ಅಹಮದಾಬಾದ್: ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಮಾಧವ್ಸಿನ್ಹ ಸೋಲಂಕಿ ಅವರು ತಮ್ಮ 93 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
1991-92ರಲ್ಲಿ ಅವರು ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಮಾಜಿ ಸಿಎಂ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಈ ಬಗ್ಗೆ ಟ್ವೀಟ್ ಮಾಡಿದ್ದು "ಮಾಧವ್ಸಿನ್ಹ ಸೋಲಂಕಿ ಅವರು ಅಸಾಧಾರಣ ನಾಯಕರಾಗಿದ್ದರು. ಗುಜರಾತ್ ರಾಜಕೀಯದಲ್ಲಿ ದಶಕಗಳಿಂದ ಪ್ರಮುಖ ಪಾತ್ರ ವಹಿಸಿದ್ದರು. ಸಮಾಜಕ್ಕೆ ಅವರು ಮಾಡಿದ ಸಮೃದ್ಧ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರ ನಿಧನದಿಂದ ದುಃಖಿತನಾಗಿದ್ದು, ಅವರ ಪುತ್ರ ಭರತ್ ಸೋಲಂಕಿ ಜೊತೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದ್ದೇನೆ. ಓಂ ಶಾಂತಿ." ಎಂದಿದ್ದಾರೆ.
-
PM Narendra Modi condoles the death of Madhav Singh Solanki, senior Congress leader and former Chief Minister of Gujarat.
— ANI (@ANI) January 9, 2021 " class="align-text-top noRightClick twitterSection" data="
"He will be remembered for his rich service to society. Saddened by his demise", tweets PM Modi https://t.co/SwWmEfHDYO pic.twitter.com/85cbAYpxYo
">PM Narendra Modi condoles the death of Madhav Singh Solanki, senior Congress leader and former Chief Minister of Gujarat.
— ANI (@ANI) January 9, 2021
"He will be remembered for his rich service to society. Saddened by his demise", tweets PM Modi https://t.co/SwWmEfHDYO pic.twitter.com/85cbAYpxYoPM Narendra Modi condoles the death of Madhav Singh Solanki, senior Congress leader and former Chief Minister of Gujarat.
— ANI (@ANI) January 9, 2021
"He will be remembered for his rich service to society. Saddened by his demise", tweets PM Modi https://t.co/SwWmEfHDYO pic.twitter.com/85cbAYpxYo
ಮತ್ತೊಂದು ಟ್ವೀಟ್ನಲ್ಲಿ "ರಾಜಕೀಯದ ಹೊರತಾಗಿ, ಮಾಧವ್ಸಿನ್ಹ ಸೋಲಂಕಿ ಅವರು ಓದುವುದನ್ನು ಆನಂದಿಸುತ್ತಿದ್ದರು ಮತ್ತು ಸಂಸ್ಕೃತಿಯ ಬಗ್ಗೆ ಒಲವು ಹೊಂದಿದ್ದರು. ನಾನು ಅವರನ್ನು ಭೇಟಿಯಾದಾಗ ಅಥವಾ ಅವರೊಂದಿಗೆ ಮಾತನಾಡುವಾಗಲೆಲ್ಲಾ ನಾವು ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದೆವು ಮತ್ತು ಅವರು ಇತ್ತೀಚೆಗೆ ಓದಿದ ಹೊಸ ಪುಸ್ತಕದ ಬಗ್ಗೆ ಹೇಳುತ್ತಿದ್ದರು." ಎಂದು ತಮ್ಮ ಒಡನಾಟದ ಬಗ್ಗೆ ನೆನಪಿಸಿಕೊಂಡಿದ್ದಾರೆ.