ಗ್ವಾಲಿಯರ್ (ಮಧ್ಯಪ್ರದೇಶ): ಇಲ್ಲಿನ ಮೋತಿಜಿಲ್ನಲ್ಲಿನ ವಿದ್ಯುತ್ ಕೇಂದ್ರ ತಪಾಸಣೆಗೆ ಆಗಮಿಸಿದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸ್ವತಃ ತಾವೇ ಟ್ರಾನ್ಸ್ಫಾರ್ಮರ್ ಏರಿ ಸ್ವಚ್ಛಗೊಳಿಸಿದ್ದಾರೆ. ನಗರದಲ್ಲಿ ಪ್ರತಿ ದಿನ ವಿದ್ಯುತ್ ಕಡಿತವಾಗುತ್ತಿದ್ದ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆ ತಪಾಸಣೆಗೆ ಆಗಮಿಸಿದ್ದರು.
ಈ ವೇಳೆ ಟ್ರಾನ್ಸ್ಫಾರ್ಮರ್ ಬಳಿ ಗಿಡವೊಂದು ಬೆಳೆದಿತ್ತು. ಇದರಿಂದ ಟ್ರಾನ್ಸ್ಫಾರ್ಮರ್ ಮೇಲೆ ಕಸಕಡ್ಡಿ ಬಿದ್ದಿದ್ದವು. ಇದನ್ನು ಕಂಡ ಸಚಿವರು ತಕ್ಷಣವೇ ಏಣಿ ತರಿಸಿ ತಾವೇ ಟ್ರಾನ್ಸ್ಫಾರ್ಮರ್ ಶುಚಿಗೊಳಿಸಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ರಾಜ್ಯದ ಮುಖ್ಯ ಕಚೇರಿಯ ನಿರ್ವಹಣೆಯೇ ಈ ರೀತಿಯಿಂದ ಕೂಡಿದ್ದರೆ, ನಗರದ ಒಳ ಭಾಗದ ಕೇಂದ್ರಗಳು ಇನ್ನೆಷ್ಟು ಕಳಪೆಯಾಗಿರಬಹುದು ಎಂದು ಪ್ರಶ್ನಿಸಿದರು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಓದಿ: Positive : ಲಸಿಕೆ ಹಾಕಿಸಿಕೊಂಡವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.75-80% ಕಡಿಮೆ - ಡಾ.ವಿ ಕೆ ಪಾಲ್