಂಬರ್ 10ರಂದು ಸತೀಶ್ ದೇಶಮುಖ್ ಅವರ ಆಸ್ಪತ್ರೆಯಲ್ಲಿ ಸುಹಾಸಿನಿ ಮತ್ತು ಆಕೆಯ ಗೆಳೆಯ ಅರುಣ್ ಕಾಂಡೇಕರ್ ಇಬ್ಬರು ಸೇರಿಕೊಂಡು ಸತೀಶ್ ಅವರೊಂದಿಗೆ ಜಗಳವಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಾಗ್ವಾದದ ನಂತರ ಅರುಣ್ ಆಸ್ಪತ್ರೆಯಿಂದ ಹೊರಟು ಹೋಗಿದ್ದರು. ಇತ್ತ, ಸತೀಶ್ ದೇಶಮುಖ್ ರೆಸ್ಟ್ ರೂಂಗೆ ತೆರಳಿದ್ದರು. ಸತೀಶ್ ದೇಶಮುಖ್ ಅವರನ್ನು ಹಿಂಬಾಲಿಸಿಕೊಂಡ ಸುಹಾಸಿನಿ ರೆಸ್ಟ್ ರೂಂಗೆ ಹೋಗಿ ಅನಸ್ತೇಶಿಯಾ ಇಂಜೆಕ್ಷನ್ ಚುಚ್ಚಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅನಸ್ತೇಶಿಯಾ ಇಂಜೆಕ್ಷನ್ ಕೊಟ್ಟಿರುವ ವಿಷಯವನ್ನು ಸತೀಶ್ ತಮ್ಮ ಮಗ ಪರೀಕ್ಷಿತ್‌ಗೆ ತಿಳಿಸಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪರೀಕ್ಷಿತ್ ದೂರು ನೀಡಿದ್ದಾರೆ. ಸದ್ಯ ಸುಹಾಸಿನಿ ಮತ್ತು ಆಕೆಯ ಗೆಳೆಯ ಅನಿಲ್ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಪಕ್ಕದ ಮನೆಯ ಟೆರೇಸ್ ಮೇಲಿದ್ದವನಿಗೆ ಗುಂಡಿಕ್ಕಿ ಕೊಲೆ: ಕಾರಣ ನಿಗೂಢ!