ಗ್ವಾಲಿಯಾರ್(ಮಧ್ಯಪ್ರದೇಶ): ಒಬ್ಬರನ್ನು ಹೋಲುವಂತೆ ಮತ್ತೊಬ್ಬರು ಇರುವುದು ಅಪರೂಪವೇನಲ್ಲ. ಪ್ರಧಾನಿ ಮೋದಿಯನ್ನು ಹೋಲುವ ವ್ಯಕ್ತಿಯ ಭಾವಚಿತ್ರ ಕೆಲವು ವರ್ಷಗಳ ಹಿಂದೆ ವೈರಲ್ ಆಗಿತ್ತು. ಈಗ ಈ ಸಾಲಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರೂ ಸೇರಿಕೊಂಡಿದ್ದಾರೆ.
ಹೌದು, ಮಧ್ಯಪ್ರದೇಶದ ಗ್ವಾಲಿಯಾರ್ನಲ್ಲಿ ಚಾಟ್ ಮಾರುತ್ತಿರುವ ವ್ಯಕ್ತಿಯೋರ್ವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಂತೆಯೇ ಇದ್ದಾರೆ.
- " class="align-text-top noRightClick twitterSection" data="">
ದಿಲ್ ಸೆ ಫುಡ್ಡೀ (Dil Se Foodie) ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಹೊಂದಿರುವ ಫುಡ್ ಬ್ಲಾಗರ್ ಕರಣ್ ದುವಾ, ಈ ವಿಡಿಯೋವನ್ನು ಹಂಚಿಕೊಂಡಿದ್ದು 2 ಲಕ್ಷ ಮಂದಿ ವೀಕ್ಷಿಸಿದ್ದಾರೆ. 9.3 ಲೈಕ್ಗಳು ಬಂದಿದ್ದು, ನೂರಾರು ಕಮೆಂಟ್ಗಳೂ ಸಂದಿವೆ.
ಅರವಿಂದ್ ಕೇಜಿವ್ರಾಲ್ನಂತೆ ಕಾಣುವ ವ್ಯಕ್ತಿ ಗುಪ್ತಾ ಚಾಟ್ ಎಂಬ ಹೆಸರಲ್ಲಿ ತಿನಿಸುಗಳನ್ನು ಮಾರಾಟ ಮಾಡುತ್ತಾರೆ. ಗ್ವಾಲಿಯಾರ್ನ ಮೋತಿ ಮಹಲ್ ಎದುರಿಗೆ ಇರುವ ಫೂಲ್ ಬಾಘ್ನಲ್ಲಿ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಇವರು ಚಾಟ್ಸ್ ಮಾರುತ್ತಾರೆ.
ಇದಕ್ಕೂ ಮೊದಲು ತುಂಬಾ ಮಂದಿ ನನ್ನನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೆಯೇ ಇದ್ದಿಯಾ ಎಂದು ಹೇಳುತ್ತಿದ್ದರು. ಹಿಂದಿನ ವಿಡಿಯೋಗಳಲ್ಲೂ ಕೆಲವರು ಅರವಿಂದ್ ಕೇಜ್ರಿವಾಲ್ರಂತೆಯೇ ಇರುವುದಾಗಿ ಕಮೆಂಟ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಓರ್ವ ವ್ಯಕ್ತಿ ಕಮೆಂಟ್ ಮಾಡಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ವ್ಯಕ್ತಿಯನ್ನು ಒಂದು ಬಾರಿ ಭೇಟಿಯಾಗಬೇಕು ಎಂದಿದ್ದಾನೆ. ಇನ್ನೂ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವ್ಯಕ್ತಿಯೊಬ್ಬರಿಗೆ ಬಂಗಲೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಮಹಾ ಸರ್ಕಾರದ ಸಚಿವರಿಗೆ ಜಾಮೀನು