ಹೋಶಂಗಾಬಾದ್: ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ಮಾಲೀಕತ್ವದ ವಿವಾದದಲ್ಲಿ ಸಿಲುಕಿರುವ ನಾಯಿ ಈಗ ಡಿಎನ್‌ಎ ಪರೀಕ್ಷೆಗೆ ಒಳಗಾಗಲಿದೆ.
ಶಾದಾಬ್ ಖಾನ್ ಮತ್ತು ಕೃತಿಕ್ ಶಿವರೆ ಎಂಬ ಇಬ್ಬರು ವ್ಯಕ್ತಿಗಳು ಈ ಶ್ವಾನ ತನ್ನದು ಎಂದು ಪಟ್ಟು ಹಿಡಿದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶಾದಾಬ್, 'ಈ ನಾಯಿ ತನ್ನ ಮುದ್ದಿನ 'ಕೊಕೊ'. ಮೂರು ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದೆ' ಎನ್ನುತ್ತಾನೆ. ಕೃತಿಕ್ ಶಿವರೆ, 'ಇದನ್ನು ನಾನು ಹಲವು ದಿನಗಳಿಂದ ಸಾಕುತ್ತಿದ್ದೇನೆ. ಇದಕ್ಕೆ ನಾನು 'ಟೈಗರ್' ಎಂದು ಹೆಸರಿಟ್ಟಿದ್ದೇನೆ' ಎಂಬುದು ಇವನ ವಾದ. ಈ ಇಬ್ಬರಲ್ಲಿ ಓರ್ವ ನಾಯಿಯ ಡಿಎನ್‌ಎ ಪರೀಕ್ಷೆಗೆ ಮನವಿ ಮಾಡಿದ್ದಾನೆ.
ನಾಯಿಯನ್ನು ಕಾಗದದ ಆಧಾರದ ಮೇಲೆ ಶಾದಾಬ್‌ಗೆ ಹಸ್ತಾಂತರಿಸಿದ್ದರು. ಈ ನಂತರ ನಾಯಿ ತನಗೆ ಸೇರಿದೆ ಎಂದು ಕೃತಿಕ್ ಪಟ್ಟು ಹಿಡಿದ. ಈಗ ಈ ಇಬ್ಬರ ಬಳಿ ನಾಯಿಯ ಮಾಲೀಕತ್ವದ ಪತ್ರವಿದೆ. ನಿಜವಾದ ಮಾಲೀಕರು ಯಾರೆಂಬುದು ಪೊಲೀಸರಿಗೆ ತಲೆ ನೋವಾಗಿತ್ತು. ಶಾದಾಬ್, ನಾಯಿಗೆ ಡಿಎನ್‌ಎ ಪರೀಕ್ಷೆಗೆ ಒಳಪಡಿಸುವಂತೆ ಕೋರಿದ್ದಾರೆ. ಅವರ ಮನವಿಯ ಮೇರೆಗೆ, ಪೊಲೀಸ್ ಟಿಐ ಹೇಮಂತ್ ಶ್ರೀವಾಸ್ತವ ಅವರು ನಾಯಿಯಿಂದ ರಕ್ತದ ಮಾದರಿ ತೆಗೆದುಕೊಂಡು ಡಿಎನ್‌ಎ ಪರೀಕ್ಷೆ ನಡೆಸಲು ಒಪ್ಪಿಕೊಂಡಿದ್ದಾರೆ.
ಹೋಶಂಗಾಬಾದ್‌ನ ವೆಟ್ಸ್ ತಂಡವು ನಾಯಿಯನ್ನು ಸೈರ್‌ನ ಮಾದರಿ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಡಿಎನ್‌ಎ ಪರೀಕ್ಷೆಯ ನಂತರ ನೈಜ ಮಾಲೀಕರನ್ನು ಪತ್ತೆ ಹಚ್ಚಿ ಹಸ್ತಾಂತರಿಸಲಾಗುತ್ತದೆ. ಅಲ್ಲಿಯ ತನಕ ನಾಯಿ ಪೊಲೀಸರ ವಶದಲ್ಲಿದೆ. ವೈದ್ಯಕೀಯ ತಪಾಸಣೆಯಲ್ಲಿ ನಾಯಿಗೆ ಜ್ವರ ಮತ್ತು ಇತರ ಅನಾರೋಗ್ಯದಿಂದ ಬಳಲುತ್ತಿತ್ತು. ಹೀಗಾಗಿ ಅದನ್ನು ಪಶುವೈದ್ಯರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.