ETV Bharat / bharat

22 ಟನ್‌ ​ಆಮ್ಲಜನಕ ಸಾಗಿಸುತ್ತಿದ್ದ ಟ್ಯಾಂಕರ್​ ಅಪಘಾತ.. - ಆಮ್ಲಜನಕ ಸಾಗಿಸುತ್ತಿದ್ದ ಟ್ಯಾಂಕರ್​ ಅಪಘಾತ

ಮಧ್ಯಪ್ರದೇಶದ ಭೋಪಾಲ್‌ಗೆ 22 ಟನ್ ​ಲಿಕ್ವಿಡ್ ಮೆಡಿಕಲ್​ ಆಮ್ಲಜನಕವನ್ನು ಸಾಗಿಸುತ್ತಿದ್ದ ಟ್ಯಾಂಕರ್​ ಅಪಘಾತಕ್ಕೊಳಗಾಗಿದೆ. ಆದರೆ ಆಕ್ಸಿಜನ್​ ಸೋರಿಕೆಯಾಗಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಟ್ಯಾಂಕರ್​ ಅಪಘಾತ
ಟ್ಯಾಂಕರ್​ ಅಪಘಾತ
author img

By

Published : May 17, 2021, 7:29 PM IST

ಸಾಗರ್​: ಜಾರ್ಖಂಡ್‌ನ ಬೊಕಾರೊದಿಂದ ಭೋಪಾಲ್‌ಗೆ 22 ಟನ್ ಮೆಡಿಕಲ್​ ಲಿಕ್ವಿಡ್​ ಆಮ್ಲಜನಕವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಸೋಮವಾರ ಮುಂಜಾನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಗರಕೋಟಾ ಪಟ್ಟಣದ ಬಳಿ ಉರುಳಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೋಪಾಲ್‌ನಿಂದ 220 ಕಿಲೋಮೀಟರ್ ದೂರದಲ್ಲಿರುವ ಸಾಗರ್-ದಾಮೋಹ್ ರಸ್ತೆಯಲ್ಲಿರುವ ಚನೌವಾ ಗ್ರಾಮದಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಯಾವುದೇ ಸೋರಿಕೆ ಕಂಡುಬಂದಿಲ್ಲ ಅಥವಾ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ತಜ್ಞರ ತಂಡ ಭೋಪಾಲ್‌ನಿಂದ ಆಗಮಿಸಿ ನಂತರ ಟ್ಯಾಂಕರ್‌ನಲ್ಲಿದ್ದ ಲಿಕ್ವಿಡ್ ಮೆಡಿಕಲ್​​ ಆಮ್ಲಜನಕವನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಪ್ರಾಣಿಗಳಿಗೆ ವಾಹನ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ವಾಹನ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಸ್ಥಳದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಕಾರ್ಯಾಚರಣೆ ಕೈಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.