ETV Bharat / bharat

ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ದೇಶದ ಮೊದಲ ಮಹಿಳಾ ಈಜುಗಾರ್ತಿ ಮಾನಾ ಪಟೇಲ್​!! - ಯುನಿವರ್ಸಾಲಿಟಿ ಕೋಟಾ

100 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮೂವರು ಈಜುಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ..

Maana Patel
ಮಾನಾ ಪಟೇಲ್
author img

By

Published : Jul 2, 2021, 9:31 AM IST

ನವದೆಹಲಿ : ಟೋಕಿಯೋ ಒಲಿಂಪಿಕ್ಸ್‌ಗೆ ಶುಕ್ರವಾರ ಅರ್ಹತೆ ಪಡೆದ ಮೊದಲ ಮಹಿಳಾ ಮತ್ತು ಮೂರನೇ ಭಾರತೀಯ ಈಜುಗಾರ ಎಂಬ ಹೆಗ್ಗಳಿಕೆಗೆ ಈಜುಗಾರ್ತಿ ಮಾನಾ ಪಟೇಲ್ ಪಾತ್ರರಾಗಿದ್ದಾರೆ. ಪಟೇಲ್ ಯುನಿವರ್ಸಾಲಿಟಿ ಕೋಟಾದಡಿಯಲ್ಲಿ ಈ ಸ್ಥಾನ ಪಡೆದಿದ್ದಾರೆ.

ಶ್ರೀಹರಿ ನಟರಾಜ್ ಮತ್ತು ಸಾಜನ್ ಪ್ರಕಾಶ್ ಬಳಿಕ ಟೋಕಿಯೋ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತದ ಮೂರನೇ ಭಾರತೀಯ ಈಜುಗಾರ್ತಿ ಎಂಬ ಹೆಗ್ಗಳಿಕೆ ಮಾನಾ ಪಾತ್ರರಾಗಿದ್ದಾರೆ.

ಇನ್ನು, ಈ ಸಂಬಂಧ ಟ್ವೀಟ್​ ಮಾಡಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು, "ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಮಹಿಳಾ ಮತ್ತು 3ನೇ ಭಾರತೀಯ ಈಜುಗಾರ್ತಿ ಮಾನಾ ಪಟೇಲ್​ಗೆ ಶುಭಾಶಯ" ಎಂದಿದ್ದಾರೆ.

ಇದನ್ನು ಓದಿ: "ಮಾಹಿ ಎಲ್ಲರ ಹೀರೋ".. ಇದು ಧೋನಿ ಹುಟ್ಟುಹಬ್ಬಕ್ಕೆ ಕಾಮನ್​ ಡಿಪಿ ಬಿಡುಗಡೆ ಮಾಡಿದ ಕಿಚ್ಚನ ನುಡಿ

ಇನ್ನು, ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್‌ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ. ಶ್ರೀಹರಿ ಇತ್ತೀಚೆಗಷ್ಟೇ ಇಟಲಿಯ ಚಾಂಪಿಯನ್‌ಶಿಪ್‌ನ ಟೈಮ್‌ ಟ್ರಯಲ್‌ನಲ್ಲಿ ‘ಎ’ ವಿಭಾಗದ ಸಮಯವನ್ನು ಸಾಧಿಸಿದ್ದರು. 100 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಅವರು ಸ್ಪರ್ಧಿಸಲಿದ್ದಾರೆ.

ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮೂವರು ಈಜುಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. 200 ಮೀಟರ್‌ ಬಟರ್‌ಪ್ಲೈ ವಿಭಾಗದಲ್ಲಿ ಸಾಜನ್‌ ಪ್ರಕಾಶ್ ನೇರ ಅರ್ಹತೆ ಪಡೆಯುವ ಮೂಲಕ ಸಾಧನೆ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.